ಇಂದು ಚೀನಾದಿಂದ ಭಾರತಕ್ಕೆ ಆಮದಾಗಲಿರುವ 6.5 ಲಕ್ಷ ರಾಪಿಡ್‌ ಟೆಸ್ಟಿಂಗ್‌ ಕಿಟ್‌…!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳನ್ನು ಪತ್ತೆ ಹಚ್ಚಲು 6.5 ಲಕ್ಷ ಕಿಟ್ ಗಳನ್ನು ಚೀನಾದಿಂದ ತರಿಸಿಕೊಳ್ಳಲಾಗುತ್ತಿದೆ.

ಹೌದು… ಭಾರತ ಚೀನಾದ 3 ಕಂಪೆನಿಗಳಿಂದ ಸುಮಾರು 6.5 ಲಕ್ಷ ರಾಪಿಡ್‌ ಟೆಸ್ಟಿಂಗ್‌ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ.

ಚೀನಾದ ಗುವಾಂಗ್ಜ್ ನಲ್ಲಿ ಕಸ್ಟಮ್ಸ್ ನಿಂದ ಒಪ್ಪಿಗೆ ಸಿಕ್ಕಿದ್ದು ಇಂದು ಸಂಜೆ ನವದೆಹಲಿಗೆ ಬರಲಿದೆ. ಒಟ್ಟು ಮೂರು ಕಂಪನಿಗಳಿಂದ ಭಾರತ ಈ ಕಿಟ್ ಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಈ ಹಿಂದೆ ಜರ್ಮನಿ, ಫ್ರಾನ್ಸ್, ದಕ್ಷಿಣ ಕೊರಿಯಾ, ಇಸ್ರೇಲ್ ದೇಶಗಳಿಗೆ ಚೀನಾದಿಂದ ಪರೀಕ್ಷೆ ನಡೆಸುವ ಕಿಟ್ ಗಳು ರಫ್ತು ಆಗಿತ್ತು. ಈ ದೇಶಗಳ ಆರೋಗ್ಯ ಸಚಿವಾಲಯಗಳು ಈ ಕಿಟ್ ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ತಿರಸ್ಕರಿಸಿತ್ತು.

ಜೊತೆಗೆ ಭಾರತಕ್ಕೂ ಕೆಲವು ಕಳಪೆ ಗುಣಮಟ್ಟದ ಕಿಟ್‌ಗಳನ್ನು ಕಳುಹಿಸಿದೆ, ಅದು ನಿರುಪಯುಕ್ತವಾಗಿದೆ ಎಂದು ಈಗಾಗಲೇ ಹಲವರು ಆರೋಪಿಸಿದ್ದಾರೆ. ಆದಾಗ್ಯೂ, ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾದ ಸರಕುಗಳುಭಾರತದ ದೊಡ್ಡ ಖಾಸಗಿ ಕಂಪನಿಗಳಿಂದ ದೇಣಿಗೆಯಾಗಿ ಸ್ವೀಕರಿಸಲ್ಪಟ್ಟವು ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾದ ಬಳಿಕ ಚೀನಾ ಸರ್ಕಾರ ಗುಣಮಟ್ಟದ ಟೆಸ್ಟ್ ಕಿಟ್ ತಯಾರಿಸುವ ಕಂಪನಿಯನ್ನು ಪಟ್ಟಿ ಮಾಡಿ ವಿವಿಧ ರಾಷ್ಟ್ರಗಳಿಗೆ ನೀಡಿತ್ತು. ಅಷ್ಟೇ ಅಲ್ಲದೇ ಚೀನಾದ ಕಸ್ಟಮ್ಸ್ ವಿಭಾಗವೂ ಈ ಕಿಟ್ ಗಳನ್ನು ಪರೀಕ್ಷೆ ಮಾಡಿ ನಂತರ ಒಪ್ಪಿಗೆ ನೀಡುತ್ತಿದೆ.

ಚೀನಾ ಈ ಕಿಟ್‌ಗಳನ್ನು ಭಾರತ ಸರ್ಕಾರಕ್ಕೆ ದಾನವಾಗಿ ನೀಡಿದೆ ಎಂದು ಸಂಬಂಧಪಟ್ಟ ಅಧಿಕಾರಿಯೊಬ್ಬರು ಎಕನಾಮಿಕ್ಸ್‌ ಟೈಮ್ಸ್‌ಗೆ ತಿಳಿಸಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ. ಏಪ್ರಿಲ್ 5 ರಂದು ಭಾರತಕ್ಕೆ ಆಗಮಿಸಿದ 1,70,000 ಪಿಪಿಇ ಕಿಟ್‌ಗಳಲ್ಲಿ ಸುಮಾರು 50,000 ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿದೆ. 30,000 ಮತ್ತು 10,000 ಪಿಪಿಇ ಕಿಟ್‌ಗಳನ್ನು ಹೊಂದಿರುವ ಎರಡು ಸಣ್ಣ ಸರಕುಗಳು ಸಹ ಪರೀಕ್ಷೆಗಳಲ್ಲಿ ವಿಫಲವಾಗಿವೆ ಎಂದು ಆ ಅಧಿಕಾರಿ ತಿಳಿಸಿದ್ದಾರೆ.

ಹೀಗೆ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಕಿಟ್‌ಗಳನ್ನು ನಮ್ಮ ದೇಶದ ವೈದ್ಯರಿಗೆ ಪೂರೈಕೆ ಮಾಡುವುದು ಸರಿಯಲ್ಲ. ಇದರಿಂದ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರೂ ಸಹ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹಲವರು ಎಚ್ಚರಿಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights