ಬಂಗಾಳ ಸಮೀಕ್ಷೆ: ಟಿಎಂಸಿಗೆ ಸರಳ ಬಹುಮತ; ಮೂರನೇ ಅವಧಿಗೆ ಮಮತಾ ಸಿಎಂ!
ಕೊರೊನಾ ಸಂಕಷ್ಟದ ನಡುವೆಯೂ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಗಿದಿವೆ. ಈ ಬೆನ್ನಲ್ಲೇ ಚುನಾವಣಾ ನಂತರದ ಸಮೀಕ್ಷೆಗಳು ಹೊರಬೀಳುತ್ತಿದ್ದು, ಪಶ್ವಿಮ ಬಂಗಾಳದಲ್ಲಿ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೂರನೇ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.
ಪಶ್ಚಿಮ ಬಂಗಾಳ ವಿಧಾನಸಭೆಯ ಒಟ್ಟು 294 ಸ್ಥಾನಗಳ ಪೈಕಿ ಟಿಎಂಸಿ 156 ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ. ಬಿಜೆಪಿ 121 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಉಳಿದಂತೆ ಎಡರಂಗ-ಕಾಂಗ್ರೆಸ್-ಇಂಡಿಯನ್ ಸೆಕ್ಯುಲರ್ ಫ್ರಂಟ್ ಮೈತ್ರಿಕೂಟವು 16 ಸ್ಥಾನಗಳಿಗೆ ಕುಸಿಯಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ.
ಬಂಗಾಳದ ವಿಧಾನಸಭೆಯಲ್ಲಿ 148 ಮ್ಯಾಜಿಕ್ ನಂಬರ್ ಆಗಿದ್ದು, ಟಿಎಂಸಿ ಆರಾಮದಾಯಕವಾಗಿ ಸರಳ ಬಹುಮತ ಪಡೆಯಬಹುದು. ಈ ಮೂಲಕ ಮಮತಾ ಬ್ಯಾನರ್ಜಿ ಅವರು ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಉಳಿಸಿಕೊಳ್ಳಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.
ಆದರೆ, ರಿಪಬ್ಲಿಕ್ ಟಿ.ವಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ ಮುನ್ನಡೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಆಕ್ಸಿಜನ್‌ಗಾಗಿ ನಡುರಸ್ತೆಯಲ್ಲಿ ಪೊಲೀಸರ ಎದುರು ಮಂಡಿಯೂರಿ ಬೇಡಿಕೊಂಡ ಯುವಕ; ವಿಡಿಯೋ ವೈರಲ್ – ಪರಿಸ್ಥಿತಿ ಬಗ್ಗೆ ಅಸಮಾಧಾನ!

