ಆ್ಯಪ್ ನಿಷೇಧ: ಅಂತರರಾಷ್ಟ್ರೀಯ ಹೂಡಿಕೆದಾರರ ನ್ಯಾಯಸಮ್ಮತ ಮತ್ತು ಕಾನೂನು ಹಕ್ಕುಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಭಾರತದ್ದು!

ದೇಶದ “ಸಾರ್ವಭೌಮತ್ವ ಮತ್ತು ಸಮಗ್ರತೆ”ಗಾಗಿ ಚೀನಾದ ಮೂಲಕ 59 ಆ್ಯಪ್ ‌ಗಳನ್ನು ಭಾರತ ನಿಷೇಧಿಸಿದೆ. ಇದಕ್ಕೆ, ಚೀನಾ ಪ್ರತಿಕ್ರಿಯಿಸಿದ್ದು, ಭಾರತದ ನಡೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಅಂತರರಾಷ್ಟ್ರೀಯ ಹೂಡಿಕೆದಾರರ ಕಾನೂನುಬದ್ಧ ಮತ್ತು ಕಾನೂನು ಹಕ್ಕುಗಳನ್ನು ಎತ್ತಿಹಿಡಿಯುವ ಜವಬ್ದಾರಿಯೂ ಭಾರತಕ್ಕೆ ಇದೆ. ಅದನ್ನು ಮರೆಯುವಂತಿಲ್ಲ ಎಂದು ಹೇಳಿದರು.

ಪೂರ್ವ ಲಡಾಕ್‌ನಲ್ಲಿ ಚೀನಾದ ಸೈನ್ಯವು ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಸೈನಿಕರು ನಿಯೋಜಿಸಿರುವ ಹಾಗೂ ತೀವ್ರಗೊಳ್ಳುತ್ತಿರುವ ಉದ್ವಿಗ್ನ ಸ್ಥಿತಿಯ ಹಿನ್ನೆಲೆಯಲ್ಲಿ, ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದ ಟಿಕ್‌ಟಾಕ್, ಹೆಲೊ ಮತ್ತು ಯುಸಿ ಬ್ರೌಸರ್ ಸೇರಿದಂತೆ ಚೀನಾದ ಲಿಂಕ್‌ಗಳನ್ನು ಹೊಂದಿರುವ 59 ಅಪ್ಲಿಕೇಶನ್‌ಗಳನ್ನು ಭಾರತ ಸೋಮವಾರ ನಿಷೇಧಿಸಿದೆ.

ಚೀನಾದ ಅಪ್ಲಿಕೇಶನ್‌ಗಳ ಮೇಲೆ ಭಾರತದ ನಿಷೇಧದ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್, “ಭಾರತದ ಕಡೆಯಿಂದ ಹೊರಡಿಸಲಾದ ನೋಟಿಸ್‌ಗೆ ಸಂಬಂಧಿಸಿದಂತೆ ಚೀನಾವು ತೀವ್ರತರವಾದ ಕಾಳಜಿಯನ್ನು ವಹಿಸುತ್ತದೆ. ನಾವು ಭಾರತದ ನಡೆ ಮತ್ತು ಅದರಿಂದಾಗಿರುವ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ.” ಎಂದಿದ್ದಾರೆ.

“ಚೀನಾದ ಸರ್ಕಾರವು,  ಚೀನಾದ ವ್ಯವಹಾರಗಳನ್ನು ವಿವಿಧ ದೇಶಗಳೊಂದಿಗಿನ ವಿದೇಶಿ ವ್ಯವಹಾರದಲ್ಲಿ ಆಯಾ ದೇಶಗಳೊಂದಳ ಸ್ಥಳೀಯ ಕಾನೂನು ಮತ್ತು ನಿಬಂಧನೆಗಳು ಹಾಗೂ ಅಂತಾರಾಷ್ಟ್ರೀಯ ನಿಯಮಗಳಿಗೆ ಬದ್ದವಾಗಿರಲು ನಾವು ಹೇಳುತ್ತೇವೆ. ನಮ್ಮ ವ್ಯವಹಾರಗಳೂ ಅಷ್ಟೇ ಬದ್ದತೆಯಿಂದ ಇರುತ್ತವೆ ಎಂದು ನಾನು ಒತ್ತಿ ಹೇಳುತ್ತೇನೆ” ಎಂದಿದ್ದಾರೆ.

ಚೀನಾದೊಂದಿಗೆ ಲಿಂಕ್‌ ಹೊಂದಿರುವ 59 ಅಪ್ಲಿಕೇಷನ್‌ಗಳು “ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪೂರ್ವಾಗ್ರಹ ಪೀಡಿತ ಚಟುವಟಿಕೆಗಳಲ್ಲಿ ತೊಡಗಿವೆ.” ಹಾಗಾಗಿ ಭಾರತದ ರಕ್ಷಣೆ, ರಾಜ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಭದ್ರತೆಯ ಹಿತದೃಷ್ಟಿಯಿಂದ 59 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ನಿರ್ಧರಿಸಿದೆ ಎಂದು ಭಾರತ ಹೇಳಿದೆ.

ಈ ಕ್ರಮವು “ಕೋಟ್ಯಂತರ ಭಾರತೀಯ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆದಾರರ ಹಿತಾಸಕ್ತಿಗಳನ್ನು ಕಾಪಾಡುತ್ತದೆ. ಈ ನಿರ್ಧಾರವು ಭಾರತೀಯ ಸೈಬರ್‌ಪೇಸ್‌ನ ಸುರಕ್ಷತೆ ಮತ್ತು ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿತ ಕ್ರಮವಾಗಿದೆ” ಎಂದು ಹೇಳಿದೆ.

“ಚೀನಾದವರೂ ಸೇರಿದಂತೆ ಅಂತರರಾಷ್ಟ್ರೀಯ ಹೂಡಿಕೆದಾರರ ನ್ಯಾಯಸಮ್ಮತ ಮತ್ತು ಕಾನೂನು ಹಕ್ಕುಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಭಾರತ ಸರ್ಕಾರಕ್ಕೆ ಇದೆ” ಎಂದು ಅವರು ಹೇಳಿದರು.  ಚೀನಾ ಮತ್ತು ಭಾರತದ ನಡುವಿನ ಸಹಕಾರವು ಪರಸ್ಪರ ಲಾಭದಾಯಕವಾಗಿದೆ. “ಅಂತಹ ಮಾದರಿಯನ್ನು ಕೃತಕವಾಗಿ ದುರ್ಬಲಗೊಳಿಸಲಾಗಿದೆ. ಇದು ಭಾರತಕ್ಕೇ ಉಪಯುಕ್ತವಾದುದಲ್ಲ” ಎಂದು ಜಾವೋ ಹೇಳಿದ್ದಾರೆ.

ಭಾರತವು ನಿಷೇಧಿಸಿರುವ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಹೆಲೋ, ಲೈಕ್, ಕ್ಯಾಮ್ ಸ್ಕ್ಯಾನರ್, ವಿಗೊ ವಿಡಿಯೋ, ಮಿ ವಿಡಿಯೋ ಕಾಲ್ – ಶಿಯೋಮಿ, ಕ್ಲಾಷ್ ಆಫ್ ಕಿಂಗ್ಸ್ ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಕ್ಲಬ್ ಫ್ಯಾಕ್ಟರಿ ಮತ್ತು ಶೀನ್ ಸೇರಿವೆ. ಇದು ಚೀನಾದ ತಂತ್ರಜ್ಞಾನ ಕಂಪನಿಗಳ ವಿರುದ್ಧದ ಅತಿದೊಡ್ಡ ಸ್ವೀಪ್ ಅನ್ನು ಸೂಚಿಸುತ್ತದೆ.

ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಹಲವಾರು ವರದಿಗಳು ಸೇರಿದಂತೆ ಹಲವಾರು ಮೂಲಗಳಿಂದ ಹಲವಾರು ದೂರುಗಳು ಬಂದಿವೆ ಎಂದು ಭಾರತದ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.


ಇದನ್ನೂ ಓದಿ: 59 ಚೀನೀ ಆ್ಯಪ್​ ನಿಷೇಧ; TikTok ಕಂಪನಿಗಾಗುತ್ತಾ ನಷ್ಟ! CEO ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights