ಶ್ರೀರಂಗಪಟ್ಟಣ ದಸರಾಗೆ ಎಸ್.ಎಂ ಕೃಷ್ಣಾರಿಂದ ಚಾಲನೆ : ಜಂಬೂ ಸವಾರಿ ಆರಂಭ

ನಾಡ ಹಬ್ಬ ಮೈಸೂರು ದಸರಾ ಆರಂಭಗೊಂಡು ಇಂದಿಗೆ ಐದನೇ ದಿನಕ್ಕೆ ಕಾಲಿಟ್ಟಿದೆ. ಶ್ರೀರಂಗಪಟ್ಟಣ ದಸರಾಗೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಚಾಲನೆ ನೀಡಿದ್ದಾರೆ. ನಾಡ ದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಕಿರಂಗೂರು ಬನ್ನಿ ಮಂಟಪದಿಂದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದವರೆಗೆ ಸಾಗುವ ಜಂಬೂ ಸವಾರಿಗೆ ಸ್ತಬ್ಧ ಚಿತ್ರಗಳು, ವಿವಿಧ ಜನಪದ ಕಲಾ ಪ್ರಕಾರಗಳನ್ನ ಮಾಡಲಾಗಿದೆ.

ಇನ್ನೂ ಅಂಬಾರಿ ಮೆರವಣಿಗೆ ಮುನ್ನ ಸಚಿವ ಆರ್.ಅಶೋಕ್ ರಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು. ಎಸ್ ಎಂ ಕೃಷ್ಣ ಆವರಿಗೆ ಸಚಿವ ಆರ್.ಅಶೋಕ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಎಸ್ಪಿ ಪರಶುರಾಮ ಸಾಥ್ ನೀಡಿದರು.

ಕಿರಂಗೂರು ಬನ್ನಿ ಮಂಟಪದ ಬಳಿ ನಡೆಯುತ್ತಿರುವ ದಸರಾಗೆ ಅಭಿಮನ್ಯು ಆನೆಗೆ 250ಕೆಜಿ ತೂಕದ ಮರದ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತ ಅಭಿಮನ್ಯು ಆನೆಗೆ ಕಾವೇರಿ, ವಿಜಯ ಆನೆಗಳ ಸಾಥ್ ನೀಡಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights