ಅಮ್ಮಾ ನಾನು ತಾಜಾ ಹುಲ್ಲು ತರುವೆನೆಂದು ಕಾಡಿಗೆ ಹೋದ ಬಾಲಕಿ ಮರಳಿ ಬರಲೇ ಇಲ್ಲ…!

ತಾಜಾ ಹುಲ್ಲು ತರುವೆನೆಂದು ಕಾಡಿಗೆ ಹೋದ 12 ವರ್ಷದ ಬಾಲಕಿ ಶವವಾಗಿ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಪುರಂದರ್‌ಪುರದಲ್ಲಿ ನಡೆದಿದೆ.

ಮಂಗಳವಾರ ಬೆಳಿಗ್ಗೆ ಪುರಂದರ್‌ಪುರದ ಮನೆಯಿಂದ 500 ಮೀಟರ್‌ಗಿಂತಲೂ ಕಡಿಮೆ ದೂರದಲ್ಲಿರುವ ಕಾಡಿನಲ್ಲಿ ರಕ್ತಶ್ರಾವದಿಂದ ಕೂಡಿದ ಬಾಲಕಿ ಶವ ಪತ್ತೆಯಾಗಿದ್ದು ಕುಟುಂಬಸ್ಥರು ಗಾಬರಿಯಾಗಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಶಂಕೆ ವ್ಯಕ್ತವಾಗಿದೆ. ಹುಡುಗಿ ಮೂವರು ಸಹೋದರಿಯರಲ್ಲಿ ಹಿರಿಯಳು. ಬಾಲಕಿಯ ತಾಯಿ ಸೋಮವಾರ ಮಧ್ಯಾಹ್ನ ಹತ್ತಿರದ ಕಾಡಿನಲ್ಲಿ ಹುಲ್ಲು ಕತ್ತರಿಸಲು ಹೋಗಿದ್ದರು. ಆಗ ಬಾಲಕಿ ತಾನು ತಾಜಾ ಹುಲ್ಲು ತರಲು ಸೈಕಲ್ ಮೂಲಕ ಹೋಗಿದ್ದಾಳೆ. ಆದರೆ ಹುಡುಗಿ ಸಂಜೆಯಾದರೂ ಹಿಂತಿರುಗಲಿಲ್ಲ. ಹೀಗಾಗಿ ಕುಟುಂಬ ಮತ್ತು ಇತರ ಗ್ರಾಮಸ್ಥರನ್ನು ಆಕೆಗಾಗಿ ಹುಡುಕಾಟವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಅವಳ ಬೈಸಿಕಲ್ ಮತ್ತು ಚಪ್ಪಲಿಗಳು ಸಿಕ್ಕರೂ ಹುಡುಗಿ ಎಲ್ಲಿಯೂ ಸಿಗಲಿಲ್ಲ.

ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರೂ ಶವ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಮಂಗಳವಾರ ಬೆಳಿಗ್ಗೆ ಸ್ಥಳೀಯರು ಬಾಲಕಿ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಶ್ವಾನ ದಳವನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಬಾಲಕಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪ್ರದೀಪ್ಮಾತನಾಡಿ, “ಮಂಗಳವಾರ ಬೆಳಿಗ್ಗೆ ಪುರಂದರ್‌ಪುರ ಪ್ರದೇಶದ ಕಾಡಿನಲ್ಲಿ 12 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಇದು ಘೋರ ಅಪರಾಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎನ್‌ಎಸ್‌ಎ ಅಡಿಯಲ್ಲಿ ಅಪರಾಧಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೊ ಕಾಯ್ದೆಯ ಸೆಕ್ಷನ್ 5 ಮತ್ತು 6 ರ ಹೊರತಾಗಿ ಐಪಿಸಿಯ ಸೆಕ್ಷನ್ 363, 376, 302 ಮತ್ತು 201 ರ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights