“ನಾನು ನಿವೃತ್ತಿ ಹೊಂದಿದ್ದೇನೆ” ಎಂದ ಪಿವಿ ಸಿಂಧು: ಅಭಿಮಾನಿಗಳಿಗೆ ಕೊನೆಯಲ್ಲಿ ಟ್ವಿಸ್ಟ್‌!

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಟ್ವಿಟರ್‌ ಮತ್ತು ಇನ್ಸ್ಟಾಗ್ರಾಂನಲ್ಲಿ “ಐ ರಿಟೈರ್ (ನಾನು ನಿವೃತ್ತಿ ಹೊಂದಿದ್ದೇನೆ)” ಎಂದು ಬರೆದುಕೊಂಡಿದ್ದಾರೆ. ಇದು ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಗೊಂದಲಕ್ಕೊಳಗಾಗಿಸಿದೆ. ಈ ಬಗ್ಗೆ ಬರೆದುಕೊಂಡಿರುವ ಅವರು, “ನನ್ನ ದೃಷ್ಟಿಕೋನದಿಂದ ಕಲಿತಿದ್ದೇನೆ” ಎಂದು ಹೇಳಿದ್ದು, ಅವರು ಕೊರೊನಾ ವೈರಸ್‌ ಮತ್ತು ಅದರ ಪ್ರಭಾವದ ಬಗ್ಗೆ ಬರೆದಿದ್ದಾರೆ. ಆ ಪೋಸ್ಟ್‌ನ ಅಂತ್ಯದಲ್ಲಿ ಟ್ವಿಸ್ಟ್‌ ಇದೆ.

“ಇಂದು ನಾನು ಈ ಅಶಾಂತಿ ಪ್ರಜ್ಞೆಯಿಂದ ನಿವೃತ್ತಿ ಹೊಂದಲು ಬಯಸಿದ್ದೇನೆ. ಕೊರೊನಾ ಬಗೆಗಿನ  ನಕಾರಾತ್ಮಕತೆಯಿಂದ ನಾನು ನಿವೃತ್ತಿ ಹೊಂದಿದ್ದೇನೆ. ಅಭೂತಪೂರ್ವ ಸಮಯಕ್ಕೆ ಅಭೂತಪೂರ್ವ ಕ್ರಮಗಳು ಬೇಕಾಗುತ್ತವೆ. ಸಮಸ್ಯೆಗಳನ್ನು ಎದುರಿಸುವಾಗ ತರಬೇತಿ ಮತ್ತು ಪದ್ಯಗಳಲ್ಲಿ ಮಾಡುವುದಕ್ಕಿಂತ ಎರಡು ಪಟ್ಟು ಹೆಚ್ಚು ಕಠಿಣವಾಗಿ ಹೋರಾಡಬೇಕು” ಎಂದು ಅವರು ಬರೆದಿದ್ದಾರೆ.

ಕೊರೊನಾ ಸೋಂಕಿನ ಬಗೆಗೆ ಅವರು ಹೊಂದಿದ ಅಸಹ್ಯ ಅನೋಭಾವದಿಂದ ಹೊರಬಂದಿರುವುದಾಗಿ ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಅವರ “ಐ ರಿಟೈರ್” ಪೋಸ್ಟ್‌ನೋಡಿ ಆಘಾತಕ್ಕೊಳಗಾಗಿದ್ದು ಸೋಷಿಯಲ್ ಮೀಡಿಯಾ ಬಳಕೆದಾರರು, ಅವರ ಪೋಸ್ಟ್‌ನ ಅಂತ್ಯವನ್ನು ನೋಡಿ ನಿಟ್ಟುಸಿರುಬಿಟ್ಟಿದ್ದಾರೆ.

https://twitter.com/Pvsindhu1/status/1323196067450507265?s=20

“ಅದು ನನಗೆ ಒಂದು ಕ್ಷಣ ಭಯ ಹುಟ್ಟಿಸಿತು. ಪ್ರೋಟೋಕಾಲ್‌ಗಳನ್ನು ಅನುಸರಿಸುವ ಮೂಲಕ ನಾವೆಲ್ಲರೂ ಈ ವೈರಸ್ ವಿರುದ್ಧ ಹೋರಾಟಬೇಕು. ಎಲ್ಲರೂ ಒಟ್ಟಿಗಿದ್ದೇವೆ” ಎಂದು ಒಬ್ಬರು ಪ್ರತಿಕ್ರಿಸಿದ್ದಾರೆ.

ಪಿವಿ ಸಿಂಧು ಪ್ರಸ್ತುತ ಲಂಡನ್‌ನಲ್ಲಿದ್ದಾರೆ. ಮುಂದಿನ ವರ್ಷದ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ.


Read Also: Badminton : ವಿಶ್ವ ಬ್ಯಾಡ್ಮಿಂಟನ್ ಗೆದ್ದ ಮೊದಲ ಭಾರತೀಯರೆನಿಸಿದ ಸಿಂಧು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights