‘ಭಾರತ್ ಮಾತಾ ಕೀ ಜೈ, ಜೈ ಶ್ರೀ ರಾಮ್’ ಹೇಳಲು ಬಯಸದವರನ್ನು ಬಿಹಾರ ತಿರಸ್ಕರಿಸಲಿದೆ: ಪ್ರಧಾನಿ ಮೋದಿ

ಕೊರೊನಾ ವೈರಸ್‌ ಆಕ್ರಮಣ ಆರಂಭವಾದ ಬಳಿಕ ಮೊದಲ ಬಾರಿ ಬೃಹತ್‌ ಚುನಾವಣೆ ಬಿಹಾರದಲ್ಲಿ ನಡೆಯುತ್ತಿದೆ. ಇಂದು ಬಿಹಾರದಲ್ಲಿ ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಮೂರನೇ ಹಂತದ ಚುನಾವಣೆ ನ.07 ರಂದು ನಡೆಯಲಿದೆ. ಮೂರನೇ ಹಂತದ ಚುನಾವಣಾ ಪ್ರಚಾರಕ್ಕೆ ತೆರಳಿರುವ ಪ್ರಧಾನಿ ಮೋದಿ, “ಭಾರತ್ ಮಾತಾ ಕೀ ಜೈ ಎಂದು ಹೇಳಬೇಡಿ, ಜೈ ಶ್ರೀರಾಮ್‌ ಜಪಿಸಬೇಡಿ ಎನ್ನುವವರನ್ನು ಬಿಹಾರದ ಜನರು ತಿರಸ್ಕರಿಸಿದ್ಧಾರೆ. ಎನ್‌ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್) ಅನ್ನು ಮರು ಆಯ್ಕೆ ಮಾಡಲು ಬಿಹಾರ ಮನಸ್ಸು ಮಾಡಿದೆ” ಎಂದು ಹೇಳಿದ್ದಾರೆ.

“ನಾವು ಪಡೆಯುತ್ತಿರುವ ಆರಂಭಿಕ ಮಾಹಿತಿಯ ಆಧಾರದ ಮೇಲೆ, ಎನ್‌ಡಿಎ ಸರ್ಕಾರವನ್ನು ಮರು ಆಯ್ಕೆ ಮಾಡಲು ಬಿಹಾರ ನಿರ್ಧರಿಸಿದೆ” ಎಂದು ಅವರು ಹೇಳಿದ್ದಾರೆ.

ಆರ್‌ಜೆಡಿ ನೇತೃತ್ವದ ಪ್ರತಿಪಕ್ಷಗಳ ಒಕ್ಕೂಟದ ಮೇಲೆ ವಾಗ್ದಾಳಿ ಬನಡೆಸಿದ ಮೋದಿ,  “ಅವರು (ಆರ್‌ಜೆಡಿ) ಜಂಗಲ್‌ರಾಜ್‌ನನ್ನು ಬಿಹಾರಕ್ಕೆ ಕರೆತಂದವರು. ಅವರಿಗೆ ಏನು ಬೇಕು? ನಿಮಗೆ ಗೊತ್ತಾ? ಅವರು ನೀವು ಭಾರತ್‌ ಮಾತಾ ಕೀ ಜೈ ಎಂದು ಹೇಳಬೇಡಿ ಎಂದು ಹೇಳುತ್ತಾರೆ. ಛಾತಿ ದೇವಿಯನ್ನು ಜಪಿಸುವ ಈ ಪುಣ್ಯ ಭೂಮಿಯಲ್ಲಿ ರಾಷ್ಟ್ರಕ್ಕಾಘಿ ಜಪಿಸದಿರಲು ಸಾಧ್ಯವೇ? ಎಂದು ಹೇಳಿದ್ದಾರೆ.

“ಒಂದು ಗುಂಪು ಹೇಳುತ್ತದೆ ‘ಭಾರತ್ ಮಾತಾ ಕಿ ಜೈ’ ಎಂದು ಜಪಿಸಬೇಡಿ ಎಂದು. ಇನ್ನೊಂದು ಗುಂಪು ಅದು ಅವರಿಗೆ ತಲೆನೋವು ಎಂದು ಹೇಳುತ್ತದೆ. ಈಗ, ಅವರು ಒಟ್ಟಾಗಿ ಬಿಹಾರದ ಜನರಲ್ಲಿ ಮತ ಪಡೆಯಲು ಬಂದಿದ್ದಾರೆ. ನೀವು ‘ಜೈ ಶ್ರೀ ರಾಮ್’ ಅನ್ನು ಜಪಿಸುಲು ಅವರು ಅವರು ಬಯಸುವುದಿಲ್ಲ” ಎಂದು ಹೆಸರು ಹೇಳದೆ ಹೇಳಿದ್ದಾರೆ.

ಇದನ್ನೂ ಓದಿ:

ಬಿಹಾರ ಚುಣಾವಣೆ: ಬಿಜೆಪಿ ವಿರುದ್ಧ #BiharRejectsModi ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್‌!

“ಡಬಲ್ ಎಂಜಿನ್” ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ರಾಜ್ಯದ ಪ್ರಗತಿ ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅದಕ್ಕಾಗಿ ಬಿಹಾರ ಎನ್‌ಡಿಎಯನ್ನು ಅಧಿಕಾರಕ್ಕೆ ತರಲಿದೆ. “ಡಬಲ್‌ ಯುವರಾಜ” (ತೇಜಸ್ವಿ ಯಾಧವ್ ಮತ್ತು ರಾಹುಲ್‌ಗಾಂಧಿ)ಯನ್ನು ಬಿಹಾರ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.

ಜೆಡಿಯು ನಾಯಕ ಮತ್ತು ಎನ್‌ಡಿಎ ಮೈತ್ರಿಯ ಸಿಎಂ ಅಭ್ಯರ್ಥಿ ನಿತೀಶ್‌ ಕುಮಾರ್ ಅವರೊಂದಿಗೆ ರ್ಯಾಲಿ ನಡೆಸಿದ ಮೋದಿ, ಎನ್‌ಡಿಎ ತೊರೆದು, ನಿತೀಶ್‌ ಕುಮಾರ್‌ರನ್ನು ಸೋಲಿಸಿಯೇ ತೀರುತ್ತೇನೆ ಎಂದು ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ನಾಯಕ ಚಿರಾಗ್ ಪಾಸ್ವಾನ್ ವಿರುದ್ಧ ಯಾವುದೇ ಮಾತುಗಳನ್ನು ಆಡಲಿಲ್ಲ.

“ಕೆಲವರಿಗೆ ಸಮಸ್ಯೆ ಇದೆ… ಅವರು ‘ಚುನಾವಣೆಯಲ್ಲಿ ಮೋದಿ ಯಾಕೆ ಗೆಲ್ಲುತ್ತಾರೆ?’ ಎಂದು ಹೇಳುತ್ತಾರೆ… ಮೋದಿಯವರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಏಕೆಂದರೆ ಅವರು ಎಲ್ಲಾ ಬಡ ತಾಯಂದಿರು ಮತ್ತು ಸಹೋದರಿಯರ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಾರೆ… ಅದಕ್ಕಾಗಿಯೇ ಅವರು ಮೋದಿಯನ್ನು ಆಶೀರ್ವದಿಸುತ್ತಾರೆ…” ಎಂದು ಪ್ರಧಾನಿ ಹೇಳಿದರು.

ಕಾಂಗ್ರೆಸ್​ ಜನರಿಗೆ ನೀಡಿದ ಭರವಸೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಆದರೆ, ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಅವರು ಜನರಿಗೆ ಏನನ್ನು ಮಾಡಲಿಲ್ಲ. ಈಗ ಎಲ್ಲಿದ್ದಾರೆ ನೋಡಿ. ಕಾಂಗ್ರೆಸ್​ನ ಇಂದಿನ ಸ್ಥಿತಿ ಗಮನಿಸಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ಸೇರಿ 100 ಸದಸ್ಯರನ್ನು ಅವರು ಹೊಂದಿಲ್ಲ. ಜಮ್ಮು ಮತ್ತು ಕಾಶ್ಮೀರ, ಉತ್ತರಖಂಡ, ರಾಜಸ್ಥಾನ, ಗುಜರಾತ್​, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್​ ಇಲ್ಲದಂತಾಗಿದೆ ಎಂದದ್ದಾರೆ.

ಬಿಹಾರದಲ್ಲಿ ಕೊನೆಯ ಹಂತದ ಚುನಾವಣೆ ಶನಿವಾರ ನಡೆಯಲಿದೆ; ನವೆಂಬರ್ 10 ರಂದು ಮತಗಳನ್ನು ಎಣಿಸಲಾಗುವುದು.

ಇದನ್ನೂ ಓದಿ:

ನನ್ನ ಹೋರಾಟ ನಿತೀಶ್ ವಿರುದ್ಧವಷ್ಟೇ; ಕೊನೆ ಉಸಿರಿರುವವರೆಗೂ ಮೋದಿ ಜೊತೆಗಿರುತ್ತೇನೆ: ಚಿರಾಗ್ ಪಾಸ್ವಾನ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights