Cricket: ಮಿಸ್ಟರ್ 360 ಆಲ್‍ಟೈಮ್ IPL 11 : ಎಬಿಡಿ ತಂಡವನ್ನು ಧೋನಿ ಮುನ್ನಡೆಸುತ್ತಾರೆ.?

ಕೊರೊನಾ ವೈರಸ್ ಕಾಡದ ರಂಗವಿಲ್ಲ. ಜಗದ ಅರ್ಥ ವ್ಯವಸ್ಥೆ ಬುಡಮೇಲಾಗಿದೆ. ಪ್ರವಾಸೋದ್ಯಮ ಕುಸಿದು ಬಿದ್ದಿದೆ.. ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ. ಇಷ್ಟಾದರು ಸಹ ಕೋವಿಡ್ 19 ಹತೋಟಿಗೆ ಬಂದಿದೆ ಅಂತ ನೋಡಲು ಹೊರಟರೆ ಸಿಗುವ ಉತ್ತರ.. ಇಲ್ಲ… ವೈರಸ್ ನಿಂದ ಕ್ರೀಡಾರಂಗ ಬಚಾವಾಗಿದೆ ಅಂದ್ರೆ ಇಲ್ಲ, ಕ್ರೀಡಾಕೂಟಗಳು, ಕ್ರೀಟಾಪಟುಗಳು ಹಾಗೂ Cricket ಕ್ಷೇತ್ರಕ್ಕೂ ಬಾರಿ ಪೆಟ್ಟುಕೊಟ್ಟಿದೆ ಕೋವಿಡ್ 19..

ಕರೋನಾ ಸಂಕಷ್ಟದಿಂದ ಹೊರಬರಲು ಆಟಗಾರರು ತಮ್ಮದೇ ಆದ ದಾರಿ ಕಂಡುಕೊಂಡಿದ್ದಾರೆ. ಕೆಲವರು ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರು ತಮ್ಮ ಅಪೂರ್ಣ ಕನಸಗಳನ್ನು ಪೂರ್ಣ ಗೊಳಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.. ಇನ್ನು ಕೆಲ ಆಟಗಾರರು ತಮ್ಮ ನೆಚ್ಚಿನ ಆಲ್ ಟೈಮ್ ತಂಡಗಳನ್ನು ಆಯ್ಕೆಮಾಡುತ್ತಿದ್ದಾರೆ. ಕ್ರಿಕೆಟ್ ನ ಮಿಸ್ಟರ್ 360 ABD ತಮ್ಮ ನೆಚ್ಚಿನ ತಂಡಗಳನ್ನು ಆಯ್ಕೆಮಾಡುತ್ತಿದ್ದಾರೆ..

ಸೌತ್ ಆಫ್ರಿಕಾ ತಂಡದ ಮಾಜಿ ಮತ್ತು ಆರ್​ಸಿಬಿ ತಂಡದ ಸ್ಟಾರ್ ಬ್ಯಾಟ್ಸ್​ಮನ್​ ಎಬಿಡಿ ವಿಲಿಯರ್ಸ್ ಆಲ್ ಟೈಮ್ ಇಂಡಿಯನ್ ಪ್ರೀಮಿಯರ್ ಲೀಗ್ ಇಲೆವೆನ್ ಪ್ರಕಟಿಸಿದ್ದಾರೆ. ಮಿಸ್ಟರ್ 360 ಎಬಿಡಿ ತಂಡದಲ್ಲಿ ಮಿಸ್ಟರ್ ಕೂಲ್ ಧೋನಿ, ರನ್ ಮಷೀನ್ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಅಡಿಯಲ್ಲಿ ಆಡುತ್ತಿರುವ ಎಬಿಡಿ ವಿಲಿಯರ್ಸ್ ಐಪಿಎಲ್ ಆಲ್ ಟೈಮ್ ಇಲೆವೆನ್ ತಂಡವನ್ನ ಆಯ್ಕೆ ಮಾಡುವ ಜೊತೆಗೆ ನಾಯಕನನ್ನು ಆಯ್ಕೆ ಮಾಡಿದ್ದಾರೆ.

ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ರೋಹಿತ್ ಶರ್ಮಾ ಅವರನ್ನ ಓಪನರ್‍ರಾಗಿ ಆಯ್ಕೆಮಾಡಿದ್ದಾರೆ. 3 ಮತ್ತು 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಕಣಕ್ಕಿಳಿಯಲಿದ್ದಾರೆ. 5ನೇ ಕ್ರಮಾಂಕದಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನ ಆಯ್ಕೆ ಮಾಡಿದ್ದಾರೆ.ಮೂರು ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಚೆನ್ನೈ ತಲೈವಾ ಧೋನಿ 6ನೇ ಸ್ಲಾಟ್‍ನಲ್ಲಿ ಆಡಲಿದ್ದು ತಂಡವನ್ನ ಮುನ್ನಡೆಸಿದ್ದಾರೆ.

ಪಿನ್ ವಿಭಾಗವನ್ನ ರಶೀದ್ ಖಾನ್ ರವೀಂದ್ರ ಜಡೇಜಾ ಅವರೊಂದಿಗೆ ಮುನ್ನಡೆಸಲಿದ್ದಾರೆ. ವೇಗಿಗಳ ವಿಭಾಗದಲ್ಲಿ ಭೂವನೇಶ್ವರ್ ಕುಮಾರ್, ಜಸ್‍ಪ್ರೀತ್ ಬೂಮ್ರಾ ಮತ್ತು ಕಗಿಸೊ ರಬಾಡ ಸ್ಥಾನ ಪಡೆದ ಬೌಲರ್‍ಗಳಾಗಿದ್ದಾರೆ.
ಎಬಿಡಿ ವಿಲಿಯರ್ಸ್ ಆಲ್ ಟೈಮ್ ಪ್ಲೇಯಿಂಗ್ ಇಲೆವೆನ್:
ಎಮ್.ಎಸ್.ಧೋನಿ(ನಾಯಕ)
ವೀರೇಂದ್ರ ಸೆಹ್ವಾಗ್
ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ
ಎಬಿಡಿ ವಿಲಿಯರ್ಸ್
ಬೆನ್ ಸ್ಟೋಕ್ಸ್
ರವೀಂದ್ರ ಜಡೇಜಾ
ರಶೀದ್ ಖಾನ್‍

ಭುವನೇಶ್ವರ್ ಕುಮಾರ್
ಕಗಿಸೊ ರಬಾಡ
ಜಸ್​ಪ್ರಿತ್​ ಬುಮ್ರಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights