ಫ್ಯಾಕ್ಟ್‌ಚೆಕ್: ಅಧಿಕಾರಿಗಳ ಮೇಲೆ ರೇಗುವುದು ನಿಲ್ಲಿಸಿ ಎಂದು ಕೇಜ್ರಿವಾಲ್‌ರವರ ಹಳೆಯ ವಿಡಿಯೋ ಹಂಚಿಕೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವ್ಯಕ್ತಿಯೊಬ್ಬರನ್ನು ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಾಷ್ಟ್ರೀಯ ಕಾರ್ಯದರ್ಶಿ ಬಿಜೆವೈಎಂ, ತಜೀಂದರ್ ಪಾಲ್ ಸಿಂಗ್ ಬಗ್ಗಾ ಈ ವೀಡಿಯೊವನ್ನು “ಅವರು ದೆಹಲಿಯ ಮುಖ್ಯಮಂತ್ರಿಯೇ?” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಈ ವೀಡಿಯೊ ಇದೀಗ 4.1K ರೀಟ್ವೀಟ್‌ಗಳು ಮತ್ತು 14.3K ಲೈಕ್‌ಗಳೊಂದಿಗೆ ವೈರಲ್ ಆಗಿದೆ. ಇದಲ್ಲದೆ, ವೀಡಿಯೊದ ಕಾಮೆಂಟ್ ವಿಭಾಗದಲ್ಲಿ ವಿಮರ್ಶಾತ್ಮಕ ಟೀಕೆಗಳೂ ವ್ಯಕ್ತವಾಗಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗಿದೆ. ಕೇಜ್ರಿವಾಲ್ ಜೀ ಅಧಿಕಾರಿಗಳ ಮೇಲೆ ಕಿರಿಚಾಡುವ ಮೂಲಕ, ನೀವು ನಿಮ್ಮ  ದೌರ್ಬಲ್ಯವನ್ನು ತೋರಿಸುತಿದ್ದೀರಿ ನೀವು ಸಜ್ಜನರನ್ನು ಅವರ ಕೆಲಸವನ್ನು ಮಾಡಲು ಕೇಳಿದ್ದೀರಿ, ಅದೇ ರೀತಿ ದೆಹಲಿ ಮತ್ತು ದೇಶದ ಜನ ನೀವು ಮತ್ತು ಉಪ ಮುಖ್ಯಮಂತ್ರಿಯಾದ ಸಿಸೋಡಿಯಾ ಅವರನ್ನು ಕೇಳುತ್ತಿದ್ದಾರೆ, ಯಮುನಾ ನದಿಯನ್ನು ಸ್ವಚ್ಛಗೊಳಿಸುವ ನಿಮ್ಮ ಬದ್ಧತೆಯನ್ನು ತೋರಿಸಿ ಎಂದು. 2015 ರಿಂದ ಭರವಸೆ ಈಡೇರಿಸಿಲ್ಲ, ಇದಕ್ಕೇನು ಹೇಳುತ್ತೀರಿ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯ ಸತ್ಯಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ ಆಮ್ ಆದ್ಮಿ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ “ಆನಂದ್ ಪರ್ಬತ್‌ನಲ್ಲಿನ ಟ್ರಾನ್ಸಿಟ್ ಸರ್ಕ್ಯೂಟ್‌ನಲ್ಲಿನ ಸ್ವಚ್ಛತೆಯನ್ನು ನೋಡಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಘಾತಕ್ಕೊಳಗಾದರು” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಮೇಲಿನ ವೀಡಿಯೊದ 15 ಸೆಕೆಂಡುಗಳ ನಂತರ, ವೈರಲ್ ಆಗಿರುವ ಕ್ಲಿಪ್ ಅನ್ನು ನಾವು ನೋಡಬಹುದು. ಕೇಜ್ರಿವಾಲ್ ಅವರು ಆನಂದ್ ಪರ್ಬತ್‌ನಲ್ಲಿರುವ ಟ್ರಾನ್ಸಿಟ್ ಸರ್ಕ್ಯೂಟ್‌ನಲ್ಲಿ ಸ್ವಚ್ಛತೆಯ ಬಗ್ಗೆ ವಿಚಾರಿಸುತ್ತಿದ್ದರು. ಇದನ್ನು ಜುಲೈ 26, 2018 ರಂದು ಅಪ್‌ಲೋಡ್ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿಯ ಆನಂದ್ ಪರ್ಬತ್‌ನಲ್ಲಿರುವ ಅತಿಥಿ ಗೃಹಗಳ ಶೌಚಾಲಯಗಳ ಪರಿಸ್ಥಿತಿಯನ್ನು ಪರಿಶೀಳಿಸುವ ವೇಳೆ ಅವುಗಳ ನಿರ್ವಹಣೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ 4 ವರ್ಷ ಹಳೆಯದಾದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಯಮುನಾ ನದಿ ಮಾಲಿನ್ಯದ ಬಗ್ಗೆ ಮಾತನಾಡಿ ಎಂದು ಅಣಕಿಸಲು ಹಳೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆಯ ಮೇಲಿನ ನಿರ್ಬಂಧ ತೆಗೆಯಲಾಗಿದೆಯೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights