ಮದ್ಯ ಮಾರಾಟಕ್ಕೆ ನಿರ್ಬಂಧ : ಆ್ಯಸಿಡ್ ಅನ್ನು ಬಿಯರ್ ಎಂದು ಕುಡಿದ ವ್ಯಕ್ತಿ ಸಾವು!

ಲಾಖ್ ಡೌನ್ ನಿಂದಾಗಿ ಎಲ್ಲಾ ಕಡೆಗೆ ಮದ್ಯ ಮಾರಾಟ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನೂರಾರು ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ. ಆದರೆ ಕೆಲ ಮದ್ಯವ್ಯಸನಿಗಳು ಮದ್ಯ ಸಿಗದೇ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದ್ದು, ಮದ್ಯ ಸಿಗದೆ ಚಿಂತೆಗೀಡಾಗಿದ್ದ ವ್ಯಕ್ತಿ ಬಿಯರ್ ಎಂದು ಬಿಯರ್ ಬಾಟಲಿಯಲ್ಲಿ ಇಟ್ಟಿದ್ದ ಆ್ಯಸಿಡ್ ಸೇವಿಸಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಹೌದು… ಮಧ್ಯಪ್ರದೇಶದ ಚಕ್ಕಿ ಕ್ರಾಸಿಂಗ್ ನಿವಾಸಿ ಸುರೇಶ್ ಸಜಲ್ಕರ್ (50) ಎಂಬಾತ ಆ್ಯಸಿಡ್ ಅನ್ನು ಬಿಯರ್ ಎಂದು ತಪ್ಪಾಗಿ ಭಾವಿಸಿ ಕುಡಿದು ಸಾವಿಗೀಡಾಗಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಆ್ಯಸಿಡ್ ಕುಡಿದ ತಕ್ಷಣವೇ ಆತನ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತುಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಟಿ ಟಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಜೀವ್ ಚೌಕ್ಸೆ ಹೇಳಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಪ್ರಕಟಣೆ ಹೊರಡಿಸಿದ್ದು, ಕೊರೋನಾ ಲಾಕ್‌ಡೌನ್ ವಿಸ್ತರಣೆಯಾದ ಪರಿಣಾಮ ರಾಜ್ಯದಲ್ಲಿ ಮೇ 3 ರವರೆಗೆ ಸಿನೆಮಾ ಹಾಲ್‌ಗಳು ಮತ್ತು ಮಾಲ್‌ಗಳು ಮುಚ್ಚಲ್ಪಡುತ್ತವೆ, ಏಪ್ರಿಲ್ 20 ರವರೆಗೆ ಮದ್ಯದಂಗಡಿಗಳು ಮುಚ್ಚಲ್ಪಡುತ್ತವೆ.

ದೇಶದೆಲ್ಲೆಡೆ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದ್ದು ಕಟ್ಟುನಿಟ್ಟಾಗಿ ಮದ್ಯಮಾರಾಟ ನಿಲ್ಲಿಸಲಾಗಿದೆ. ಹೀಗಾಗಿ ರಾಜ್ಯಗಳಲ್ಲಿ ಮದ್ಯ ವ್ಯಸನಿಗಳಿಗೆ ಸಿಗುತ್ತಿಲ್ಲ. ಇದರಿಂದಾಗಿ ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಇನ್ನೂ ಕೆಲವು ಕಡೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಅಧಿಕವಾಗಿ ದಾಖಲಾಗಿವೆ. ಅದೆಷ್ಟೋ ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ. ಆದರೆ ಮದ್ಯ ಮಾರಾಟವಾಗಬೇಕು ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದ್ದು ಮೇ 3ರವರೆಗೆ ಮದ್ಯಮಾರಾಟಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದೇಳಲಾಗುತ್ತಿದೆ. ಕೇಂದ್ರ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಾ? ಇಲ್ವಾ? ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights