ನಾಳೆಯಿಂದ ‘ಹೌಸ್ ಫುಲ್’ ಶೋ ರನ್..! ಇಂದು ಹೊಸ ಗೈಡ್ ಲೈನ್ ರಿಲೀಸ್!

ಫೆ.5ರಿಂದ ಥಿಯೇಟರ್ ಗಳಲ್ಲಿ 100% ಟಿಕೇಟ್ ಹಂಚಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಜೊತೆಗೆ ಹೊಸ ಮಾರ್ಗಸೂಚಿಯನ್ನು ಇನ್ನೂ ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಲಿದೆ.

ಹೌದು.. ಮೊನ್ನೆಯಷ್ಟೇ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ” ಮಾರ್ಕೇಟ್ ಗುಜುಗುಡುತ್ತೆ, ಬಸ್ ಫುಲ್, ಆದರೆ ಸಿನಿಮಾ ಥಿಯೇಟರ್ ನಲ್ಲಿ ಮಾತ್ರ 50% ನಿರ್ಬಂಧ ಯಾಕೆ?” ಎಂದು ಪ್ರಶ್ನೆಯನ್ನು ಎತ್ತಿದ್ದರು. ಇದಕ್ಕೆ ಸಿನಿಮಾ ಸಿರ್ದೇಶಕರು, ನಿರ್ಮಾಪಕರು, ನಟರು ಕೂಡ ಸಾಥ್ ನೀಡಿದ್ದರು. ಸಿನಿಮಾ ಥಿಯೇಟರ್ ಗಳಲ್ಲಿ ಕೇಲವ 50% ಟಿಕೇಟ್ ವಿತರಣೆ ಮಾಡುವುದರಿಂದ ಸಿನಿಮಾ ರಂಗಕ್ಕೆ ಭಾರೀ ದೊಡ್ಡ ನಷ್ಟ ಎದರಿಸಬೇಕಾಗುತ್ತದೆ ಎನ್ನುವ ಕೂಗು ಕೇಳಿಬಂದಿತ್ತು.ಜೊತೆಗೆ ಫಿಲ್ಮ್ ಚೇಂಬರ್ ಕೂಡ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ನಿನ್ನೆ 100% ಸಿನಿಮಾ ಟಿಕೇಟ್ ವಿತರಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಇದನ್ನು ಫೆ.5 ರಿಂದ ಜಾರಿಗೆ ತರಲಾಗುವುದು ಎಂದು ಸರ್ಕಾರ ಘೋಷಿಸಿದೆ. ಜೊತೆಗೆ ಕೆಲವೇ ಗಂಟೆಗಳಲ್ಲಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದೆ.

ಮಾರ್ಗಸೂಚಿಯಲ್ಲಿ ಮಾಸ್ಕ್ ಸ್ಯಾನಿಟೈಸರ್ ಕಡ್ಡಾಯವಾಗಿರುವ ಸಾಧ್ಯತೆ ಇದೆ. ಜೊತೆಗೆ ಪ್ರತೀ ಶೋಗೂ ಸ್ಯಾನಿಟೈಸರ್, ಒಂದು ತಾಸಿಗೊಮ್ಮೆ ಬ್ರೇಕ್, ಎಸಿ ಟೆಂಪರೇಚರ ಎಷ್ಟಿರಬೇಕು? ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಬೇಕಿದೆ. ಇನ್ನೂ ಮಾರ್ಗಸೂಚಿ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಫೆ.19ಕ್ಕೆ ಧ್ರುವ ಮತ್ತು ರಶ್ಮಿಕಾ ಅಭಿನಯದ ‘ಪೊಗರು’ ಸಿನಿಮಾ ತೆರೆ ಕಾಣಲಿದೆ.

Spread the love

Leave a Reply

Your email address will not be published. Required fields are marked *