ಹುಟ್ಟುಹಬ್ಬದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ : ನೆಚ್ಚಿನ ನಾಯಕನಿಗೆ ಶುಭಾಶಯಗಳ ಮಹಾಪೂರ..
ಆಧುನಿಕ ಭಾರತದ ಶ್ರೇಷ್ಠ ಮತ್ತು ಅತ್ಯಂತ ಯಶಸ್ವಿ ಆಟಗಾರ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ತಮ್ಮ 32 ನೇ ಹುಟ್ಟುಹಬ್ಬವನ್ನು ಇಂದು (ನವೆಂಬರ್ 5 ರ ಗುರುವಾರ) ಆಚರಿಸಿಕೊಳ್ಳುತ್ತಿದ್ಧಾರೆ. ಐಪಿಎಲ್ 202ರ0 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೆಚ್ಚಿನ ನಾಯಕನಿಗೆ ಶುಭಾಶಯ ತಿಳಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರು ಬಾರಿ ಸೋತಿದೆ ಆದರೆ ವಿರಾಟ್ ಕೊಹ್ಲಿ ಅವರ ತಂಡ ಈ ಋತುವಿನಲ್ಲಿ ಮೊದಲ ಬಾರಿಗೆ ಜಿಂಕ್ಸ್ ಅನ್ನು ಮುರಿದು ಪ್ರಶಸ್ತಿಯನ್ನು ಗೆಲ್ಲಲು ನಿರ್ಧರಿಸಿದೆ.
ಐಪಿಎಲ್ ಸಲುವಾಗಿ ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಕೊಹ್ಲಿ ದಂಪತಿ, ಅಲ್ಲೇ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದೆ. ವಿರಾಟ್ ಕೊಹ್ಲಿಗೆ ಟ್ವೀಟ್ ಮಾಡಿ ಸುರೇಶ್ ರೈನಾ, ಅಜಿಂಕ್ಯ ರಹಾನೆ, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಇಶಾಂತ್ ಶರ್ಮಾ, ವೃದ್ಧಿಮಾನ್ ಸಹಾ ಸೇರಿದಂತೆ ಕ್ರಿಕೆಟ್, ಸಿನಿಮಾ ಕ್ಷೇತ್ರಗಳ ಅನೇಕ ತಾರೆಯರು ಟ್ವೀಟ್ ಮಾಡಿದ್ದಾರೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮತ್ತು ಬಿಸಿಸಿಐ ಟ್ವೀಟ್ ಕೂಡ ಗಮನ ಸೆಳೆಯುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ನಟ ಅನುಷ್ಕಾ ಶರ್ಮಾ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ವಿರಾಟ್ ಕೊಹ್ಲಿ 2021 ರ ಜನವರಿಯಲ್ಲಿ ಅನುಷ್ಕಾ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ ಎಂಬ ಸುವಾರ್ತೆಯನ್ನು ಘೋಷಿಸಿದರು.