2021 ಕಾಮಿಡಿ ವೈಲ್ಡ್‌ಲೈಫ್ ಫೋಟೋಗ್ರಫಿ ಅವಾರ್ಡ್ಸ್ ಫೈನಲಿಸ್ಟ್‌ ಘೋಷಣೆ : ವೈರಲ್ ಫೋಟೋ ಮಿಸ್ ಮಾಡದೆ ನೋಡಿ…

ಮುದ್ದಾದ ಪ್ರಾಣಿಗಳು ಅಂದ್ರೆ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ. ಚಂದದ ಕಣ್ಮನ ಸೆಳೆಯುವ ಪ್ರಾಣಿ ಪಕ್ಷಿಗಳನ್ನು ನೋಡಲು ಮುಗಿ ಬೀಳುವ ಜನ ನಮ್ಮಲ್ಲಿದ್ದಾರೆ. ಮಾತ್ರವಲ್ಲದೇ ಆ ಪ್ರಾಣಿಗಳನ್ನು ಮತ್ತು ಪಕ್ಷಗಳನ್ನು ಅವಕಾಶವಿದ್ದರೆ ತಮ್ಮೊಂದಿಗೆ ಇಟ್ಟುಕೊಳ್ಳಲು ಆಸೆ ಕೂಡ ಪಡ್ತಾರೆ. ಹೀಗಿರುವಾಗ ಪ್ರಾಣಿ ಪಕ್ಷಗಳ ಕಾಮಿಡಿ ಫೋಟೋಗಳು ನೋಡಲು ಸಿಕ್ಕರೆ ಹೇಗಿರುತ್ತೆ. ನಿಜಕ್ಕೂ ಆ ಫೋಟೋಗಳನ್ನು ನೋಡಲು ಕುತೂಹಲ ಮೂಡದೆ ಇರದು.

ಹೌದು… 2021ರ ಕಾಮಿಡಿ ವೈಲ್ಡ್‌ಲೈಫ್ ಫೋಟೋಗ್ರಫಿ ಅವಾರ್ಡ್ಸ್ ಗಾಗಿ 42 ಫೈನಲಿಸ್ಟ್‌ಗಳನ್ನು ಘೋಷಿಸಿದೆ. ಇದರಲ್ಲಿ ಪ್ರೇಕ್ಷಕರಿಗೆ ತಮ್ಮ ನೆಚ್ಚಿನ ತಮಾಷೆಯ ಫೋಟೋವನ್ನು ಆಯ್ಕೆ ಮಾಡಲು ಮತದಾನಕ್ಕಾಗಿ ಕರೆ ಕೊಡಲಾಗಿದೆ. ಈ ವೇಳೆ ಅತೀ ಹೆಚ್ಚು ಮತವನ್ನು ಗಳಿಸಿದ ಕೆಲ ಪ್ರಾಣಿ ಮತ್ತು ಪಕ್ಷಿಗಳ ಫೋಟೋಗಳನ್ನು ಆಯ್ಕೆ ಮಾಡಿ ಪ್ರಶಸ್ತಿಯನ್ನು ನೀಡಲಾಗುತ್ತದೆ.

2015 ರಲ್ಲಿ  ಕಾಮಿಡಿ ವೈಲ್ಡ್ ಲೈಫ್ ಫೋಟೋಗ್ರಫಿ ಪ್ರಶಸ್ತಿಗಳು ಅಸ್ತಿತ್ವಕ್ಕೆ ಬಂದವು. ಈ ಪ್ರಶಸ್ತಿಗಳನ್ನು ವನ್ಯಜೀವಿಗಳ ಹಾಸ್ಯಮಯ ಮತ್ತು ಅದನ್ನು ರಕ್ಷಿಸುವ ಅಗತ್ಯವನ್ನು ಪ್ರದರ್ಶಿಸುವ ಒಂದು ಭಾಗವಾಗಿ ನೀಡಲಾಗುತ್ತದೆ. ಇದು ವನ್ಯಜೀವಿ ಮತ್ತು ನೈಸರ್ಗಿಕ ಪ್ರಪಂಚದ ಮೇಲೆ ಉತ್ಸಾಹ ಹೊಂದಿರುವ ಪರಿಣಿತರಾದ ಎಲ್ಲರಿಗೂ ಹೆಸರುವಾಸಿಯಾದ ಸ್ಪರ್ಧೆಯಾಗಿ ಬೆಳೆದಿದೆ.

ಈ ವರ್ಷ ಪ್ರಪಂಚದಾದ್ಯಂತ 7,000 ಪ್ಲಸ್ ಫೋಟೋಗಳು ಬಂದಿದ್ದವು. ಇದರಲ್ಲಿ 42 ಅಂತಿಮ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಪ್ರಶಸ್ತಿಗಳನ್ನು ಪೋರ್ಟ್ಫೋಲಿಯೋ ಮತ್ತು ವಿಡಿಯೋವನ್ನು ಆಧರಿಸಿ ನೀಡಲಾಗುತ್ತದೆ.

ಈ ಬಾರಿಯೂ ನೈಸರ್ಗಿಕ ಪ್ರಾಣಿಗಳ ಉಲ್ಲಾಸದ ಛಾಯಾಚಿತ್ರಗಳು ಪ್ರಾಣಿ ಪಕ್ಷಿ ಪ್ರಿಯರ ಗಮನ ಸೆಳೆದಿವೆ. ನಗುವ ಹಾವು ಮತ್ತು ಮುಂಗೋಪದ ಊಸರವಳ್ಳಿಯಿಂದ ಹಿಡಿದು ಮೂರೂ ಜೆಂಟೂ ಪೆಂಗ್ವಿನ್‌ಗಳು ಮತ್ತು ನೃತ್ಯ ಮಾಡುವ ಕಾಂಗರೂಗಳವರೆಗೆ, ಸ್ಪರ್ಧೆಯು ನಿಮ್ಮನ್ನು ನಗಿಸಲು ವೈವಿಧ್ಯಮಯ ತಮಾಷೆಯ ಪ್ರಾಣಿಗಳ ಚಿತ್ರಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಇಂಥಹ ಕೆಲ ಫೋಟೋಗಳು ಇಲ್ಲಿವೆ…

May be an image of wading bird and nature

May be an image of nature

May be an image of nature

May be an image of emperor penguin, nature and text that says "dV PHOTOGRAPHY AWARDS"

May be an image of animal and nature

May be an image of nature

 

May be an image of nature

May be a close-up of nature and text

May be an image of nature

May be an image of outdoors and text that says "The Comedy Wildlife PHOTOGRAPHY AWARDS ©Aditya Kshirsagar/ Comedywildlife hoto.com"

May be an image of bird, nature and text

May be an image of wading bird and nature

May be an image of rabbit

ಈ ವರ್ಷದ ಫೈನಲಿಸ್ಟ್‌ಗಳನ್ನು ಮೊದಲ ಬಾರಿಗೆ ಸೆಪ್ಟೆಂಬರ್ 18ರಿಂದ 21 ರವೆಗೆ ಯುನೈಟೆಡ್ ಕಿಂಗ್‌ಡಂನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಫೋಟೋಗ್ರಫಿ ಶೋನಲ್ಲಿ ಪ್ರದರ್ಶಿಸಲಾಯಿತು. ಅಕ್ಟೋಬರ್ 12 ರಂದು ಮತದಾನ ಮುಕ್ತಾಯವಾಗುತ್ತದೆ ಮತ್ತು ಅಕ್ಟೋಬರ್ 22 ರಂದು ವಿಜೇತರನ್ನು ಘೋಷಿಸಲಾಗುತ್ತದೆ ಎಂದು ಸಂಸ್ಥಾಪಕರಾದ ಪೌಲ್ ಜಾಯ್ನ್ಸನ್-ಹಿಕ್ಸ್ ಎಂಬಿಇ ಮತ್ತು ಟಾಮ್ ಸುಲ್ಲಂ, .

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights