ಕೊರೊನ ತಂದ ಭಾಗ್ಯ: ಅಮೆಜಾನ್ ಸಿಇಒ ಜೆಫ್ ಬೆಜೋಸ್ ಸಂಪತ್ತು ವೃದ್ಧಿ

ಅಮೆಜಾನ್ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಉದ್ಯಮಿ ಜೆಫ್ ಬೆಜೋಸ್ ಅವರ ಸಂಪತ್ತು ಕೊರೊನ ಸಾಂಕ್ರಾಮಿಕದ ಸಮಯದಲ್ಲಿ 24 ಬಿಲಿಯನ್ ಡಾಲರ್ ನಷ್ಟು ವೃದ್ಧಿಯಾಗಿದೆ. ಅಮೆಜಾನ್ ಸಂಸ್ಥೆಯಲ್ಲಿ 11% ಷೇರುಗಳನ್ನು ಇವರು ಹೊಂದಿದ್ದಾರೆ.

ಕೊರೊನ ಸಾಂಕ್ರಾಮಿಕದಿಂದ ಬಹುತೇಕ ವಿಶ್ವದಾದ್ಯಂತ ಲಾಕ್ ಡೌನ್  ಆಗಿರುವುದರಿಂದ, ಬೇರೆಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಇದು ಅಮೆಜಾನ್ ಮಾರಾಟಕ್ಕೆ ಲಾಭವಾಗಿದೆ ಎನ್ನಲಾಗಿದೆ. ಅಮೆಜಾನ್ ಮಾರಾಟ ಕ್ರಿಸ್ಮಸ್ ರಜೆಯ ಸಮಯದಲ್ಲಿ ಆಗುವಷ್ಟು ಎತ್ತರಕ್ಕೆ ಏರಿದೆ ಎನ್ನಲಾಗಿದೆ. ಅಮೆಜಾನ್ ಷೇರು ಮೌಲ್ಯ ಮಂಗಳವಾರಕ್ಕೆ 5.3% ಏರಿದ್ದು ಇದು ದಾಖಲೆಯಾಗಿದೆ.

ಕೊರೊನ ಸಾಂಕ್ರಾಮಿಕ ಪ್ರಾರಂಭವಾದಾಗ ಷೇರು ಮಾರುಕಟ್ಟೆ ಕುಸಿಯುವ ಸಮಯದಲ್ಲಿ ಬೆಜೋಸ್ ತಮ್ಮಲ್ಲಿದ್ದ ಷೇರುಗಳ ಭಾಗವನ್ನು  ಮಾರಿ ಲಾಭ ಮಾಡಿಕೊಂಡಿದ್ದರು. ಈಗ ಮಾರ್ಚ್ ನಲ್ಲಿ ಕಳೆದುಕೊಂಡಿದ್ದ ಷೇರು ಮೌಲ್ಯವನ್ನೆಲ್ಲ ಅಮೆಜಾನ್ ವಾಪಸ್ ಪಡೆದಿದೆ.

ಅಮೆಜಾನ್ ತನ್ನ ನೌಕರರನ್ನು ಕೊರೊನ ಸಾಂಕ್ರಾಮಿಕದ ಸಮಯದಲ್ಲಿ ಸರಿಯಾದ ರಕ್ಷಣೆ ಒದಗಿಸುತ್ತಿಲ್ಲ ಎಂಬ ವರದಿಗಳ ನಡುವೆಯೇ ಅಮೆಜಾನ್ ಷೇರುಗಳ ಮೌಲ್ಯ ವೃದ್ಧಿಸಿದೆ. ಹಲವು ನೌಕರರು ಕೊರೊನ ಸೋಂಕಿಗೆ ಗುರಿಯಾಗಿರುವುದು ದ ಗಾರ್ಡಿಯನ್ ಪತ್ರಿಕೆ ವರದಿ ಮಾಡಿತ್ತು. ಮಾರ್ಚ್ 31ರಂದು ಕ್ಯಾಲಿಫೋರ್ನಿಯದ ದಾಸ್ತಾನು ಒಂದರ ಕಾರ್ಯವ್ಯವಸ್ಥಾಪಕ ಮೃತರಾಗಿದ್ದರು.

ಹೆಚ್ಚಿನ ಸುರಕ್ಷತೆ ಬೇಕೆಂದು ಹಲವು ನೌಕರರು ಧರಣಿ ಹೂಡಿದ್ದರು. ಇದೆ ನಿಟ್ಟಿನಲ್ಲಿ ಕ್ರಿಸ್ ಸ್ಮಾಲ್ಸ್ ಎಂಬುವವರನ್ನು ಅಮೆಜಾನ್ ಕೆಲಸದಿಂದ ವಜಾ ಮಾಡಿತ್ತು. ಹಲವು ನೌಕರರು ಕೋವಿಡ್-19 ಸೋಂಕಿಗೆ  ಗುರಿಯಾಗಿರುವ ಹಿನ್ನಲೆಯಲ್ಲಿ ದಾಸ್ತಾನುಗಳನ್ನು ಮುಚ್ಚುವಂತೆ ಧರಣಿ ನಿರತ ನೌಕರರು ಆಗ್ರಹಿಸಿದ್ದರಿ.

ಇವೆಲ್ಲಾ ವಿವಾದಗಳ ನಡುವೆಯೇ ಅಮೆಜಾನ್ ಹೆಚ್ಚಿರುವ ಬೇಡಿಕೆಯನ್ನು ಪೂರೈಸಲು ಅಮೆರಿಕಾದಲ್ಲಿ 1 ಲಕ್ಷ ಜನರನ್ನು ಉದ್ಯೋಗಕ್ಕೆ ತೆಗೆದುಕೊಂಡಿದೆ ಮತ್ತೆ ಇನ್ನೂ 75 ಸಾವಿರ ಜನರನ್ನು ತೆಗೆದುಕೊಳ್ಳುವುದಾಗಿ ಹೇಳಿದೆ.

2017 ರಿಂದ ವಿಶ್ವದ ಅತಿ ಹೆಚ್ಚು ಶ್ರೀಮಂತನಾಗಿ ಹೊರಹೊಮ್ಮಿರುವ ಜೆಫ್ ಬೆಜೋಜ್, 2020ರಲ್ಲಿಯೂ ಸಂಪತ್ತನ್ನು ವೃದ್ಧಿಸಿಕೊಳ್ಳುತ್ತಿರುವ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರು ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights