ಸಡಿಲವಾದ Lock down : ಜನರ ಚಲನವಲನ, ಓಡಾಟದ ಮೇಲೆ ’ಡ್ರೋನ್ ’ ಹದ್ದಿನ ಕಣ್ಣು..

ಹೌದು ಲಾಕ್‌ಡೌನ್ ಸಡಿಲದ ಬೆನ್ನಿಗೇ ಜನರ ಚಲನವಲನ, ಓಡಾಟದ ಮೇಲೆ ಹದ್ದಿನ ಕಣ್ಣಿಡಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಆದ್ದರಿಂದ  ಲಾಕ್‌ಡೌನ್ ಅಂತೂ ಇಂತೂ ಸಡಿಲವಾಗಿ ಸ್ವಚ್ಛಂಧವಾಗಿ ರಸ್ತೆಗಿಳಿಯಬಹುದು ಎಂದು ಎಣಿಸಿದ್ದರೇ ಮತ್ತೊಮ್ಮೆ ಯೋಚಿಸುವುದು ಒಳಿತು.

ಅದರಲ್ಲಿಯೂ ರಾಜಧಾನಿ ಬೆಂಗಳುರಿನಲ್ಲಿ ಸಿಕ್ಕಿದ್ದೇ ಅವಕಾಶ ಎಂದು ಜನ ಸ್ವೇಚ್ಛಯಿಂದ ಓಡಾಡುವುದು, ಗುಂಪು ಕಟ್ಟುವುದನ್ನು ತಪ್ಪಿಸಲು ತಂತ್ರಗ್ಞಾನದ ಮೊರೆ ಹೋಗಲು ಸರಕಾರ ತೀರ್ಮಾನಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಕೊಳ್ಳುವಿಕೆ, ಮುಸುಕು ಧರಿಸಿ ಓಡಾಡುವುದು, ಅಂಗಡಿಗಳ ಮುಂದೆ ಜಂಗುಳಿ ಸೇರುವುದನ್ನು ತಪ್ಪಿಸಲು ಕಟ್ಟುನಿಟ್ಟಿನ ನಿಗಾ ಇಡಲಾಗುತ್ತದೆ.

ಲಾಕ್‌ಡೌನ್ ಸಂಬಂಧಪಟ್ಟಂತೆ ಹೊರಡಿಸಲಾಗಿರುವ ನಿಯಂತ್ರಕ ಕ್ಷರಮಗಳು ಸಮರ್ಪಕವಾಗಿ ಪಾಲನೆಯಾಗುತ್ತಿರುವದನ್ನು ಖಾತರಿ ಪಡಿಸಿಕೊಳ್ಳಲು ಸಿಸಿಟಿವಿ ಮತ್ತು ಡ್ರೋನ್ ಕೆಮರಾಗಳನ್ನು ಬಳಸಿಕೊಳ್ಳಲು ಇಲಾಖೆ ಮುಂದಾಗಿದೆ. ಎಲ್ಲ ಪ್ರಮುಖ ಸಾರ್ವಜನಿಕ ಪ್ರದೇಶಗಳು, ರಸ್ತೆ, ಅಂಗಡಿ ಮುಂಗಟ್ಟುಗಳ ಮೇಲೆ ಈ ಡ್ರೋನ್ ಕೆಮರಾಗಳು ಹದ್ದಿನ ಕಣ್ಣು ಇಡಲಿವೆ.

ಸಿಸಿಟಿವಿ ಮತ್ತು ಡ್ರೋನ್‌ಗಳಿಂದ ಸಂಗ್ರವಾಗುವ ಚಿತ್ರಿಕೆಗಳನ್ನು ಕ್ಷಣಕ್ಷಣಕ್ಕೂ ಪರಾಮರ್ಶಿಸಲು ಒಂದು ಪ್ರತ್ಯೇಕ ತಂಡ ರಚನೆ ಮಾಡುವಂತೆ ಆರೋಗ್ಯ ಇಲಾಖೆ ಎಲ್ಲ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಕೆಂಪು ಪಟ್ಟಿಯಲ್ಲಿರುವ ಜಿಲ್ಲೆಗಳಾದ ಬೆಂ. ಗ್ರಾಮಾಂತರ ಹಾಗೂ ಮೈಸೂರಿನಲ್ಲಂತೂ ಜನರ ಓಡಾಟದ ಮೇಲೆ ತೀವ್ರ ನಿಗಾ ಇಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜನರ ಓಡಾಟ ಹೆಚ್ಚಾಗಿರಬಹುದಾದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ವಿಡಿಯೋ ಚಿತ್ರೀಕರಣ ಹಾಗೂ ಡ್ರೋನ್‌ಗಳ ಬಳಕೆ ಮಾಡಲಾಗುವುದು ಎಂದು  ವರದಿಯಾಗಿದೆ. ಲಾಕ್‌ಡೌನ್ ಉಲ್ಲಂಘನೆ ಕಂಡುಬಮದಲ್ಲಿ ಕೂಡಲೇ ಅಧಿಕಾರಿಗಳು ನಿಯಮ ಪಾಲನೆಗೆ ಅಗತ್ಯವಾದ ಕ್ರಮ ತೆಗೆದುಕೊಳ್ಳಲಿದ್ದಾರೆ..

ಇದೇ ವೇಳೆ ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಘೋಷಣೆ ಮಾಡಲಾಗಿದ್ದ ಸಾಲದ ಮೇಲಿನ ಬಡ್ಡಿ ಹಾಗೂ ಇಎಂಐ ಪಾವತಿ ತಡೆ ಅವಧಿ ಇನ್ನಷ್ಟು ವಿಸ್ತರಣೆ ಆಗುವ ಸಾಧ್ಯತೆ ಇದೆ. ಲಾಕ್‌ಡೌನ್‌ ನಿಯಮಗಳ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿದ್ದ ಈ ತಡೆ ಅವಧಿಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸುವ ಬಗ್ಗೆ ರಿಸರ್ವ್ ಬ್ಯಾಂಕು ಚಿಂತನೆ ನಡೆಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights