ನ್ಯಾಯಧೀಶರು ಶಿಕ್ಷಣ ಪಡೆಯಬೇಕು: ರಾಖಿ ಕಟ್ಟುವ ಆದೇಶಕ್ಕೆ ಕೆ.ಕೆ.ವೇಣುಗೋಪಾಲ್ ವಿರೋಧ

ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಪ್ರಕರಣಗಳನ್ನು ಸೂಕ್ಷ್ಮವಾಗಿ ನಿಭಾಯಿಸಲು ನ್ಯಾಯಾಧೀಶರುಗಳಿಗೆ ಲಿಂಗ ಸಂವೇದನೆ ಕುರಿತು ಶಿಕ್ಷಣ ನೀಡಬೇಕಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ವ್ಯಕ್ತಿಗೆ, ದೂರುದಾರ ಮಹಿಳೆಯ ಮನೆಗೆ ತನ್ನ ಕುಟುಂಬದೊಂದಿಗೆ ಹೋಗಿ, ಆಕೆಯಿಂದ ರಾಖಿ ಕಟ್ಟಿಸಿಕೊಂಡು, ಆಕೆಯ ಸೊದರನಾಗಿ ರಕ್ಷಕನಾಗಿರುತ್ತೇನೆ ಎಂದು ಮಾತು ಕೊಟ್ಟುಬರುವಂತೆ ಷರತ್ತು ವಿಧಿಸಿ ಮಧ್ಯಪ್ರದೇಶ ಹಯಕೋರ್ಟ್‌ ಷರತ್ತುಬದ್ದ ಜೀಮೀನು ನೀಡಿತ್ತು.

ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.

ವಿಚಾರ ವೇಳೆ ವಾದ ಮಂಡಿಸಿದ ಅಟಾರ್ನಿ ಜನರಲ್‌ ವೇಣುಗೋಪಾಲ್‌,  ಮಧ್ಯಪ್ರದೇಶ ಹೈಕೋರ್ಟ್‌ ಅದೇಶವು ಖಂಡನೀಯವಾಗಿದೆ. ಇಂತಹ ಆದೇಶಗಳನ್ನು ನ್ಯಾಯಾಂಗ ಅನುಮತಿಸುವುದಿಲ್ಲ. ಲಿಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿಭಾಯಿಸಿಲು ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತ್ತು ರಾಜ್ಯ ಅಕಾಡೆಮಿಗಳು ಲಿಂಗ ಸಂವೇದನೆಯ ಕುರಿತು ನ್ಯಾಯಾಧೀಶರುಗಳಿಗೆ ಶಿಕ್ಷಣಕಲಿಸಬೇಕು ತಿಳಿಸಿದರು.

“ನ್ಯಾಯಾಧೀಶರು ಲಿಂಗ ಸಂವೇದನೆ ಶಿಕ್ಷಣ ಪಡೆಯಬೇಕು. ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯು ಲಿಂಗ ಸಂವೇದನೆಯ ಬಗ್ಗೆ ಒಂದು ಭಾಗವನ್ನು ಹೊಂದಿರಬೇಕು. ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತ್ತು ರಾಜ್ಯ ನ್ಯಾಯಾಂಗ ಅಕಾಡೆಮಿಯಲ್ಲಿ ಲಿಂಗ ಸಂವೇದನೆ ಕುರಿತು ಕಾರ್ಯಕ್ರಮಗಳು ಇರಬೇಕು” ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು.

ವಾದವನ್ನು ಆಲಿಸಿದ ನ್ಯಾಯಪೀಠ, ಈ ವಿಷಯದ ಬಗ್ಗೆ ಟಿಪ್ಪಣಿ ನೀಡುವಂತೆ ಕೇಳಿದೆ. ಮುಂದಿನ ವಿಚಾರಣೆಯನ್ನು ಮೂರು ವಾರಗಳ ನಂತರ ನಡೆಸುವುದಾಗಿ ಹೇಳಿದೆ.


ಇದನ್ನೂ ಓದಿ: TRP ಹಗರಣ: ರೇಟಿಂಗ್ ಪಾಯಿಂಟ್ ಹೆಚ್ಚಿಸಲು ವಿಕ್ಷಕರಿಗೆ 15 ಲಕ್ಷ ರೂ. ಕೊಟ್ಟ ರಿಪಬ್ಲಿಕ್‌ ಟಿವಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights