FACT CHECK | ಚುನಾವಣೆಯಲ್ಲಿ ಸೋಲುವ ಭಯದಿಂದ ಅಸಾದುದ್ದೀನ್ ಓವೈಸಿ ದೇವಸ್ಥಾನಕ್ಕೆ ಭೇಟಿ ನೀಡಿದರು ಎಂಬುದು ಸುಳ್ಳು

ಹಿಂದುತ್ವವನ್ನು,ಸನಾತನ ಧರ್ಮವನ್ನು ಟೀಕಿಸುವ ಎಐಎಂಐಎಂನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ 2024ರ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇನೆ ಎಂಬ ಭಯದಿಂದ ದೇವಸ್ಥಾನಕ್ಕೆ ಹೋಗಿ ಅರ್ಚಕರಿಂದ ಮಾಲೆ ಹಾಕಿಸಿಕೊಂಡು ಫೋಟೋವನ್ನು ತೆಗೆಸಿಕೊಂಡಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

Image

ಹೈದರಾಬಾದ್‌ನ ಸಂಸದ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.  ಇಲ್ಲಿ ಮತ್ತು ಇಲ್ಲಿ ನೋಡಬಹುದು

ನಾಲ್ಕು ಬಾರಿ ಸಂಸದ ಮತ್ತು ಹೈದರಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಓವೈಸಿ ಈ ವರ್ಷ ಬಿಜೆಪಿಯ ಮಾಧವಿ ಲತಾ ವಿರುದ್ಧ ಸ್ಪರ್ಧಿಸಿದ್ದು, ಮೇ 13ರಂದು ನಡೆಯಲಿರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಹಾಗಿದ್ದರೆ ಅಸಾದುದ್ದೀನ್ ಓವೈಸಿ ಬಗ್ಗೆ ಸಾಮಾಜಿಕ ಮಾಧಯಮಗಳಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಲೆನ್ಸ್‌ ಮೂಲಕ ಸರ್ಚ್ ಮಾಡಿದಾಗ, 2 ಮೇ 2024ರಂದು AIMIM ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ವೊಂದು ಲಭ್ಯವಾಗಿದೆ.

ಎಕ್ಸ್‌ ಖಾತೆಯ ಪೋಸ್ಟ್‌ನಲ್ಲಿ  ಹಂಚಿಕೊಂಡಿರುವ ಫೋಟೊದೊಂದಿಗೆ ಹೈದರಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ಮತ್ತು ಮಲ್ಕಾಜ್‌ಗಿರಿಯ ಶಾಸಕ ಬಲಲಾ ಅಹ್ಮದ್ ಅವರು ಮಲ್ಕಾಪೇಟ್ ಮತ್ತು ಇಂದಿರಾ ನಗರದಲ್ಲಿ ಮನೆ ಮನೆ ಪ್ರಚಾರ ಮಾಡುವ ಸಂದರ್ಭದ ದೃಶ್ಯಗಳು ಎಂದು ಬರೆಯಲಾಗಿದೆ.

ಈ ಫೋಟೋದ ಹಿಮ್ಮುಖ ಚಿತ್ರ ಹುಡುಕಾಟವು ನಮ್ಮನ್ನು AIMIM ನ ಅಧಿಕೃತ ಟ್ವಿಟರ್ ಖಾತೆಗೆ ಕರೆದೊಯ್ಯಿತು, ಅಲ್ಲಿ ಮೇ 2, 2024 ರಂದು, ಪೋಸ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಓವೈಸಿ ಅವರ ಮನೆ-ಮನೆ ಚುನಾವಣಾ ಪ್ರಚಾರದ ಫೋಟೋವನ್ನು ಮಲ್ಕಾಪೇಟ್ ಮತ್ತು ಇಂದಿರಾ ನಗರದಲ್ಲಿ ಹಂಚಿಕೊಂಡಿದೆ. ಹೈದರಾಬಾದ್ ಸಂಸದೀಯ ಕ್ಷೇತ್ರ. ಪೋಸ್ಟ್‌ನಲ್ಲಿ, ಈ ಚಿತ್ರಗಳು ಹೈದರಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ಮತ್ತು ಮಲ್ಕಾಜ್‌ಗಿರಿಯ ಶಾಸಕ ಬಲಲಾ ಅಹ್ಮದ್ ಅವರ ಪ್ರಚಾರದ ಸಮಯದಲ್ಲಿ ತೆಗೆದವು ಎಂದು ನಮೂದಿಸಲಾಗಿದೆ.

ಲಾಜಿಕಲ್ ಫ್ಯಾಕ್ಟ್ಸ್ ವರದಿ ಲಭ್ಯವಾಗಿದ್ದು, ಈ ಕ್ಲಿಪ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಲಾಜಿಕಲಿ ತಂಡ  ಅಸಾದುದ್ದೀನ್ ಓವೈಸಿ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ), ತೌಸಿಫ್ ಮೊಹಮ್ಮದ್ ಅವರನ್ನು ಸಂಪರ್ಕಿಸಿದ್ದು, ಅವರು ಓವೈಸಿಯ ಚಿತ್ರವನ್ನು ಮಲ್ಕಾಪೇಟ್‌ನ ಸರಸ್ವತಿ ನಗರದಲ್ಲಿ ತೆಗೆಯಲಾಗಿದೆ ಎಂದು ಹೇಳಿದರು. ಇದು 2 ಮೇ  2024 ರಂದು ನಡೆಸಿದ ಮನೆ-ಮನೆ ಅಭಿಯಾನದ ಭಾಗವಾಗಿದೆ ಎಂದು ಅವರು ಹೇಳಿದರು. ಎಂದು ವರದಿ ಮಾಡಿದೆ.

ಹಲವು ಸುದ್ದಿ ಮಾಧ್ಯಮಗಳು ಓವೈಸಿಯ ಪ್ರಚಾರದ ವಿಡಿಯೋಗಳನ್ನು ಪ್ರಕಟಿಸಿದ್ದು,2 ಮೇ 2024 ರಂದು ದಿ ಪ್ರಿಂಟ್ ಪ್ರಕಟಿಸಿದ ಯೂಟ್ಯೂಬ್ ವೀಡಿಯೋದಲ್ಲಿ, ಪುರೋಹಿತರೊಬ್ಬರು ಓವೈಸಿಯೊಂದಿಗೆ ಫೋಟೋ ತೆಗೆಸಿಕೊಂಡು, ಅವರಿಗೆ ಹೂಮಾಲೆ ಹಾಕಿ, ಕೇಸರಿ ಶಾಲನ್ನು ನೀಡುತ್ತಿರುವುದನ್ನು ಕಾಣಬಹುದು. ಓವೈಸಿ ಪಕ್ಕದಲ್ಲಿ ನಿಂತಿದ್ದ ಮತ್ತೊಬ್ಬ ವ್ಯಕ್ತಿಗೂ ಪೂಜಾರಿ ಶಾಲು ಹೊದಿಸಿ ಹೂ ಮಾಲೆ ಹಾಕುವುದನ್ನು ಕಾಣಬಹುದು.

RTV  ಎಂಬ ತೆಲುಗು ಸುದ್ದಿವಾಹಿನಿಯ ವರದಿಯೊಂದು ಲಭ್ಯವಾಗದ್ದು, ಪತ್ರಕರ್ತೆ ದೇವಿಕಾ ಅವರು ಓವೈಸಿ ಮಾಲೆ ಹಾಕಿದ ಪ್ರದೇಶಕ್ಕೆ ಭೇಟಿ ನೀಡಿದರು. ವೀಡಿಯೊ ವರದಿಯಲ್ಲಿ, ಅವರು ಬೀದಿಗಳಲ್ಲಿ ನಡೆಯುವುದನ್ನು ಮತ್ತು ಪ್ರದೇಶದ ನಿವಾಸಿಗಳೊಂದಿಗೆ ಮಾತನಾಡುವುದನ್ನು ಕಾಣಬಹುದು.

ಓವೈಸಿ ಅವರಿಗೆ ಮಾಲೆ ಹಾಕಿದ್ದು ಮಾಜಿ ಕೌನ್ಸಿಲರ್ ನಿವಾಸದ ಬಳಿಯೇ ಹೊರತು ದೇವಸ್ಥಾನದಲ್ಲಿ ಅಲ್ಲ ಎಂದು ದೇವಿಕಾ  ಖಚಿತಪಡಿಸಿದ್ದಾರೆ. ಓವೈಸಿ ಮನೆ ಮನೆ ಪ್ರಚಾರ ನಡೆಸುತ್ತಿದ್ದಾಗ, ಸಮೀಪದಲ್ಲೆ ಇದ್ದ ಪುರೋಹಿತರೊಬ್ಬರು ಓವೈಸಿಯನ್ನು ಭೇಟಿಯಾಗಲು ಬಂದು ಶಾಲು ಹೊದಿಸಿ ಸನ್ಮಾನಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಹೈದರಾಬಾದ್‌ನ ಸಂಸದ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಮನೆ ಮನೆ ಪ್ರಚಾರ ಮಾಡವಾಗ ಪುರೋಹಿತರೊಬ್ಬರು ಸನ್ಮಾನಿಸಿದ ವಿಡಿಯೋವನ್ನು, ಚುನಾವಣೆಯಲ್ಲಿ ಸೋಲುವ ಭಯದಿಂದ ಹಿಂದೂ ದೇವಸ್ಥಾನಕ್ಕೆ ಭೆಟಿ ನೀಡಿದ್ದಾರೆ ಎಂದು ಸುಳ್ಳು ಪ್ರತಿಪಾದಸಿ ತಪ್ಪಾಗಿ ಹಂಚಿಕೊಂಡಿದ್ದಾರೆ.


ಇದನ್ನು ಓದಿರಿ : FACT CHECK | ಮುಸ್ಲಿಂ ದ್ವೇಷದ ಮತ್ತೊಂದು ಪೋಸ್ಟ್‌ ಹಂಚಿಕೊಂಡ BJP


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights