ಸಿ ವೋಟರ್‌ ಸಮೀಕ್ಷೆ: ಬಿಹಾರದಲ್ಲಿ ಬಿಜೆಪಿಗೆ ಸೋಲು; ಮಹಾಘಟಬಂಧನ್‌ಗೆ ಅಧಿಕಾರ ಸಾಧ್ಯತೆ!

ಸದ್ಯ ದೇಶದ ಚಿತ್ತವನ್ನು ತನ್ನತ್ತ ಸೆಳೆದಿರುವ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಮತದಾನ ಮುಗಿದಿದೆ. ಇನ್ನೇನು ಎರಡು ದಿನಗಳಲ್ಲಿ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಬಿಹಾರದಲ್ಲಿ ಅಧಿಕಾರದ ಗದ್ದುಗೆ ಯಾರು ಹಿಡಿಯಲಿದ್ದಾರೆ ಎಂಬ ಕೌತುಕ ಎಲ್ಲರಲ್ಲಿಯೂ ಮನೆ ಮಾಡಿದೆ. ಕೊರೊನಾ ಲಸಿಕೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಿಹಾರ ಒಲಿಯುತ್ತಾ, ಅಥವಾ ಕೃಷಿ ಮಸೂದೆಗಳ ವಿರುದ್ಧ ಸೆಟೆದು ನಿಂತಿರುವ ಕಾಂಗ್ರೆಸ್‌, ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ಅಧಿಕಾರಕ್ಕೇರುತ್ತಾ ಎಂದು ದೇಶವೇ ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿದೆ.

ಈ ನಡುವೆ ಹಲವು ಮಾಧ್ಯಮಗಳು ಹಾಗೂ ಸಿ ವೋಟರ್‌ ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದ್ದು, ಮಹಾಘಟಬಂಧನ್‌ಗೆ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಿಹಾರದಲ್ಲಿ ನಡೆಸಲಾಗಿರುವ ಹಲವು ಸಮೀಕ್ಷೆಗಳ ಪ್ರಕಾರ, ಈ ಬಾರಿಯೂ ಬಿಹಾರದಲ್ಲಿ ಯಾರಿಗೂ ಪೂರ್ಣ ಬಹುಮತ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಅತಂತ್ರ ಸ್ಥಿತಿ ಉಂಟಾಗಲಿದೆ. ಚುನಾವಣಾ ಪೂರ್ವ ಒಕ್ಕೂಟ ರಚನೆ ಮಾಡಿಕೊಂಡಿರುವ ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲಿಯೂ ಆರ್‌ಜೆಡಿ ಪಕ್ಷದ ತೇಜಸ್ವಿ ಯಾದವ್‌ ನೇತೃತ್ವದಲ್ಲಿ ಮಹಾಘಟಬಂಧನ್‌ಗೆ ಬಹುಮತ ಸಿಗಲಿದ್ದು, ಕಾಂಗ್ರೆಸ್‌-ಆರ್‌ಜೆಡಿ ನೇತೃತ್ವದ ಸರ್ಕಾರ ರಚನೆಯಾಗುತ್ತದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ವಿವಿಧ ಸಮೀಕ್ಷೆಗಳು ಹೇಳಿರುವ ಅಂದಾಜು ಸ್ಥಾನಗಳ ಪಟ್ಟಿ ಇಂತಿದೆ:

ಟುಡೇಯ್ಸ್ ಚಾಣಕ್ಯ ಸಮೀಕ್ಷೆ
ಆರ್‌ಜೆಡಿ ನೇತೃತ್ವದಲ್ಲಿ ಮಹಾಘಟಬಂಧನ : 108 -131
ಜೆಡಿಯು ನೇತೃತ್ವದ ಎನ್‌ಡಿಎ : 104 – 128
ಇತರರು: 4-8

ಇಂಡಿಯಾ ಟಿವಿ-ಸಿ ವೋಟರ್ ಸಮೀಕ್ಷೆ
ಜೆಡಿಯು-ಬಿಜೆಪಿ ಮೈತ್ರಿಕೂಟ – 116
ಮಹಾಘಟಬಂಧನ್ – 120
ಎಲ್ ಜೆಪಿ – 1
ಇತರೆ – 6

ಜನ್ ಕಿ ಬಾತ್ (ರಿಪಬ್ಲಿಕ್)
ಬಿಜೆಪಿ : 60-75
ಜೆಡಿ(ಯು) : 31-42
ಆರ್ಜೆಡಿ : 91-79
ಎಲ್ಜೆಪಿ : 8-5

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ. ಅಗತ್ಯ ಸ್ಥಾನಗಳನ್ನು ಮಹಾಘಟಬಂಧನ್‌ ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಬಿಹಾರದಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆದಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಯಾರಿಗೆ ಬಿಹಾರದ ಗದ್ದುಗೆ ಎಂಬುದು ನಿರ್ಧಾರವಾಗಲಿದೆ.


ಇದನ್ನೂ ಓದಿ: ಬಿಹಾರವು ಬಂಧನದಲ್ಲಿದೆ: ಭಾರತದ ಬದಲಾವಣೆಯ ಪರ್ವ ಬಿಹಾರದಿಂದ ಆರಂಭವಾಗಲಿದೆ: ಸೋನಿಯಾ ಗಾಂಧಿ


ಇದನ್ನೂ ಓದಿ: ‘ಭಾರತ್ ಮಾತಾ ಕೀ ಜೈ, ಜೈ ಶ್ರೀ ರಾಮ್’ ಹೇಳಲು ಬಯಸದವರನ್ನು ಬಿಹಾರ ತಿರಸ್ಕರಿಸಲಿದೆ: ಪ್ರಧಾನಿ ಮೋದಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights