ಹಸಮಣೆ ಏರಿ 22 ದಿನಕ್ಕೆ ವಿಚ್ಚೇದಕ್ಕೆ ಅರ್ಜಿ ಸಲ್ಲಿಸಿದ 78 ವರ್ಷದ ವರ, 17 ವರ್ಷದ ವಧು..!

ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ವಧು ವರರ ವಯಸ್ಸಿನ ಇತಿ ಮಿತಿ ಎಲ್ಲೆ ಮೀರುತ್ತಿದೆ. ಮಧುಗಿಂತ 61 ವರ್ಷ ಅಧಿಕ ವಯಸ್ಸಿನ ವಧು  ಮದುವೆಯಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದು ವಿಶೇಷ ಅಂದರೆ ಇಬ್ಬರು ಮದುವೆಯಾಗಿ 22 ದಿನದಲ್ಲೇ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇಂಡೋನೇಷ್ಯಾದ 78 ವರ್ಷದ ಅಬಾ ಸರ್ನಾ 17 ವರ್ಷದ ನೋವಿ ನವಿತಾಳೊಂದಿಗೆ ವಿವಾಹವಾದರು. ಇವರಿಬ್ಬರಿಗೆ 61 ವರ್ಷ ಅಂತರವಿದೆ. ವಯಸ್ಸಿನ ಭಾರೀ ಅಂತರದಿಂದಲೇ ಈ ಜೋಡಿ ಸುದ್ದಿ ಮಾಡಿತ್ತು. ಆದರೆ, ಇವರ ದಾಂಪತ್ಯ 22 ದಿನಗಳಲ್ಲೇ ಮುರಿದು ಬಿದ್ದಿದೆ. ಕಳೆದ ವಾರವಷ್ಟೇ ಇವರು ವಿಷದಷೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ವಿಚ್ಚೇದನ ಪತ್ರ ನೋಡಿದ ನವಿತಾ ಕುಟುಂಬಸ್ಥರು ಆಶ್ಚರ್ಯಗೊಂಡಿದ್ದಾರೆ. ಯಾಕೆಂದರೆ ಇವರಿಬ್ಬರ ಸಂಬಂಧದಲ್ಲಿ ಯಾವುದೇ ತೋಮದರೆ ಇರಲಿಲ್ಲ. ಯಾವುದೇ ತೊಂದರೆ ಇಲ್ಲದೇ ಮದುವೆಯಾಗಿದ್ದರು. ಹುಡುಗಿ ಕುಟುಂಬದಲ್ಲಿ ಮದುವೆಗೆ ಯಾವುದೇ ಆಕ್ಷೇಪವಿರಲಿಲ್ಲ. ಆದರೆ ಅಬಾ ಮತ್ತು ಕುಟುಂಬದಿಂದ ಸಮಸ್ಯೆ ಎದುರಾಗಿತ್ತು. ಹೀಗಾಗಿ ವಿವಾಹ ಮುರಿದು ಬೀಳಲು ಕಾರಣ ಎಂದು ನವಿತಾ ಸಹೋದರಿ ಇಯಾನ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ವರ ವಧಿವಿನ ಕುಟುಂಬಕ್ಕೆ ವಧುದಕ್ಷಿಣೆ ನೀಡುವುದು ಸಾಮಾನ್ಯ ಪದ್ಧತಿಯಾಗಿರುವುದರಿಂದ ಅಬಾ ಮದುವೆ ಸಂದರ್ಭದಲ್ಲಿ ವಧುಗೆ ನೀಡಿದ ಮೋಟಾರ್ ಸೈಕಲ್, ಹಾಸಿಗೆ, ಆರ್ ಎಂ 2,819 ಅಂದರೆ ಭಾರತದ 50,000 ರೂಪಾಯಿಯನ್ನು ವಾಪಸ್ ಪಡೆದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights