ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಗೆ 14 ದಿನಗಳ ನ್ಯಾಯಾಂಗ ಬಂಧನ..!
ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಮಹಾರಾಷ್ಟ್ರದ ನ್ಯಾಯಾಲಯ ನಿನ್ನೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. 2018ರಲ್ಲಿ 53 ವರ್ಷದ ಇಂಟೀರಿಯರ್ ಡಿಸೈನರ್ ಅವರ ಆತ್ಮಹತ್ಯೆ ಪ್ರಕರಣವೊಂದನ್ನು ಪುನ: ತೆರೆದಿರುವ ಪೊಲೀಸರು, ಆ ಪ್ರಕರಣಕ್ಕೆ ಸಂಬಂದಿಸಿದಂತೆ ಅರ್ನಬ್ ಅವರನ್ನು ಬಂಧಿಸಲಾಯಿತು. ಈ ಪ್ರಕರಣವನ್ನು ಹಿಂದಿನ ಸರ್ಕಾರದ ಅಡಿಯಲ್ಲಿ ಮರೆಯಲಾಗಿತ್ತು ಆದರೆ ಕುಟುಂಬ ಮನವಿಯ ನಂತರ ಇತ್ತೀಚೆಗೆ ಮತ್ತೆ ತಲೆ ಎತ್ತಿದೆ.
ಬಂಧನಕ್ಕೊಳಗಾದಾಗ ಅರ್ನಬ್ ಮೇಲಿನ ದೈಹಿಕವಾಗಿ ಹಲ್ಲೆ ಆರೋಪವನ್ನು ತಳ್ಳಿಹಾಕಿದ ಅಲಿಬಾಗ್ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಬಂಧನದ ಸಮಯದಲ್ಲಿ 13 ನಿಮಿಷಗಳ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಹೇಳುವಂತೆ ಸಹಕಾರ ನೀಡುವಂತೆ ಪೊಲೀಸರು ಸಂಪಾದಕರೊಂದಿಗೆ ಮನವಿ ಮಾಡುತ್ತಾರೆ. ಕೊನೆಗೆ ಪೊಲೀಸರು ಆತನನ್ನು ಎಳೆದೊಯ್ಯುತ್ತಾರೆ.
ಪೊಲೀಸರ ಈ ನಡೆಯನ್ನು ವಿರೋಧಿಸಿದ್ದ ಗೋಸ್ವಾಮಿ ತಮ್ಮ ವಿರುದ್ಧದ ಪ್ರಕರಣವನ್ನು ಕೈಬಿಡುವಂತೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ಜಾಮೀನು ಸಲ್ಲಿಸುವ ನಿರೀಕ್ಷೆಯಿದೆ. ಸುಮಾರು ಆರು ಗಂಟೆಗಳ ಕಾಳ ದೀರ್ಘ ವಿಚಾರಣೆಯ ನಂತರ ಗೋಸ್ವಾಮಿಯನ್ನು ಕಳೆದ ರಾತ್ರಿ ಜೈಲಿಗೆ ಕರೆದೊಯ್ಯಲಾಯಿತು. ವಿಚಾರಣೆ ಬಹುತೇಕ ಮಧ್ಯರಾತ್ರಿಯವರೆಗೆ ನಡೆದಿದೆ.
ಅರ್ನಾಬ್ ಗೋಸ್ವಾಮಿಯ ಬಂಧನವನ್ನು ಹಲವಾರು ಕೇಂದ್ರ ಸಚಿವರು ವಿರೋಧಿಸಿದ್ದರು.

