ಹೊಸ ವರ್ಷಕ್ಕೆ ಪಟಾಕಿ ಪ್ರದರ್ಶನ : ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ನೂರಾರು ಪಕ್ಷಿಗಳು…

ಹೊಸ ವರ್ಷದ ಸಂಭ್ರಮಕ್ಕೆ ನೂರಾರು ಪಕ್ಷಿಗಳು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಘಟನೆ ರೋಮ್ ನಗರದಲ್ಲಿ ಸಂಭವಿಸಿದೆ.

ಈ ಬಾರಿ ಹೊಸ ವರ್ಷದ ಸಂಭ್ರದಲ್ಲಿ ಮುಂದೆದ್ದ ದೇಶಗಳು ಒಂದಲ್ಲಾ ಎರಡಲ್ಲಾ. ಕೊರೊನಾ ವೈರಸ್ ನಿಂದ ಮನೆ ಸೇರಿದ್ದ ಮಂದಿ ಒಂದೆಡೆ ಸೇರಿ ಸಂಭ್ರಮಿಸಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಕೆಲ ದೇಶಗಳಲ್ಲಿ ಕೊರೊನಾ ಲೆಕ್ಕಿಸದೆ ಜನರನ್ನು ರಂಜಿಸಲು ನಾನಾ ಕಾರ್ಯಗಳು ನಡೆದಿವೆ. ಆದರೆ ಈ ಸಂಭ್ರಮಕ್ಕೆ ಮೂಕ ಪಕ್ಷಗಳು ಬಲಿಯಾಗಿವೆ. ಈ ನೋವಿನ ವಿಚಾರಕ್ಕೆ ಸಾಕ್ಷಿಯಾಗಿದ್ದು ರೋಮ್ ನಗರ.

ಹೌದು.. ಈ ಬಾರಿ ಹೊಸ ವರ್ಷವನ್ನು ರೋಮ್ ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಇಟಾಲಿಯನ್ ರಾಜಧಾನಿಯಲ್ಲಿ ಅನೇಕ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದರಿಂದ ನೂರಾರು ಪಕ್ಷಿಗಳು ಸಾವನ್ನಪ್ಪಿವೆ. ಇದನ್ನು ರೋಮ್ ಪಕ್ಷಿ ಪ್ರಿಯರು ‘ಹತ್ಯಾಕಾಂಡ’ ಎಂದು ಕರೆದಿದ್ದಾರೆ. ರೋಮ್‌ನ ಮುಖ್ಯ ರೈಲು ನಿಲ್ದಾಣದ ಸಮೀಪವಿರುವ ಬೀದಿಗಳಲ್ಲಿ ನೂರಾರು ಪಕ್ಷಿಗಳು ವಿಲವಿಲ ಅಂತ ಒದ್ದಾಡಿ ಪ್ರಾಣ ಬಿಟ್ಟಿವೆ. ಹೀಗೆ ಸತ್ತ ಪಕ್ಷಿಗಳ ರಾಶಿಯನ್ನು ತೋರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಪ್ರಾಣಿಗಳ ಸಂರಕ್ಷಣೆ ಅಂತಾರಾಷ್ಟ್ರೀಯ ಸಂಸ್ಥೆ ಹೇಳುವಂತೆ ಇದು ಎಲೆಗಳ ನೆರೆಹೊರೆಯಲ್ಲಿ ಪಟಾಕಿಗಳನ್ನು ವಿಶೇಷವಾಗಿ ಜೋರಾಗಿ ಪ್ರದರ್ಶಿಸಿದಕ್ಕೆ ಸಂಬಂಧಿಸಿದೆ ಎಂದು ಹೇಳಿದೆ.

“ಪಕ್ಷಿಗಳು ಪಟಾಕಿ ಶಬ್ದದ ಭಯದಿಂದ ಮರಣ ಹೊಂದಿವೆ. ಅಥವಾ ಪಟಾಕಿ ಶಬ್ದಕ್ಕೆ ಒಟ್ಟಿಗೆ ಹಾರಿ ಪರಸ್ಪರ ಡಿಕ್ಕಿ ಹೊಡೆದಿರಬೇಕು ಅಥವಾ ಪಟಾಕಿಗಳ ಶಬ್ದದಿಂದ ಗಾಬರಿಯಿಂದ ವಿದ್ಯುತ್ ತಂತಿಗಳಿಗೆ ತಾಗಿರಬಹುದು. ಇಲ್ಲವೇ  ಅಧಿಕ ಶಬ್ದಕ್ಕೆ ಹೃದಯಾಘಾತದಿಂದಲೂ ಸಾವನ್ನಪ್ಪಿರಬಹುದು” ಎಂದು ಸಂಸ್ಥೆಯ ವಕ್ತಾರ ಲೊರೆಡಾನಾ ಡಿಗ್ಲಿಯೊ ಹೇಳಿದ್ದಾರೆ.

ಪ್ರತಿ ವರ್ಷ ಪಟಾಕಿ ಪ್ರದರ್ಶನ ಕಾಡು ಮತ್ತು ಸಾಕು ಪ್ರಾಣಿಗಳಿಗೆ ತೊಂದರೆಯೊಂದಿಗೆ ಗಾಯವನ್ನು ಉಂಟುಮಾಡುತ್ತಿದೆ. ಆದರೆ ವೈಯಕ್ತಿಕ ಪಟಾಕಿ ಪ್ರದರ್ಶನಗಳಿಗೆ ರೋಮ್ ನಗರ ನಿಷೇಧಿಸಿತ್ತು. ಮಾತ್ರವಲ್ಲದೇ ರಾತ್ರಿ 10ಗಂಟೆಗೆ ವೈರಸ್ ನಿರ್ಬಂಧಗಳಿಂದಾಗಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಇದರ ಹೊರತಾಗಿಯೂ ಪಕ್ಷಿ ಸಾವು ಸಂಭವಿಸಿದೆ. ಇದನ್ನು ವ್ಯಾಪಕವಾಗಿ ವಿರೋಧಿಸಲಾಗುತ್ತಿದ್ದು, ನಿರ್ಲಕ್ಷವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights