ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಪ್ರಯೋಗಾರ್ಥ ಪರೀಕ್ಷೆ ನಿಲ್ಲಿಸಿದ WHO..

ಸದ್ಯದ ಪರಿಸ್ಥಿತಿಗೆ ಕೊರೊನಾ ಜ್ವರದ ವಿರುದ್ಧ ಭಾರತದಲ್ಲಿ ಯಷಸ್ವಿಯಾಗಿದೆ ಎಂದು ನಂಬಲಾಗಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಮೇಲಿನ ಪ್ರಯೋಗಗಾರ್ಥ ಪರೀಕ್ಷೆಯನ್ನು ವಿಶ್ವ ಆರೋಗ್ಯ ಸಂಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಹೌದು… ‘ಕೋವಿಡ-19 ಸೋಂಕಿತರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ನೀಡಿವುದರಿಂದ ಸಾವನ್ನಪ್ಪಿದ ಸಾಧ್ಯತೆ ಇದೆ ’ ಎಂದು ವೈದ್ಯಕೀಯ ಅಧ್ಯಯನದ ಜರ್ನಲ್ ಲ್ಯಾನ್ಸೆಟ್  ಅಧ್ಯಯನ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪ್ರಯೋಗಾರ್ಥ ಪರೀಕ್ಷೆಯನ್ನು ನಿಲ್ಲಿಸಿದೆ.

ಜೊತೆಗೆ ಈ ಮಾತ್ರ ಸೇವನೆಯಿಂದ ಅಡ್ಡಪರಿಣಾಮಗಳು, ಹೃದಯಾಘಾತವಾಗುವ ಆತಂಕ ವ್ಯಕ್ತಪಡಿಸಿದೆ. ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಅಮೆರಿಕ ಸೇರಿದಂತೆ ಸ್ಪೇನ್, ಜರ್ಮನಿ, ಬಹರೇನ್, ಬ್ರೆಜಿಲ್, ನೇಪಾಳ, ಭೂತಾನ್, ಅಫ್ಘಾನಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾದೇಶ, ಸೀಶೆಲ್ಸ್, ಮಾರಿಷಸ್ ಮತ್ತು ಡೊಮಿನಿಕನ್ ರಿಪಬ್ಲಿಕ್ ದೇಶಗಳಿಗೆ ಮಾತ್ರೆಯನ್ನು ಭಾರತ ರಫ್ತು ಮಾಡಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights