ಅಸ್ಸಾಂ ಚುನಾವಣೆ: BJPಗೆ ಭರ್ಜರಿ ಗೆಲುವು ಎಂದ ಸಮೀಕ್ಷೆಗಳು; ಕಾಂಗ್ರೆಸ್ ಕತೆ ಏನು?
ಅಸ್ಸಾಂ ವಿಧಾನಸಭಾಗೆ ಚುನಾವಣೆ ಮುಗಿದಿದ್ದು, ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ನಾಲ್ಕು ಮಾಧ್ಯಮ ಸಂಸ್ಥೆಗಳು ಸಮೀಕ್ಷೆ ನಡೆಸಿದ್ದು, ನಾಲ್ಕೂ ಸಮೀಕ್ಷಗಳು ಅಸ್ಸಾಂನಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂದು ಹೇಳಿವೆ.
ಅಸ್ಸಾಂ ವಿಧಾನಸಭೆಯ 126 ಸ್ಥಾನಗಳ ಪೈಕಿ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 73 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಉಳಿದಂತೆ ಕಾಂಗ್ರೆಸ್ ನೇತೃತ್ವದ ಯುಪಿಎ 52 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು 4 ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಇಂಡಿಯಾ ಟುಡೇ ಮತ್ತು ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ಬಿಜೆಪಿಗೆ ಸಂಪೂರ್ಣ ಬಹುಮತ ಸಿಗಲಿದೆ ಎಂದು ಹೇಳಿದ್ದು, 75-85 ಸ್ಥಾನ ಗೆಲ್ಲಲಿದೆ ಎಂದಿದೆ. ಯುಪಿಎ 40-50 ಸ್ಥಾನ ಗಳಿಸಬಹುದು ಎಂದು ಹೇಳಿವೆ. ಟುಡೇಸ್ ಚಾಣಾಕ್ಯ ಸಮೀಕ್ಷೆಯು ಬಿಜೆಪಿಗೆ 70 ಮತ್ತು ಕಾಂಗ್ರೆಸ್‌ಗೆ 50 ಸ್ಥಾನ ಗೆಲ್ಲುತ್ತವೆ ಎಂದು ಹೇಳಿದೆ.
ದಿ ರಿಪಬ್ಲಿಕ್ ಮತ್ತು ಸಿಎನ್‌ಎಕ್ಸ್ ಸಮೀಕ್ಷೆಯು ಬಿಜೆಪಿ 60-66 ಸ್ಥಾನ, ಕಾಂಗ್ರೆಸ್ 26-28 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.
ಇನ್ನು, ಟೈಮ್ಸ್ ನೌ-ಸಿ ವೋಟರ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 65, ಕಾಂಗ್ರೆಸ್ ನೇತೃತ್ವದ ಕಾಂಗ್ರೆಸ್ 52 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.
ಇದನ್ನೂ ಓದಿ: ಬಂಗಾಳ ಸಮೀಕ್ಷೆ: ಟಿಎಂಸಿಗೆ ಸರಳ ಬಹುಮತ; ಮೂರನೇ ಅವಧಿಗೆ ಮಮತಾ ಸಿಎಂ!

