ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್‌; ಆರ್ಥಿಕ ಸುಧಾರಣೆ ನಿರ್ಧಾರ

ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಸದ್ಯ ಮೇ 03ರ ವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಕೈಗಾರಿಕಾ ಕ್ಷೇತ್ರಗಳು, ಉದ್ದಿಮೆಗಳು ಸೇರಿದಂತೆ ಹಲವಾರು ಕ್ಷೇತ್ರಗಳು ಸಂಪೂರ್ಣ ಬಂದ್‌ ಆಗಿವೆ. ಎಲ್ಲಾ ಕ್ಷೇತ್ರಗಳು ಸಾಮರ್ಥ್ಯಾನುಸಾರ ಕಾರ್ಯನಿರ್ವಹಿಸದ ಕಾರಣ ಆರ್ಥಿಕತೆಯ ಸ್ಥಿತಿಯ ಬಗ್ಗೆ ಆತಂಕ ಮೂಢಿಸಿದೆ. ಈ ಮಧ್ಯೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಲಾಕ್‌ಡೌನ್‌ ಅನ್ನು ಮೇ 03ರ ವರೆಗೆ ವಿಸ್ತರಿಸಿರುವುದಾಗಿ ಮಾಹಿತಿ ನೀಡಿದ್ದ ಪ್ರಧಾನಿ ಮೋದಿಯವರು, ಗ್ರಾಮೀಣ ಪ್ರದೇಶಗಳಲ್ಲಿನ ಕೆಲವು ಕೈಗಾರಿಕೆಗಳು, ಇ-ಕಾಮರ್ಸ್, ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಕೃಷಿಗೆ ಏಪ್ರಿಲ್ 20 ರ ನಂತರ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದರು. ಈ ಕ್ಷೇತ್ರಗಳಿಗೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗುವುದರ ಜೊತೆಗೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ಹೊಸ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಭಾರತದಲ್ಲಿನ ಸೋಂಕಿತರು ಇಲ್ಲದ ಮತ್ತು ಕನಿಷ್ಠ ಸೋಂಕಿತರನ್ನು ಹೊಂದಿರುವ ಭಾಗಗಳಲ್ಲಿ ಒಂದು ವಾರದ ನಂತರ ಲಾಕ್‌ಡೌನ್‌ ಸಡಿಸಿ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.

ದೀರ್ಘಕಾಲದ ಲಾಕ್‌ಡೌನ್ ಸಮಯದಲ್ಲಿ ಲಕ್ಷಾಂತರ ಜನರ ತೊಂದರೆಗೆ ಸಿಲುಕಿಕೊಳ್ಳುವುದನ್ನು ಕಡಿಮೆ ಮಾಡಲು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಮತ್ತು ಕಟ್ಟಡಗಳ ನಿರ್ಮಾಣ ಮತ್ತು ಐಟಿ ಯಂತ್ರಾಂಶ ತಯಾರಿಕೆಗೆ ಅವಕಾಶ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಏಪ್ರಿಲ್ 20ರ ನಂತರ ಅಂತರ ರಾಜ್ಯಗಳಲ್ಲಿ ಅಗತ್ಯ ಮತ್ತು ತುರ್ತು ಅಗತ್ಯವಲ್ಲದ ವಸ್ತುಗಳನ್ನು, ಸರಕುಗಳನ್ನು ಸಾಗಿಸಲು ಅನುಮತಿ ನೀಡಲಾಗುವುದು. ಹೆದ್ದಾರಿ ಧಾಬಾಗಳು, ಟ್ರಕ್ ರಿಪೇರಿ ಅಂಗಡಿಗಳು ಮತ್ತು ಸರ್ಕಾರಿ ಚಟುವಟಿಕೆಗಳಿಗಾಗಿ ಕಾಲ್ ಸೆಂಟರ್‌ಗಳನ್ನೂ ಏಪ್ರಿಲ್ 20ರಿಂದ ಮತ್ತೆ ತೆರೆಯಬಹುದು. ಆದ್ದರಿಂದ ಔಷಧೀಯ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನಾ ಘಟಕಗಳನ್ನು ಕಾರ್ಯನಿರ್ವಹಿಸುತ್ತವೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ) ಅನುಷ್ಠಾನಗೊಳಿಸಿದ ನಂತರ ವಿಶೇಷ ಆರ್ಥಿಕ ವಲಯಗಳು, ಕೈಗಾರಿಕಾ ಕ್ಷೇತ್ರಗಳು ಮತ್ತು ಕೈಗಾರಿಕಾ ಟೌನ್‌ಶಿಪ್‌ಗಳಲ್ಲಿ ಪ್ರವೇಶ ನಿಯಂತ್ರಣ ಹೊಂದಿರುವ ಉತ್ಪಾದನೆ ಮತ್ತು ಇತರ ಕೈಗಾರಿಕಾ ಸಂಸ್ಥೆಗಳಿಗೆ ಅವಕಾಶ ನೀಡಲಾಗುವುದು. ಐಟಿ ತಂತ್ರಜ್ಞಾನ ಮತ್ತು ಅಗತ್ಯ ವಸ್ತುಗಳ ತಯಾರಿಕೆ ಮತ್ತು ಪ್ಯಾಕೇಜಿಂಗ್ ಪುನರಾರಂಭಿಸಬಹುದು ಎಂದು ನಿರ್ಧರಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights