IAS ಜಿಹಾದ್:’ UPSC ಸೇವೆಗಳಲ್ಲಿ ಮುಸ್ಲಿಮರ ಆಕ್ರಮಣ’ ಕಾರ್ಯಕ್ರಮ ಪ್ರಸಾರಕ್ಕೆ ಅವಕಾಶ ನೀಡಿದ ಬಿಜೆಪಿ ಸರ್ಕಾರ  

ನಾಗರಿಕ ಸೇವೆಗಳಲ್ಲಿ “ಮುಸ್ಲಿಮರ ಒಳನುಸುಳುವಿಕೆ” ಎಂದು ವಿಶೇ‍ಷ ಕಾರ್ಯಕ್ರಮ ಪ್ರಸಾರ ಮಾಡಲು ಸುದರ್ಶನ್‌ ಸುದ್ದಿ ವಾಹಿನಿಗೆ ಮೋದಿ ಸರ್ಕಾರ ಅನುಮತಿ ನೀಡಿದೆ ಎಂದು ಲೀಫ್ಲೆಟ್.ಇನ್ ವರದಿ ಮಾಡಿದೆ.

ಆದರೆ, ಪ್ರೋಗ್ರಾಂ ಕೋಡ್‌ಅನ್ನು ಉಲ್ಲಂಘಿಸದಂತೆ ಕಾರ್ಯಕ್ರಮದ ಪ್ರಸಾರ ಮಾಡಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಪ್ರೋಗ್ರಾಂ ಕೋಡ್‌ ಉಲ್ಲಂಘನೆ ಕಂಡುಬಂದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸುದರ್ಶನ್‌ ಚಾನೆಲ್‌ಗೆ ನಿರ್ದೇಶನ ನೀಡಿದೆ.

ಮುಸ್ಲಿಮರ ಒಳನುಸುಳುವಿಕೆ ಟೈಟಲ್‌ನ ಕಾರ್ಯಕ್ರಮವು ಯಾವುದೇ ಕಾನೂನನ್ನು ಉಲ್ಲಂಘಿಸುವುದಿಲ್ಲ. ಒಂದು ವೇಳೆ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸುದರ್ಶನ್‌ ಚಾನೆಲ್‌ ಲಿಖಿತವಾಗಿ ಹೇಳಿದೆ.

ಸುದರ್ಶನ್‌ ಟಿವಿಯ ‘ಬಿಂದಾಸ್‌ ಬೋಲ್‌’ ಶೀರ್ಷಿಕೆಯ ಕಾರ್ಯಕ್ರಮದ ಪ್ರಸಾರವನ್ನು ದೆಹಲಿ ಹೈಕೋರ್ಟ್‌ ತಡೆಹಿಡಿದಿದೆ.

ಅವರ ಪ್ರೋಮೋದಲ್ಲಿ ‘ಸರ್ಕಾರಿ ಸೇವೆಗಳಲ್ಲಿ ಮುಸ್ಲಿಮರು ಒಳನುಸುಳುವು ಪಿತೂರಿಯ ದೊಡ್ಡ ಜಾಲ’ ಎಂದು ಕಾರ್ಯಕ್ರಮದ ಪ್ರಸಾರಕ್ಕೆ ಚಾನೆಲ್‌ ಸಜ್ಜಾಗಿದೆ. ಈ ಮೂಲಕ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳು ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಬಹಿರಂಗವಾಗಿ ದ್ವೇಷ ಭಿತ್ತುವ ಕಾರ್ಯಕ್ರಮದಲ್ಲಿ ಚಾನೆಲ್‌ನ ಎಡಿಟರ್‌-ಇನ್‌-ಚೀಫ್‌ ಸರೇಶ್‌ ಚಾವಂಕೆ ಅವರು ಪಾಲ್ಗೊಂಡಿದ್ದಾರೆ ಎಂದು ವಕೀಲ ಶಾದನ್ ಫರಸತ್‌ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಈ ಹಿಂದೆ, ಇದೇ ಆರೋಪದೊಂದಿಗೆ ಬೇರೊಂದು ಮನವಿಯ ವಿಚಾರಣೆ ನಡೆಸಿದ್ದ, ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ನ್ಯಾಯಪೀಠ, ಸುದರ್ಶನ್ ಚಾನೆಲ್‌ನ ಇದೇ ಕಾರ್ಯಕ್ರಮವನ್ನು ತಡೆಯಲು ನಿರಾಕರಿಸಿತ್ತು.


ಇದನ್ನೂ ಓದಿ: UPSC ಪಾಸಾದ ಜಾಮಿಯಾದ ವಿದ್ಯಾರ್ಥಿಗಳ ವಿರುದ್ಧ ದ್ವೇಷದ ಪ್ರೋಮೊ ಪ್ರಸಾರ: ನಿರೂಪಕನ ವಿರುದ್ಧ ದೂರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights