ಫ್ಯಾಕ್ಟ್‌ಚೆಕ್: ಭಾರತದಲ್ಲಿ ಕಲಬೆರಕೆ ಹಾಲಿನ ಸೇವನೆಯಿಂದ 2025ಕ್ಕೆ ಶೇ 87% ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂದು WHO ಹೇಳಿದೆಯೇ?

“ಭಾರತದಲ್ಲಿ ಲಭ್ಯವಿರುವ ಕಲಬೆರಕೆ ಹಾಲಿನಿಂದ ಮುಂದಿನ ವರ್ಷಗಳಲ್ಲಿ 87% ಭಾರತೀಯರು ಕ್ಯಾನ್ಸರ್‌ಗೆ ಒಳಗಾಗುತ್ತಾರೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯೊಂದು ಪ್ರಸಾರವಾಗುತ್ತಿದೆ. ಹಾಗಿದ್ದರೆ ಭಾರತದಲ್ಲಿ ಈಗ ಪೂರೈಕೆ ಆಗುತ್ತಿರುವ ಹಾಲು ಸಂಪೂರ್ಣ ಕಲಬೆರಕೆಯೇ? ಮುಂದೆ ಎಲ್ಲರೂ ಕ್ಯಾನ್ಸರ್‌ಗೆ ತುತ್ತಾಗುವರೆ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

India

ಫ್ಯಾಕ್ಟ್‌ಚೆಕ್:

2025 ರ ವೇಳೆಗೆ 87 ಪ್ರತಿಶತ ಭಾರತೀಯರು ಕ್ಯಾನ್ಸರ್‌ಗೆ ಬಲಿಯಾಗಬಹುದು ಎಂದು WHO ಸಲಹೆಯನ್ನು ನೀಡಿದೆ ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗಿರುವ ಸುದ್ದಿಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ ವಿಶ್ವ ಆರೋಗ್ಯ ಸಂಸ್ಥೆ (WHO) ಇಂತಹ ಹೇಳಿಕೆಗಳನ್ನು ನೀಡಿರುವ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ.

ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹಾಲು ಕಲಬೆರಕೆಯಾಗಿದೆ ಎಂದು  ಎಂದು ಹರಿದಾಡುತ್ತಿರುವ ಸುದ್ದಿ ನಕಲಿ ಎಂದು PIB ಫ್ಯಾಕ್ಟ್‌ಚೆಕ್ ಹೇಳಿದೆ.

PIB ಫ್ಯಾಕ್ಟ್ ಚೆಕ್ ಕಲಬೆರಕೆ ಹಾಲಿನ  ಸುದ್ದಿಗೆ ಸಂಬಂಧಿಸಿದಂತೆ ತನ್ನ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದು  “ಭಾರತದಲ್ಲಿ ಲಭ್ಯವಿರುವ ಹಾಲಿನ ಕಲಬೆರಕೆಯಿಂದ 8 ವರ್ಷಗಳಲ್ಲಿ 87% ಭಾರತೀಯರು ಕ್ಯಾನ್ಸರ್‌ಗೆ ಒಳಗಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿಲ್ಲ. ಈ ಸುದ್ದಿ ಸುಳ್ಳು. WHO ಅಂತಹ ಯಾವುದೇ ಸಲಹೆಯನ್ನು ನೀಡಿಲ್ಲ” ಎಂದು ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಪ್ರತಿಪಾನೆಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಕಲಬೆರಕೆ ಹಾಲು ಸೇವನೆಯಿಂದಾಗಿ ಭಾರತದಲ್ಲಿ ಮುಂದಿನ 8 ವರ್ಷಗಳಲ್ಲಿ ಶೇ 87ರಷ್ಟು ಭಾರತೀಯರು ಕ್ಯಾನ್ಸರ್‌ಗೆ ತತ್ತಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿಲ್ಲ ಎಂದು PIB ಸ್ಪಷ್ಟನೆ  ನೀಡಿದ್ದು, ವೈರಲ್ ಸುದ್ದಿ ಸುಳ್ಳು ಎಂದು ವರದಿ ಮಾಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ರಿಪಬ್ಲಿಕ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನಕಲಿ ರುದ್ರಾಕ್ಷಿ ಮಣಿಯ ಬಗ್ಗೆ ಇರಲಿ ಎಚ್ಚರ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights