ಜಾಗತಿಕ ಹಸಿವು ಸೂಚ್ಯಂಕ: ಭಾರತಕ್ಕೆ 94ನೇ ಸ್ಥಾನ; ಪಾಕಿಸ್ಥಾನ, ನೇಪಾಳಕ್ಕಿಂತ ಹಿಂದುಳಿದ ಭಾರತ

ಜಾಗತಿಕ ಹಸಿವು ಸೂಚ್ಯಂಕ 2020ರ ವರದಿಯು ಶುಕ್ರವಾರ ಬಿಡುಗಡೆಯಾಗಿದೆ. ಸಮೀಕ್ಷೆಗೆ ಒಳಪಟ್ಟಿರುವ 107 ದೇಶಗಳಲ್ಲಿ ಭಾರತ 94ನೇ ಸ್ಥಾನದಲ್ಲಿದೆ. ಅಲ್ಲದೆ, ಭಾರತವು ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾಕ್ಕಿಂತ ಹಿಂದುಳಿದಿದೆ ಎಂದು ಜಾಗತಿಕ ಹಸಿವು ಸೂಚ್ಯಂಕ(ಜಿಹೆಚ್ಐ) ವರದಿ ಹೇಳಿದೆ.

ಪ್ರಪಂಚದಾದ್ಯಂತ ಸುಮಾರು 690 ಮಿಲಿಯನ್ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಜಾಗತಿಕ ಹಸಿವು ಸೂಚ್ಯಂಕ ವರದಿ ಹೇಳಿದೆ.

50 ಅಂಕಗಳಲ್ಲಿ ಭಾರತವು 27.2 ಅಂಕಗಳನ್ನು ಪಡೆದುಕೊಂಡಿದ್ದು, 2020ರಲ್ಲಿ ಭಾರತದಲ್ಲಿ ಹಸಿವಿನ ಮಟ್ಟವು “ಗಂಭೀರ”ವಾಗಿದೆ ಎಂದು ಜಾಗತಿಕ ಹಸಿವು ಸೂಚ್ಯಂಕ ವರದಿಯು ಹೇಳುತ್ತದೆ.

ಜಿಹೆಚ್ಐ ವರದಿಯ ಪ್ರಕಾರ, 9.9 ಕ್ಕಿಂತ ಕಡಿಮೆ ಸ್ಕೋರ್ ಪಡೆದರೆ “ಕಡಿಮೆ” ಹಸಿವನ್ನು ಸೂಚಿಸುತ್ತದೆ. 10-19.9 ರ ಪ್ರಮಾಣವು “ಮಧ್ಯಮ” ಹಸಿವಿನ ಮಟ್ಟವನ್ನು ಪ್ರತಿನಿಧಿಸುತ್ತದೆ.  20-34.9 ಅಂಕಗಳು “ಗಂಭೀರ” ಹಸಿವನ್ನು ಸೂಚಿಸುತ್ತದೆ. 35-39.9 “ಆತಂಕಕಾರಿ” ಮತ್ತು 50 ಕ್ಕೂ ಹೆಚ್ಚು “ಅತ್ಯಂತ ಆತಂಕಕಾರಿ” ಹಸಿವಿನ ಮಟ್ಟಗಳಾಗಿವೆ ಎಂದು ಹೇಳಲಾಗಿದೆ.

“ಬಾಂಗ್ಲಾದೇಶ, ಭಾರತ, ನೇಪಾಳ ಮತ್ತು ಪಾಕಿಸ್ತಾನಗಳಲ್ಲಿ ಮಕ್ಕಳ ಅಪೌಷ್ಠಿಕತೆ ಹೆಚ್ಚಾಗಿದೆ. ಕಳಪೆ ಆಹಾರ ವೈವಿಧ್ಯತೆ, ತಾಯಿಯಯರ ಶಿಕ್ಷಣ ಕೊರತೆ ಮತ್ತು ಮನೆಯ ಬಡತನ ಸೇರಿದಂತೆ ಅನೇಕ ರೀತಿಯ ಅಭಾವವನ್ನು ಎದುರಿಸುತ್ತಿವೆ ”ಎಂದು ವರದಿ ಹೇಳಿದೆ.

ಜಾಗತಿಕ ಹಸಿವು ಸೂಚ್ಯಂಕ:ನೇಪಾಳ, ಬಾಂಗ್ಲಾ, ಪಾಕಿಸ್ತಾನಕ್ಕಿಂತಲೂ ಕೆಳಸ್ಥಾನದಲ್ಲಿ ಭಾರತ-  Kannada Prabha

ಪ್ರಸ್ತುತ, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾಕ್ಕಿಂತ ಹಿಂದುಳಿದಿದೆ. ರುವಾಂಡಾ, ಅಫ್ಘಾನಿಸ್ತಾನ, ಲೈಬೀರಿಯಾ, ಮತ್ತು ಚಾಡ್ ಸೇರಿದಂತೆ 107 ದೇಶಗಳಲ್ಲಿ 13 ಮಾತ್ರ ಭಾರತದ ಪರಿಸ್ಥಿತಿಗಿಂತ ಕೆಟ್ಟದಾಗಿದೆ.

“ಒಟ್ಟಾರೆಯಾಗಿ, ಪ್ರಪಂಚವು ಮಧ್ಯಮ ಮಟ್ಟದ ಹಸಿವನ್ನು ಹೊಂದಿದೆ, ಆದರೆ 31 ದೇಶಗಳಲ್ಲಿ ಹಸಿವು ಇನ್ನೂ ಗಂಭೀರವಾಗಿದೆ, ಮತ್ತು ಹೆಚ್ಚುವರಿ 9 ದೇಶಗಳನ್ನು ತಾತ್ಕಾಲಿಕವಾಗಿ ಗಂಭೀರವೆಂದು ವರ್ಗೀಕರಿಸಲಾಗಿದೆ” ಎಂದು ವರದಿ ತಿಳಿಸಿದೆ.

2019 ರಲ್ಲಿ ಜಾಗತಿಕ ಹಸಿವು ಸೂಚ್ಯಂಕ(ಜಿಹೆಚ್ಐ)ದಲ್ಲಿ ಭಾರತ 117 ದೇಶಗಳಲ್ಲಿ 102 ನೇ ಸ್ಥಾನದಲ್ಲಿತ್ತು. 2018 ರಲ್ಲಿ, ಜಾಗತಿಕ ಹಸಿವು ಸೂಚ್ಯಂಕದಲ್ಲಿ 119 ದೇಶಗಳಲ್ಲಿ ಭಾರತ 103 ನೇ ಸ್ಥಾನದಲ್ಲಿತ್ತು.


ಇದನ್ನೂ ಓದಿ: ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ: ದಕ್ಷಿಣ ಏಷ್ಯಾದಲ್ಲಿ ಭಾರತವೇ ಮೂರನೇ ಬಡರಾಷ್ಟ್ರ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights