ತಮ್ಮ ಪಕ್ಷದ ಸಚಿವರನ್ನೇ ಮುಜುಗರಕ್ಕೆ ಸಿಕ್ಕಿಸಿದ ಬಿಜೆಪಿ ಶಾಸಕರು!

ವಿಧಾನಸಭಾ ಅಧಿವೇಶನದ ವೇಳೆ ಪ್ರಶ್ನೆಗೆ ಸಚಿವ ಸಿ.ಪಿ ಯೋಗೇಶ್ವರ್ ನೀಡಿದ್ದ ಉತ್ತರ ಪತ್ರದಲ್ಲಿ ಅವರ ಸಹಿಯೇ ಇರಲಿಲ್ಲ. ಹೀಗಾಗಿ ಇದನ್ನು ಒಪ್ಪಬೇಕೇ-ಬೇಡವೇ ಎಂದು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‌ ಕೇಳಿದ್ದು, ಯೋಗೇಶ್ವರ್‌ ಅವರನ್ನು ಮುಜುರಕ್ಕೆ ಸಿಲುಕಿಸಿದೆ.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರು, ಕಾವೇರಿ ನೀರು ಕಲುಷಿತವಾಗುತ್ತಿರುವ ಬಗ್ಗೆ ಪರಿಸರ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಪ್ರಶ್ನೆ ಕೇಳಿದ್ದರು. ಅವರ ಪ್ರಶ್ನೆಗೆ ಉತ್ತರ ನೀಡಿದ್ದ ಪತ್ರಿಕೆಯಲ್ಲಿ ಸಚಿವರ ಸಹಿಯೇ ಇರಲಿಲ್ಲ. ಹೀಗಾಗಿ, ಇದನ್ನು ಒಪ್ಪಬೇಕೇ ಬೇಡವೆ ಎಂದು ಸಭಾಧ್ಯಕ್ಷರನ್ನು ಪ್ರಶ್ನಿಸಿದ್ದಾರೆ.

ಅಲ್ಲದೆ, ಉತ್ತರದಲ್ಲಿ ಸಚಿವರ ಸಹಿ ಇಲ್ಲವೆಂದರೆ ಅವರು ಈ ಖಾತೆಯ ಮಂತ್ರಿಯೋ ಅಥವಾ ಇಲ್ಲವೋ ಎಂದು ಹೇಳಿದ್ದು, ಪರೋಕ್ಷವಾಗಿ ಯೋಗೇಶ್ವರ್‌ಗೆ ಟಾಂಗ್ ಕೊಟ್ಟಿದ್ದಾರೆ.

ಸಚಿವರ ಖಾತೆ ಬದಲಾವಣೆಯಾಗುತ್ತದೆ. ಆದರೆ ಉತ್ತರ ಪತ್ರಿಕೆಯಲ್ಲಿ ಸಹಿ ಇಲ್ಲ ಎಂದರೆ ಹೇಗೆ? ಇದಕ್ಕೆ ಸಭಾಧ್ಯಕ್ಷರೇ ಉತ್ತರ ಹೇಳಬೇಕೆಂದು ಅಪ್ಪಚ್ಚು ರಂಜನ್ ಹೇಳಿದರು.

ಇದನ್ನೂ ಓದಿ: 447 ಎಕರೆ ಗೋಮಾಳ ಗುಳುಂ: ಒತ್ತುವರಿ ಭೂಮಿಯಲ್ಲಿ 258 ಅನಧಿಕೃತ ಕಟ್ಟಡಗಳ ನಿರ್ಮಾಣ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights