ಪೊಗರು ಸಿನಿಮಾದ ವಿವಾದಿತ ದೃಶ್ಯಗಳ ಬಗ್ಗೆ ಧ್ರುವಾ ಹೇಳಿದ್ದೇನು..?
ಪೊಗರು ಸಿನಿಮಾದಲ್ಲಿನ ಕೆಲ ದೃಶ್ಯಗಳು ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿವೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಚಿತ್ರದ ನಿರ್ಮಾಪಕ ನಂದಕಿಶೋರ್ ಬ್ರಾಹ್ಮಣ ಸಮುದಾಯಕ್ಕೆ ಕ್ಷಮೆ ಕೇಳಿದ್ದರು. ಇದರ ಜೊತೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಕ್ಷಮೆ ಕೇಳಿದ್ದಾರೆ.
ಪೊಗರು ಸಿನಿಮಾ ತೆರೆ ಕಂಡು ನಾಳೆಗೆ ಬರೊಬ್ಬರಿ ಒಂದು ವಾರವಾಗುತ್ತದೆ. ಬಿಡುಗಡೆಯಾದ ದಿನದಿಂದ ಬಾಕ್ಸ್ ಆಫೀಸ್ ನಲ್ಲಿ 45 ಕೋಟಿ ಗಳಿಸಿದೆ. ವಿವಾದಿತ ದೃಶ್ಯಗಳ ಬಗ್ಗೆ ಮಾತನಾಡಿದ ಧ್ರುವ, ಸಿನಿಮಾ ಮಾಡೋದು ಜನರಿಗಾಗಿ. ಮಾನವರು-ದಾನವರ ನಡುವಿನ ಸಮರ. ನೋವಾಗಿದ್ದರೆ ನಾವು ಅದನ್ನ ತೆಗೆದು ಹಾಕುತ್ತೇವೆ. ಎಡಿಟ್ ಮಾಡೋಣಾ. ಸಿನಿಮಾದ 14 ದೃಶ್ಯಗಳನ್ನು ಕಟ್ ಮಾಡಿದ ಬೆನ್ನಲ್ಲೆ ಸಿನಿಮಾ 8 ನಿಮಿಷ ಕಡಿಮೆಯಾಗಿದೆ” ಎಂದಿದ್ದಾರೆ.
ಈ ವೇಳೆ ಅಭಿನಯದಿಂದ ಹಾಗೂ ಸಿನಿಮಾದಿಂದ ನೋವಾಗಿದ್ದರೆ ನಿಮ್ಮ ಮನೆ ಮಗ ಎಂದು ಕ್ಷಮಿಸಿ ಎಂದು ಕೇಳಿದ್ದಾರೆ. ಇಲ್ಲಿಗೆ ವಿವಾದ ಸುಕಾಂತ್ಯ ಕಂಡಿದೆ.