ಅಪರೇಷನ್ ಕೊರೊನಾ: ರಾಜಸ್ಥಾನ ಹಾಗೂ ಮಹಾರಾಷ್ಟ್ರದ ಈ 2 ಸ್ಥಳದಲ್ಲಿಲ್ಲ ಸೋಂಕಿಗೆ ಜಾಗ

ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿರುವುದು ಆತಂಕಕ್ಕೆ ಗುರಿ ಮಾಡಿದ ಬೆನ್ನಲ್ಲೆ ದೇಶದ ರಾಜಸ್ಥಾನ ಹಾಗೂ ಮಹಾರಾಷ್ಟ್ರದ 2 ಸ್ಥಳಗಳು ಕೊರೊನಾ  ಸೋಂಕು ನಿಯಂತ್ರಣ ಮಾಡುವಲ್ಲಿ ದೇಶಕ್ಕೆ ಮಾದರಿಯಾಗಿವೆ. ಆ ಸ್ಥಳಗ ಬಗ್ಗೆ ಮಾಹಿತಿ ಇಲ್ಲದೆ ನೋಡಿ.

ಕೊರೊನಾದಿಂದ ರಾಜಸ್ಥಾನದ ಬಿಲ್ವಾರ ಕಂಪ್ಲೀಟ್ ಸೇಫ್ ಆಗಿದೆ. ಜವಳಿ ಕ್ಷೇತ್ರಕ್ಕೆ ಹೆಸರಾದ ಈ ಸಣ್ಣ ನಗರದ ಹೆಸರು ವಿಶ್ವದೆಲ್ಲೆಡೆ ಹರಿದಾಡುತ್ತಿದೆ. ರೆಡ್ ಜೋನ್ ಆಗಿದ್ದ ಈ ಪುಟ್ಟ ನಗರ ಸದ್ಯ ಹಸಿರು ಬಣ್ಣಕ್ಕೆ ತಿರುಗಿದೆ. ಅದು ಹೇಗೆ ಗೊತ್ತಾ..?

ಕೊರೊನಾ ವೇಗವಾಗಿ ಹರಡುವ ಆರಂಭದಲ್ಲೇ ಬಿಲ್ವಾರದಲ್ಲಿ 850 ತಂಡಗಳನ್ನು ಬೀದಿಗಿಳಿಸಿದ್ದರು. ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಜಾಲಾಡಿ ಪರೀಕ್ಷೆಗೊಳಪಡಿಸಲಾಗಿತ್ತು. 4 ಲಕ್ಕೂ ಹೆಚ್ಚು ಮನೆಗಳ ತಪಾಸಣೆ ಮಾಡಿ, 17 ಸಾವಿರಕ್ಕೂ ಹೆಚ್ಚು ಸೋಂಕಿತರನ್ನು ಐಸೋಲೇಷನ್ ನಲ್ಲಿ ಇಡಲಾಯಿತು. ಹೀಗಾಗಿ ಬಿಲ್ವಾರದಲ್ಲಿ ಏ.9 ರಿಂದ ಪತ್ತೆಯಾಗಿಲ್ಲ ಹೊಸ ಪ್ರಕರಣಗಳು ಇಲ್ಲ.

ಬಿಲ್ವಾಮ ಜಿಲ್ಲಾಧಿಕಾರಿಯಾದ ಡಿಸಿ ಟೀನಾ ಡಾಬಿ ಅವರಿಂದ ಕೊರೊನಾ ಸೋಂಕನ್ನು  ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿದೆ. ಆ ಮೂಲಕ ಜಗತ್ತಿಗೆ ಮಾದರಿಯಾಗಿದ್ದಾರೆ. ಆರಂಭದಲ್ಲಿ 144 ಸೆಕ್ಷನ್ ಪ್ರಕಾರ ಕರ್ಫ್ಯೂ ಜಾರಿ ಮಾಡಿದ್ದಾರೆ. ಈ ವೇಳೆ ದಿನ ಬಳಕೆ ವಸ್ತುಗಳು ಹೋಮ್ ಡೆಲಿವರಿ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ವಸ್ತುಗಳನ್ನು ಮನೆಗೆ ಕಳುಹಿಸಿದ್ದಾರೆ. ನಗರದ ಗಡಿಗಳನ್ನು ಬಂದ್ ಮಾಡಿ, ಓಟಾಟ ರಹಿತ ವಲಯವನ್ನಾಗಿ ಮಾಡಿದ್ದಾರೆ. 22 ಸಂಸ್ಥೆ 11 ಸಾವಿರ 6 ನೂರು ಹಾಸ್ಟಲ್ ಬೆಡ್ ವ್ಯವಸ್ಥೆ ಮಾಡಿ, 25 ಐಸೋಲೇಷನ್ ಮಾಡಲಾಗಿತ್ತು .

ಜೊತೆಗೆ ದಿನದ 24 ಗಂಟೆ ಇಲ್ಲಿನ ಸ್ಕ್ರೀನಿಂಗ್ ವ್ಯವಸ್ಥೆ ಉತ್ತಮವಾಗಿ ಮಾಡಲಾಗಿತ್ತು. ಶೀಘ್ರ ಸೋಂಕಿತರ ಪಟ್ಟಿಗೆ ತಜ್ಞರ ತಂಡವನ್ನು ಕಳುಹಿಸಿಕೊಡಲಾಗುತ್ತಿತ್ತು. ಪ್ರತಿಯೊಬ್ಬರ ಮೇಲೆ ಹದ್ದಿನ ಕಣ್ಣು ಇಡಲಾಗಿತ್ತು. 10 ಜನರಿಗೆ ಒಬ್ಬ ಮೇಲ್ವಚಾರಕನನ್ನು ನಿಯೋಜನೆ ಮಾಡಲಾಗಿತ್ತು. ಅಷ್ಟು ಮಾತ್ರವಲ್ಲದೇ ಎಲ್ಲಾ ಸೋಂಕಿತರ ಪರಿಚಿತರಿಗೆ ಮೊದಲ ಆಧ್ಯತೆ ನೀಡಿದ್ದಾರೆ. ಹೆಚ್ ಐ ವಿ ಗೆ ನೀಡಲಾಗುವ ಚಿಕಿತ್ಸೆ ಸೋಂಕಿತರಿಗೆ ನೀಡಿ ಗುಣಮುಖರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ವ್ಯವಸ್ಥೆಯನ್ನು ಇಲ್ಲಿನ ಜಿಲ್ಲಾಡಳಿತ ತುರ್ತಾಗಿ ಮಾಡಿತ್ತು. ಇಲ್ಲಿನ ಜನರು ಕೂಡ ಅಷ್ಟೇ ಸಹಕರಿಸಿದ್ದಾರೆ. ಇದರಿಂದಾಗಿ ಬಿಲ್ವಾರದಲ್ಲಿ ಶೇ90 ರಷ್ಟು ಸೋಂಕಿತರು ಕಡಿಮೆಯಾಗಿದ್ದಾರೆ. ಈ ಪುಟ್ಟ ನಗರ ಸದ್ಯ ದೇಶಕ್ಕೆ ಮಾದರಿಯಾಗಿದೆ.

ಇನ್ನೂ ಕೊರೊನಾಗೆ ಮಹಾರಾಷ್ಟ್ರ ಇಸ್ಲಾಪುರ ಸೆಡ್ಡು ಹೊಡೆದಿದೆ. ಇದು ಪುಣೆಯಿಂದ 3ಕಿ.ಮಿ ದೂರದಲ್ಲಿದೆ. ಇಲ್ಲಿ ಸೋಂಕಿತರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ. ಇಸ್ಲಾಪುರ ದೇಶಕ್ಕೆ ಮಾದರಿಯಾಗಿದೆ. ದೊಡ್ಡ ನಗರಗಳ ಮುಂದೆ ಪುಟ್ಟ ನಗರಗಳು ದೊಡ್ಡ ಸಾಧನೆ ಮಾಡಿ ಸೈ ಎನಿಸಿಕೊಂಡಿವೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಅಪರೇಷನ್ ಕೊರೊನಾ: ರಾಜಸ್ಥಾನ ಹಾಗೂ ಮಹಾರಾಷ್ಟ್ರದ ಈ 2 ಸ್ಥಳದಲ್ಲಿಲ್ಲ ಸೋಂಕಿಗೆ ಜಾಗ

  • October 13, 2020 at 8:11 pm
    Permalink

    This paragraph provides clear idea in favor of the
    new viewers of blogging, that really how to do running a blog.

    Reply

Leave a Reply

Your email address will not be published.

Verified by MonsterInsights