ಫ್ಯಾಕ್ಟ್‌ಚೆಕ್ : ಮದುವೆ ದಿಬ್ಬಣಕ್ಕೆಂದು ಹೆಲಿಕಾಪ್ಟರ್‌ನಲ್ಲಿ ಬಂದ ವಧು ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾದಳೇ?

ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾದ 2 ನಿಮಿಷಗಳ ವೀಡಿಯೊ ಕ್ಲಿಪ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ವಿವಾಹ ಸಮಾರಂಭಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ವಧು-ವರರು ತಮ್ಮ ಪೋಷಕರು ಮತ್ತು ಬಂಧುಗಳ ಕಣ್ಣೆದುರೆ ಕ್ಷಣಾರ್ಧದಲ್ಲಿ ನೋಡು ನೋಡುತ್ತಿದಂತೆ ಹೆಲಿಕಾಪ್ಟರ್ ಅಪಘಾತದ ಬೆಂಕಿಗೆ ಆಹುತಿಯಾದರು ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

https://twitter.com/ketanjain1234/status/1634073626222936066

“ವಧು ಮತ್ತು ವರರು ಐಷಾರಾಮಿ ಮದುವೆಯ ಹೆಲಿಕಾಪ್ಟರ್‌ನಲ್ಲಿ ಬಂದು ಇಳಿಯುತ್ತಾರೆ, ಎಲ್ಲಾ ಕನಸುಗಳು ಕ್ಷಣದಲ್ಲಿ ಮಾಯವಾಗುತ್ತವೆ. ತಮ್ಮ ಮಕ್ಕಳು ಅಸಹಾಯಕರಾಗಿ ಸಾಯುವುದನ್ನು ನೋಡುತ್ತಿರುವ ಪಾಲಕರು, ಆಹ್ವಾನಿತ ಅತಿಥಿಗಳೂ. ಸಂಪತ್ತಿನ ಬಗ್ಗೆ ಎಂದಿಗೂ ಹೆಮ್ಮೆಪಡಬೇಡಿ. ಐಷಾರಾಮಿ ಮದುವೆಯ ಭವಿಷ್ಯ ನೋಡಿ”  ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಘಟನೆ ನಿಜವಾಗಿ ನಡೆದಿದೆಯೇ, ವಧು ವರರು ಸಜೀವ ದಹನವಾಗಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 15, ಜೂನ್ 2018ರಲ್ಲಿ ‘ಕೆನ್ನೆತ್ ಮಗರಾ’ ಎಂಬ ಫೇಸ್‌ಬುಕ್ ಬಳಕೆದಾರರೊಬ್ಬರು ಮಾಡಿದ ಪೋಸ್ಟ್‌ವೊಂದು ಲಭ್ಯವಾಗಿದೆ. ಈ ಪೋಸ್ಟ್‌ ಪ್ರಕಾರ ಈ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ, ವಧು ವರರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಈ ಲೇಖನದಲ್ಲಿ ಮದುವೆ ನಡೆಯುತ್ತಿದ್ದ ಸ್ಥಳವನ್ನು ಬ್ರೆಜಿಲ್‌ನ ಸಾವೊ ಪಾಲೊದ ಉತ್ತರಕ್ಕಿರುವ ದ್ರಾಕ್ಷಿತೋಟ ಎಂದು ಉಲ್ಲೇಖಿಸಿಲಾಗಿದೆ.

ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಸರ್ಚ್ ಮಾಡಿದಾಗ 6, ಮೇ 2018 ರ ಮಿರರ್ ಲೇಖನವೊಂದು ಲಭ್ಯವಾಗಿದೆ. ಬ್ರೆಜಿಲ್‌ನ ಸಾವೊ ಪಾಲೊದ ಅಗ್ನಿಶಾಮಕ ಇಲಾಖೆಯ ಟ್ವೀಟ್ ಅನ್ನು ಒಳಗೊಂಡ ಲೇಖನದಲ್ಲಿ ಘಟನೆಯನ್ನು ಫೇಸ್‌ಬುಕ್ ರೀತಿಯಲ್ಲೆ ಉಲ್ಲೇಖಿಸಲಾಗಿದ್ದು,  ವಧು ಮತ್ತು ಪೈಲೆಟ್ ಯಾವುದೇ ಪ್ರಾಣಾಪಾಯವಿಲ್ಲದೆ ಸಣ್ಣ ಅಂತರದಲ್ಲಿ ಪಾರಾಗಿದ್ದಾರೆ ಎಂದು ವರದಿ ಮಾಡಿದೆ.

https://twitter.com/Estadao/status/992907493520171008?ref_src=twsrc%5Etfw%7Ctwcamp%5Etweetembed%7Ctwterm%5E992907493520171008%7Ctwgr%5Eb6d3ccd8df6927c54544954561776966f1e5844e%7Ctwcon%5Es1_&ref_url=https%3A%2F%2Fen.youturn.in%2Ffactcheck%2Fbride-escaped-helicopter-crash-old-video.html

ಇದಲ್ಲದೆ, ಬ್ರೆಜಿಲ್‌ನ ಪತ್ರಿಕೆಯಲ್ಲಿ, ಎಸ್ಟಾಡಾವೊ 6 ಮೇ 2018 ರಂದು ಅದೇ ಘಟನೆಯಿಂದ ಸೆರೆಹಿಡಿಯಲಾದ ಇದೇ ರೀತಿಯ ವೀಡಿಯೊದೊಂದಿಗೆ ಪ್ರಸಾರ ಮಾಡಿದೆ, ಇದನ್ನು “ವಿನ್ಹೆಡೋದಲ್ಲಿ ಮದುವೆಗೆ ವಧುವನ್ನು ಕರೆತಂದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಮತ್ತು ಮೂವರು ಗಾಯಗೊಂಡಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.

ಮೇ 8, 2018 ರ ಸ್ವತಂತ್ರ ಲೇಖನವು ಹೆಲಿಕಾಪ್ಟರ್ ಅಪಘಾತದ ದೃಶ್ಯಗಳೊಂದಿಗೆ ಘಟನೆಯ ಬಗ್ಗೆ ವರದಿ ಮಾಡಿದೆ. ವಧುವು ಯಾವುದೇ ಗಾಯಗಳಿಲ್ಲದೆ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದು ಮದುವೆ ಮುಂದುವರಿಯಿತು ಎಂದು ಉಲ್ಲೇಖಿಸಲಾಗಿದೆ. ಇನ್ನಿಬ್ಬರು ಪ್ರಯಾಣಿಕರು, ಮಗು ಮತ್ತು ಛಾಯಾಗ್ರಾಹಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅದು ಹೇಳಿದೆ.

6, ಮೇ 2018 ರ ದಿನಾಂಕದ ಸನ್ ಲೇಖನವು ಹೆಲಿಕಾಪ್ಟರ್‌ನಿಂದ ವಧುವನ್ನು ರಕ್ಷಿಸಿದ ಚಿತ್ರ ಮತ್ತು ಮದುವೆಯ ಫೋಟೋ ಸೇರಿದಂತೆ ಘಟನೆಯ ಅನೇಕ ಚಿತ್ರಗಳನ್ನು ಪ್ರಕಟಿಸಿರುವುದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೇ 5, 2018 ರಂದು ಈ ಘಟನೆಯನ್ನು ಬ್ರೆಜಿಲಿಯನ್ ನ್ಯೂಸ್ ಪೋರ್ಟಲ್ G1 ವರದಿ ಮಾಡಿದ್ದು ಹೆಲಿಕಾಪ್ಟರ್‌ನಲ್ಲಿ ನಾಲ್ಕು ಜನರಿದ್ದರು – ಪೈಲಟ್, ಮಗು, ಫೋಟೋಗ್ರಾಫರ್ ಮತ್ತು ವಧು. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಧು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅಪಘಾತದ ನಂತರ ದಂಪತಿಗಳು ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದು, ಮದುವೆ ಸುಸೂತ್ರವಾಗಿ ನಡೆದಿದೆ ಎಂದು ವರದಿಯಾಗಿದೆ.

ಮದುವೆ ಸಮಾರಂಭದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಜೀವಗಳನ್ನು ಬಲಿ ತೆಗೆದುಕೊಂಡ ಬೇರೆ ಬೇರೆ ಘಟನೆಗಳು ನಡೆದಿದ್ದರೂ, ಈ ನಿರ್ದಿಷ್ಟ ಹೆಲಿಕಾಪ್ಟರ್ ಅಪಘಾತದಿಂದ ವಧು ಮತ್ತು ಇತರರು ಸುರಕ್ಷಿತವಾಗಿದ್ದಾರೆ ಮತ್ತು ಮದುವೆಯನ್ನು ಯೋಜನೆಯಂತೆ ನಡೆಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ:  ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಈ ಫೋಟೊದಲ್ಲಿರುವ ಮಹಿಳೆ ಮೋದಿ ಪತ್ನಿ ಜಶೋದಾಬೆನ್ ಅಲ್ಲ! ಮತ್ತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights