ಫ್ಯಾಕ್ಟ್‌ಚೆಕ್ : ಚೀನಾದಲ್ಲಿ ಕೀಟಗಳ ಮಳೆ ಸುರಿಯುತ್ತಿದೆಯಂತೆ! ಇದರ ರಹಸ್ಯ ಏನು ಗೊತ್ತೆ?
ಚೀನಾ ಸದಾ ಸುದ್ದಿಯಲ್ಲಿರಬೇಕು, ಇಲ್ಲದಿದ್ದರೆ ಚೀನಾಕ್ಕೆ ತಿಂದ ಅನ್ನ ಜೀರ್ಣವಾಗುವುದಿಲ್ಲ, ಕೊರೋನಾ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ನೆಗೆಟೀವ್ ಶೇಡ್‌ನಲ್ಲಿ ಫೇಮಸ್ ಆಗಿದ್ದ ಚೀನಾಕ್ಕೆ ಈಗ ಮತ್ತೊಂದು ಗಂಡಾಂತರ ಒದಗಿ ಬಂದಿದೆ. ಚೀನಾದಲ್ಲಿ ವಿಚಿತ್ರ ವಿದ್ಯಾಮಾನವೊಂದು ಕಂಡುಬಂದಿದ್ದು ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಕೀಟಗಳ ಮಳೆಯಾಗುತ್ತಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
ಚೀನಾದ ರಾಜಧಾನಿ ಬೀಜಿಂಗ್‌ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೀಟಗಳ ಮಳೆ ಚೀನಾದಲ್ಲಿ ಎಷ್ಟು ವ್ಯಾಪಕವಾಗಿದೆ ಎಂದರೆ, ಚೀನಾದ ರಸ್ತೆಗಳ ಮೇಲೆ ನಿಲ್ಲಿಸಿರುವ ಕಾರುಗಳು ಹಾಗೂ ರಸ್ತೆಗಳ ಮೇಲೆ ಎಲ್ಲೆಂದರಲ್ಲಿ ಕೀಟಗಳು ಬಿದ್ದಿವೆ. ಆಕಾಶದಿಂದ ಮಳೆ ಬೀಳುವ ರೀತಿಯಲ್ಲಿಯೇ ಕೀಟಗಳು ನೆಲಕ್ಕೆ ಬೀಳುತ್ತಿವೆ ಎಂದು ಪ್ರತಿಪಾದಿಸಿ ಫೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
https://twitter.com/TheInsiderPaper/status/1634283529054965814?ref_src=twsrc%5Etfw%7Ctwcamp%5Etweetembed%7Ctwterm%5E1634283529054965814%7Ctwgr%5E6823d744f37312ccab47691ac14498f0dfbc2f96%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FTheInsiderPaper%2Fstatus%2F1634283529054965814%3Fref_src%3Dtwsrc5Etfw
ಬೀಜಿಂಗ್‌ನ ರಸ್ತೆಯ ಮೇಲಿರುವ ಕಾರ್‌ಗಳ ಮೇಲೆ ಕೀಟಗಳ ರೀತಿಯ ಜೀವಿಗಳು ಬಿದ್ದಿರುವುದನ್ನು ಕಾಣಬಹುದಾಗಿದೆ. ಏಷ್ಯಾನೆಟ್ ನ್ಯೂಸ್ ಈ ವಿಡಿಯೋದ ಸತ್ಯಾಸತ್ಯತೆ ಪರಿಶೀಲನೆ ಮಾಡಿಲ್ಲ. ಬೀಜಿಂಗ್‌ನಲ್ಲಿ ರಸ್ತೆಗಳ ಪಕ್ಕದಲ್ಲಿ ನಿಲ್ಲಿಸಿದ ಕಾರುಗಳ ಮೇಲೆ ಕಂಬಳಿಹುಳಗಳ ತರಹದ ಧೂಳಿನ ಕಂದು ಬಣ್ಣದ ಜೀವಿಗಳು ಬಿದ್ದಿವೆ. ಇನ್‌ಸೈಡರ್ ಪೇಪರ್ ಇಂಥ ಕೆಲವೊಂದು ವಿಡಿಯೋಗಳನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಜನರು ಆಕಾಶದಿಂದ ಮಳೆಯ ರೀತಿಯಲ್ಲಿ ಬೀಳುವ ಹುಳಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಛತ್ರಿಗಳ ಮೊರೆ ಹೋಗಿದ್ದಾರೆ ಎಂದು ಪೋಸ್ಟ್ ಮಾಡಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್‌ಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದಲ್ಲಿ ಮಾಡಿರುವ ಪ್ರತಿಪಾದನೆ ಸುಳ್ಳು ಮತ್ತು ನಕಲಿ ಎಂದು ತಿಳಿದು ಬಂದಿದೆ. ಚೀನಾದ ಪತ್ರಕರ್ತ ಶೆನ್ ಶಿವೈ ಅವರು ಈ ವೀಡಿಯೊ ನಕಲಿ ಎಂದು ಹೇಳಿದ್ದಾರೆ ಮತ್ತು ಬೀಜಿಂಗ್ ನಗರವು ಇತ್ತೀಚಿನ ದಿನಗಳಲ್ಲಿ ಯಾವುದೇ ಮಳೆಗೆ ಸಾಕ್ಷಿಯಾಗಲಿಲ್ಲ. “ನಾನು ಬೀಜಿಂಗ್‌ನಲ್ಲಿದ್ದೇನೆ ಮತ್ತು ಈ ವೀಡಿಯೊ ನಕಲಿಯಾಗಿದೆ. ಬೀಜಿಂಗ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಮಳೆಯಾಗಿಲ್ಲ, ”ಎಂದು ಶಿವೆ ಟ್ವೀಟ್ ಮಾಡಿದ್ದಾರೆ.
https://twitter.com/Vxujianing/status/1634353069604605953?ref_src=twsrc%5Etfw%7Ctwcamp%5Etweetembed%7Ctwterm%5E1634353069604605953%7Ctwgr%5E26826e765af48fa8c5916c1c44f3acc3743bf683%7Ctwcon%5Es1_&ref_url=https%3A%2F%2Fwww.outlookindia.com%2Finternational%2F-worm-rain-in-china-this-bizarre-leaves-internet-stunned-residents-asked-to-take-shelter-news-269320
ವೈರಲ್ ವಿಡಿಯೋಗೆ ಬಂದಿರುವ ಕಮೆಂಟ್‌ಗಳ ಮೇಲೆ ಕಣ್ಣಾಡಿಸಿದಾಗ, ಕೆಲವರು ಈ ವೀಡಿಯೊ ನಕಲಿ ಎಂದು ಹೇಳಿದ್ದಲ್ಲದೆ, ಅದಕ್ಕೆ ವಿಡಿಯೋದಲ್ಲಿಯೇ ಸಾಕ್ಷಿ ಇದೆ. ಎಂದಿದ್ದಾರೆ. ಹುಳಗಳು ಕಾರುಗಳ ಮೇಲೆ ಮಾತ್ರವೇ ಇವೆ. ಪಾದಚಾರಿ ಮಾರ್ಗದಲ್ಲಿ ಎಲ್ಲೂ ಹುಳಗಳು ಬಿದ್ದಿಲ್ಲ ಎಂದು ಹೇಳಿದ್ದಾರೆ. ಇವು ಹುಳಗಳೇ ಅಲ್ಲ. ಜಂತುಗಳ ರೀತಿಯಲ್ಲಿ ಕಾಣಿಸುವ ಹೂವುಗಳಾಗಿರಬಹುದು.
“ವಸಂತಕಾಲದಲ್ಲಿ ಪಾಪ್ಲರ್ ಮರಗಳಿಂದ ಹೂವುಗಳು ಈ ರೀತಿ ಗಾಳಿಯಲ್ಲಿ ಹಾರಿಕೊಂಡು ಬಂದಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ವಿಡಿಯೋದಲ್ಲಿ ಕಾರುಗಳ ಮೇಲಿರುವ ಹುಳುಗಳಂತಹ ವಸ್ತುಗಳು ಹರಿದಾಡುತ್ತಿರುವುದು ಕಾಣಿಸುವುದಿಲ್ಲ. ಬದಲಾಗಿ ಕಾರುಗಳಿಗೆ ಅಂಟಿಕೊಂಡಂತಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಚೀನಾದಲ್ಲಿ ವಸಂತ ಮಾಸದಲ್ಲಿ ಬೀಸುವ ಜೋರು ಗಾಳಿಗೆ ಪಾಪ್ಲರ್ ಮರದಿಂದ ಹಣ್ಣಾಗಿ ಉದುರಿದ ಹೂಗಳನ್ನು ಕೀಟ ಎಂದು ಭಾವಿಸಿ, ಚೀನಾದಲ್ಲಿ ಕೀಟಗಳ ಮಳೆ ಸುರಿದಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆದರೆ ಇದು ಕಂಬಳಿ ಹುಳಗಳಲ್ಲ, ಕೀಟದಂತೆ ಕಾಣುವ ಹೂಗಳು ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್ : ಈ ಫೋಟೊದಲ್ಲಿರುವ ಮಹಿಳೆ ಮೋದಿ ಪತ್ನಿ ಜಶೋದಾಬೆನ್ ಅಲ್ಲ! ಮತ್ತ್ಯಾರು?