ಫ್ಯಾಕ್ಟ್‌ಚೆಕ್: ಮೂರು ಹೆಡೆ ಸರ್ಪ ಇರುವುದು ನಿಜವೇ ?

ಪುರಾಣ ಕತೆಗಳಲ್ಲಿ  ಏಳು ಹೆಡೆಯ ಸರ್ಪದ ಉಲ್ಲೇಖಗಳು ಮತ್ತು ಅದು ಜನರನ್ನು ಹೇಗೆ ರಕ್ಷಸುತ್ತದೆ ಎಂದು ಕಥೆಗಳಲ್ಲಿ ಕೇಳಿದ್ದೇವೆ. ಈಗ ಸಾಮಾಜಿಕ ಮಧ್ಯಮದಲ್ಲಿ ಅಂತಹದ್ದೆ ಪೋಸ್ಟ್‌ವೊಂದು ವೈರಲ್ ಆಗಿದೆ. ರಸ್ತೆಯ ಪಕ್ಕದಲ್ಲಿ ಮೂರು ತಲೆಯ ಹಾವೊಂದು ಹೆಡೆ ಎತ್ತಿ ನಿಂತಿದ್ದು ಅದನ್ನು ಜನರು ಆಶ್ಚರ್ಯದಿಂದ ನೋಡುತ್ತಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಇದು ಮೂರು ತಲೆಯ ಹಾವಿನ ಅದ್ಭುತ ದರ್ಶನ  ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಮೂರು ತಲೆಯ ಸರ್ಪದ ಇರುವಿಕೆ ಮತ್ತು ಪೋಸ್ಟ್‌ನ ಸತ್ಯಾಸತ್ಯತೆಗಳನ್ನು ಪರಿಶೀಲಿಸಿದಾಗ ಹಲವು ವೆಬ್‌ಲಿಂಕ್‌ಗಳು ಲಭ್ಯವಾಗಿವೆ. ವೈರಲ್ ಪೋಸ್ಟ್‌ನಲ್ಲಿರುವ ಚಿತ್ರವು ಬಹಳ ಸಮಯದಿಂದ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಮೂಲ ಚಿತ್ರ :

ಒಂದೇ ತಲೆಯ ಹಾವಿನ ಮೂಲ ಚಿತ್ರವನ್ನು ಮೂರು ತಲೆಯ ಹಾವಿನಂತೆ ಮತ್ತು ಕೆಲವೊಮ್ಮೆ ಹತ್ತು ತಲೆಯ ಹಾವಿನಂತೆ ಕಾಣುವಂತೆ ಡಿಜಿಟಲ್ ಎಡಿಟ್ ಮಾಡುವ ಮೂಲಕ ಮಾರ್ಪಡಿಸಲಾಗಿದೆ. ವಾಸ್ತವವಾಗಿ ಮೂಲ ಚಿತ್ರದಲ್ಲಿ ಇರುವುದು ಒಂದೇ ತಲೆಯ ಹಾವಾಗಿದ್ದು ಅದನ್ನು ಸಾರ್ವಜನಿಕರು ನೋಡುತ್ತಿದ್ದಾರೆ.

ಹಲವು ವರ್ಷಗಳಿಂದ ಇಂತಹ ಸುಳ್ಳು ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

 

ಎರಡು ತಲೆಯ ಹಾವು :

ಕೆಲವೊಮ್ಮೆ ಎರಡು ತಲೆಯ ಹಾವುಗಳನ್ನು ಮಾರಾಟ ಮಾಡುವ ಜಾಲಗಳು, ಕಳ್ಳ ಸಾಗಾಣೆಯ ಮೂಲಕ ಎರಡು ತಲೆಯ ಹಾವುಗಳನ್ನು ಲಕ್ಷ ಲಕ್ಷ ರೂಗಳಿಗೆ ಮಾರಾಟ ಮಾಡುವ  ನಿದರ್ಶನಗಳು ಪತ್ರಿಕೆಗಳಲ್ಲಿ ಕೇಳಿಬರುತ್ತಿರುತ್ತವೆ. ಇವುಗಳನ್ನು ದೇವರ ಹಾವು ಎಂದು ನಂಬಲಾಗಿದೆ. ಆದೆರೆ ಉರಗ ತಜ್ಞರು ಹೇಳುವುದೇ ಬೇರೆ.  ಅವರ ಪ್ರಕಾರ ಎರಡು ತಲೆಯ ಹಾವುಗಳು ಜೈವಿಕ ಸಮಸ್ಯೆಯಿಂದ ಜನಿಸಿರುತ್ತವೆ. ಆದರೆ ಅವು ಹೆಚ್ಚು ಕಾಲ ಉಳಿಯದೆ ಸತ್ತು ಹೋಗುತ್ತವೆ.

ಈ ರೀತಿ ಎರಡು ತಲೆಯ ಹಾವು ಕಾಣಿಕೊಳ್ಳುವುದು ಅಪರೂಪ. ಕೆಲ ಜೈವಿಕ ಸಮಸ್ಯೆ, ವ್ಯತ್ಯಾಸದಿಂದ ಈ ಹಾವು ಎರಡು ತಲೆಯೊಂದಿಗೆ ಹುಟ್ಟುತ್ತವೆ. ಜೈವಿಕ ಸಮಸ್ಯೆಯಿಂದ ಎರಡು ತಲೆಯೊಂದಿಗೆ ಹೇಗೆ ಶಿಶುಗಳು ಜನಿಸುತ್ತವೊ ಅದೇ ರೀತಿ ಈ ಹಾವು ಕೂಡ ಜನಿಸುತ್ತವೆ  ಇದನ್ನು ಬ್ಲಾಕ್​​​ ರಾಟ್​​ ಸ್ನೇಕ್​ ಎಂದು ಕರೆಯುತ್ತಾರೆ. ಒಂದು ಲಕ್ಷದಲ್ಲಿ ಒಂದು ಇಂತಹ ಹಾವು ಹುಟ್ಟುತ್ತದೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋವನ್ನು ಮೂಲ ಫೋಟೊದಲ್ಲಿರುವ ಕಾಳಿಂಗ ಸರ್ಪದ  ಚಿತ್ರವನ್ನು ಎಡಿಟ್ ಮಾಡುವ ಮೂಲಕ ಮೂರು ತಲೆಯ ಹಾವಿನಂತೆ ಚಿತ್ರಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: RSS ಮೋಹನ್ ಭಾಗವತ್ ಮಾತಿನಲ್ಲಿ ಎಷ್ಟು ನಿಜ? ಎಷ್ಟು ಸುಳ್ಳು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಮೂರು ಹೆಡೆ ಸರ್ಪ ಇರುವುದು ನಿಜವೇ ?

Leave a Reply

Your email address will not be published.

Verified by MonsterInsights