ಪೆಸಿಫಿಕ್ ಮಹಾಸಾಗರದಲ್ಲಿ 14 ಗಂಟೆ ಕಸದ ರಾಶಿ ಹಿಡಿದು ಬದುಕುಳಿದ ಪವರಫುಲ್ಮ್ಯಾನ್!

ಲೈಫ್ ಜಾಕೆಟ್ ಇಲ್ಲದೆ ಪೆಸಿಫಿಕ್ ಮಹಾಸಾಗರಕ್ಕೆ ಬಿದ್ದ ನಾವಿಕನು 14 ಗಂಟೆಗಳ ಕಾಲ ಬದುಕುಳಿದ್ದಿದ್ದಾನೆ. ಅದು ಹೇಗೆ ಅಂದರೆ ನಿಜಕ್ಕೂ ಆಶ್ಚರ್ಯಪಡುತ್ತೀರಾ.

ಹೌದು.. ಸಮುದ್ರಕ್ಕೆ ಬಿದ್ದ ವ್ಯಕ್ತಿ ಅಲ್ಲಿನ ಕಸವನ್ನು ಹಿಡಿದುಕೊಂಡು ಆಶ್ಚರ್ಯವೆಂಬಂದತೆ ಬದುಕುಳಿದಿದ್ದಾನೆ. ಹೀಗೆ ಬದುಕುಳಿದವರ ಹೆಸರು ವಿಡಮ್. ಇವರು ಸಿಲ್ವರ್ ಸಪೋರ್ಟರ್‌ನ ಲಿಥುವೇನಿಯನ್ ಮುಖ್ಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ವಿಡಮ್ ಅವರು ಕೆಲವು ದಿನಗಳ ಹಿಂದೆ ತಲೆತಿರುಗುವಿಕೆ ಸಮಸ್ಯೆ ಅನುಭವಿಸಿದ್ದರು. ಇದರಿಂದ ಗುಣಮುಖರಾದ ಅವರು ಫೆಬ್ರವರಿ 16 ರಂದು ಬೆಳಗ್ಗೆ ನಾಲ್ಕು ಗಂಟೆಗೆ ಪೆಸಿಫಿಕ್ ಮಹಾಸಾಗರಕ್ಕೆ ಸರಕು ಸಾಗಣೆ ಹಡಗಿನ ಮೂಲಕ ಹೋಗಿದ್ದರು ಎಂದು ವಿಡಮ್ ಅವರ ಮಗ ಮರಾತ್ ಹೇಳಿದ್ದಾರೆ.

ವಿಡಾಮ್ ಅವರು ಸರಕು ಹಡಗಿನಿಂದ ಬಿದ್ದು 14 ಗಂಟೆಗಳ ಕಾಲ ತಣ್ಣನೆಯ ನೀರಿನಲ್ಲಿ ಕಳೆದಿದ್ದಾರೆ. ಈ ಹಡಗು ನ್ಯೂಜಿಲೆಂಡ್‌ನ ಟೌರಂಗಾ ಬಂದರು ಮತ್ತು ಪಿಟ್‌ಕೈರ್ನ್ ದ್ವೀಪಗಳ ನಡುವೆ ದಿನನಿತ್ಯದ ಸರಬರಾಜನ್ನು ನಡೆಸುತ್ತದೆ. ಫೆಬ್ರವರಿ 16 ರಂದು ಬೆಳಿಗ್ಗೆ 4 ಗಂಟೆಗೆ ಈ ಘಟನೆ ಸಂಭವಿಸಿದೆ.

ಸಾಗರಕ್ಕೆ ಬಿದ್ದ ನಂತರ 52 ವರ್ಷ ವಯಸ್ಸಿನ ವಿಡಾಮ್ ಹಲವಾರು ಕಿಲೋಮೀಟರ್ ದೂರ ಈಜುತ್ತಾನೆ. ಅಲ್ಲಿ ಸಿಕ್ಕ ಕಸವನ್ನು ಹಿಡಿದುಕೊಂಡು ಜೀವವನ್ನು ಉಳಿಸಿಕೊಳ್ಳುತ್ತಾನೆ.

ತಮ್ಮ ಮುಖ್ಯ ಎಂಜಿನಿಯರ್ ಕಾಣೆಯಾಗಿದ್ದಾರೆ ಎಂದು ಹಡಗಿನ ಸಿಬ್ಬಂದಿ ಗಮನಿಸಲು ಆರು ಗಂಟೆ ಬೇಕಾಯಿತು. ಕೊನೆಗೂ ವಿಡಾಮ್ ನನ್ನು ಪತ್ತೆ ಹಚ್ಚಿ ಕಾಪಾಡಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights