ಮಹಿಳೆಗೆ ಲೈಂಗಿಕ ಕಿರುಕುಳ: ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷನ ಬಂಧನ!
ಲೈಂಗಿಕ ಕಿರುಕುಳ ಆರೋಪದಲ್ಲಿ ಉತ್ತರ ಪ್ರದೇಶದ ಬದಾನ್‌ನಲ್ಲಿ ಸ್ಥಳೀಯ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ದೂರಿನ ಆಧಾರ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್) ಅಡಿಯಲ್ಲಿ ಸಹಸ್ವಾನ್‌ನ ಬೂತ್ ಕಮಿಟಿ ಅಧ್ಯಕ್ಷ ಮತ್ತು ಬಿಜೆಪಿ ಕಾರ್ಯಕರ್ತನಾದ ವಿಪಿನ್ ಮಾಲಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯ ನಂತರ ಆತ ಪರಾರಿಯಾಗಿದ್ದ. ಆದರೆ ಭಾನುವಾರ ರಾತ್ರಿ ಅವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಪಿನ್ ಮಾಲಿಯನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ ಮಹಿಳೆ ನೀಡಿದ ದೂರು ನೀಡಿದ ನಂತರ ವಿಪಿನ್ ಮಾಲಿ ತಲೆಮರೆಸಿಕೊಂಡಿದ್ದನ್ನು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ: ಆರೋಪಿಗಳನ್ನು ಬೆಂಬಲಿಸಲು ಮೇಲ್ಜಾತಿಯವರ ಸಭೆ ಕರೆದ ಬಿಜೆಪಿ!
ತನಿಖೆಯ ನಂತರ ಮಾಲಿ ವಿರುದ್ಧ ಐಪಿಸಿಯ ಸೆಕ್ಷನ್ 354 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಹಸ್ವಾನ್ ಠಾಣಾಧಿಕಾರಿ ರಾಜೀವ್ ಶರ್ಮಾ ತಿಳಿಸಿದ್ದಾರೆ.
ಏತನ್ಮಧ್ಯೆ, ಬದಾನ್‌ನ ಬಿಜೆಪಿ ಅಧ್ಯಕ್ಷ ಅಶೋಕ್ ಭಾರ್ತಿಯಾ ಇದನ್ನು ಸಂಚು ಎಂದು ಕರೆದಿದ್ದು, “ವಿಪಿನ್ ಮಾಲಿ ಹೂಮಾಲೆಯನ್ನು ತರಲು ಶಹವಾಜಪುರ್‌ಗೆ ಹೋಗಿದ್ದಾಗ ಕೆಲವು ಜನರ ಪಿತೂರಿಯಿಂದ ಸಿಕ್ಕಿಬಿದ್ದಿದ್ದಾನೆ. ನ್ಯಾಯಾಂಗದ ಮೇಲೆ ತನಗೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿದರು.
ವಿಪಿನ್ ಮಾಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಕುಖ್ಯಾತಿ ಪಡೆದಿದ್ದರು.
ಇದನ್ನೂ ಓದಿ: ಜಾಲತಾಣಿಗರಿಂದ ಅಜಿತ್ ಹನುಮಕ್ಕನವರ್ ಟ್ರೋಲ್; ಟ್ರೆಂಡಿಂಗ್‌ನಲ್ಲಿ “ಏಜೆಂಟ್ ಅಜಿತ್”