FACT CHECK | ಆದಾಯ ತೆರಿಗೆ ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂಬುದು ಸುಳ್ಳು
2024–25ರ ಸಾಲಿನ ಐಟಿಆರ್ ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 30, 2025 ಕ್ಕೆ ವಿಸ್ತರಿಸಲಾಗಿದೆ ಎಂದು ಹೇಳುವ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೆಸರಿನ ಸುತ್ತೋಲೆಯೊಂದು
![]()
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು ಪೊಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಇಂತಹ ಸುತ್ತೋಲೆಯನ್ನು ಹೊರಡಿಸಲಾದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಅಧಿಕೃತ ಅಧಿಸೂಚನೆ ಇಲ್ಲ
“ಐಟಿಆರ್ ಗಡುವು ಸೆಪ್ಟೆಂಬರ್ 30” ಎಂದು ಹುಡುಕಿದಾಗ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಅಧಿಕೃತ ಪ್ರಕಟಣೆಗಳು ಕಂಡು ಬಂದಿಲ್ಲ. ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಅಥವಾ ಅದರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲೂ ಅಂತಹ ಸುತ್ತೋಲೆ ಕಂಡುಬಂದಿಲ್ಲ.
A fake news is in circulation stating that the due of filing ITRs (originally due on 31.07.2025, and extended to 15.09.2025) has been further extended to 30.09.2025.
✅ The due date for filing ITRs remains 15.09.2025.
Taxpayers are advised to rely only on official… pic.twitter.com/F7fPEOAztZ
— Income Tax India (@IncomeTaxIndia) September 14, 2025
ಮತ್ತಷ್ಟು ಮಾಹಿತಿಗಾಗಿ ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳ ಖಾತೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಆದಾಯ ತೆರಿಗೆ ಇಲಾಖೆಯು ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಸೆ.15ರಂದು ಒಂದು ಸುತ್ತೋಲೆಯನ್ನು ಪೋಸ್ಟ್ ಮಾಡಿತ್ತು. ಅದರಲ್ಲಿ ಸಿಬಿಡಿಟಿಯು ಆದಾಯ ಲೆಕ್ಕಪತ್ರ ಸಲ್ಲಿಕೆ ವಿವರಗಳನ್ನು ಸಲ್ಲಿಸುವ ಗಡುವನ್ನು ಸೆ.16ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿತ್ತು. ಆ ಬಳಿಕ ಗಡುವವನ್ನು ಇನ್ನಷ್ಟು ವಿಸ್ತರಿಸಿರುವ ಬಗ್ಗೆ ಯಾವುದೇ ಸುತ್ತೋಲೆಯನ್ನು ಪ್ರಕಟಿಸಿಲ್ಲ.
ಆದಾಯ ತೆರಿಗೆ ಇಲಾಖೆಯು ತನ್ನ ಅಧಿಕೃತ ‘ಎಕ್ಸ್’ ಹ್ಯಾಂಡಲ್ನಲ್ಲಿ ವೈರಲ್ ಆಗಿರುವ ಸುತ್ತೋಲೆಯನ್ನು ನಕಲಿ ಎಂದು ಹೇಳಿದ್ದು, ತೆರಿಗೆದಾರರು ಸುಳ್ಳು ಮಾಹಿತಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಿದೆ.
ವೈರಲ್ ಸುತ್ತೋಲೆಯಲ್ಲಿ ತಪ್ಪುಗಳು
ದಾಖಲೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸ್ಪಷ್ಟ ದೋಷಗಳು ಕಂಡುಬಂದವು:
![]()
ವಿಷಯದ ಸಾಲು “15th” ಬದಲಿಗೆ “15st ನೇ” ಎಂದಿದೆ. “ಸೆಪ್ಟೆಂಬರ್ 14” ಅನ್ನು ಪ್ರಸ್ತುತ ಗಡುವು ಎಂದು ಉಲ್ಲೇಖಿಸುತ್ತದೆ, ಇದು ವ್ಯಾಕರಣ ದೋಷ ಮತ್ತು ವಾಸ್ತವಿಕವಾಗಿ ತಪ್ಪಾಗಿದೆ.
ಹಳೆಯ ಪತ್ರಿಕಾ ಪ್ರಕಟಣೆಯ ನಕಲಿ
ರಿವರ್ಸ್ ಇಮೇಜ್ ಸರ್ಚ್ ಮೂಲಕ ವೈರಲ್ ಆಗಿರುವ ಈ ಸುತ್ತೋಲೆಯನ್ನುನ್ನು ಪರಿಶೀಲಿಸಿದಾಗ, ಮೇ 27, 2025 ರ CBDT ಪತ್ರಿಕಾ ಪ್ರಕಟಣೆಯ ನ್ನು ತಿರುಚಿ ಹೀಗೆ ಮಾಡಲಾಗಿದೆ ಎಂದು ಕಂಡುಬಂದಿದೆ. ಆ ಪತ್ರಿಕಾ ಪ್ರಕಟಣೆಯಲ್ಲಿ ಅರ್ಜಿ ಸಲ್ಲಿಕೆಯ ಗಡುವನ್ನು ಜುಲೈ 31 ರಿಂದ ಸೆಪ್ಟೆಂಬರ್ 15, 2025 ರವರೆಗೆ ವಿಸ್ತರಿಸಲಾಗಿತ್ತು. ಬದಲಾದ ದಿನಾಂಕಗಳನ್ನು ಹೊರತುಪಡಿಸಿದರೆ, ಅದರಲ್ಲಿರುವ ಪಠ್ಯ ಒಂದೇ ರೀತಿ ಇದೆ.
ಸೆಪ್ಟೆಂಬರ್ 15, 2025 ರಂದು, CBDT ಐಟಿಆರ್ ಸಲ್ಲಿಕೆಯ ಗಡುವನ್ನು ಒಂದು ದಿನದ ಮಟ್ಟಿಗೆ ಅಂದರೆ ಸೆಪ್ಟೆಂಬರ್ 16, 2025 ರವರೆಗೆ ಮಾತ್ರ ವಿಸ್ತರಿಸಿದೆ. ಈ ಲೇಖನವನ್ನು ಪ್ರಕಟಿಸುವ ಹೊತ್ತಿಗೆ ಯಾವುದೇ ವಿಸ್ತರಣೆ ದಿನಾಂಕವನ್ನು ಘೋಷಿಸಲಾಗಿಲ್ಲ.
ಆದಾಯ ತೆರಿಗೆ ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 30, 2025 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳುವ ವೈರಲ್ ಸುತ್ತೋಲೆ ನಕಲಿಯಾಗಿದೆ. ಅಧಿಕೃತ ವಿಸ್ತರಣೆಯು ಸೆಪ್ಟೆಂಬರ್ 16, 2025 ರವರೆಗೆ ಮಾತ್ರ ಇದೆ. ಹಾಗಾಗಿ ಪೋಸ್ಟ್ನಲ್ಲಿ ಂಆಡಿದ ಪ್ರತಿಪಾದನೆ ತಪ್ಪಾಗಿದೆ.
ಕೃಪೆ: ನ್ಯೂಸ್ ಚೆಕ್ಕರ್
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಂಜಾಬ್ ಪ್ರವಾಹದ ನೀರಿನಲ್ಲಿ ಮುಳುಗಿದ ತಾಯಿಯ ಮೃತ ದೇಹವನ್ನು ಹೊರ ತಗೆಯುತ್ತಿರುವ ಮಗನ ವಿಡಿಯೋದ ಅಸಲಿ ಕಥೆ ಇಲ್ಲಿದೆ ಓದಿ

