ಜ.01 ರಿಂದ ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್‌ ಕಡ್ಡಾಯ; ಮಿಸ್‌ ಮಾಡಿದ್ರೆ ಎರಡರಷ್ಟು ದಂಡ!

ಜನವರಿ 01 ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಪ್ಲಾಜಾದಲ್ಲಿ ನಗದು ಶುಲ್ಕ ವಸೂಲಾತಿ ರದ್ದಾಗಲಿದ್ದು, ವಾಹನ ಸವಾರರು ಫಾಸ್ಟ್‌ಟ್ಯಾಗ್‌ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಿಗದಿತ ಶುಲ್ಕಕ್ಕಿಂತ ಎರಡರಷ್ಟು ಶುಲ್ಕವನ್ನು ಭರಿಸಬೇಕಾಗುತ್ತದೆ ಎಂದು ನ್ಯಾಷನಲ್‌ ಹೈವೇ ಅಥಾರಿಟಿ ಹೇಳಿದೆ.

ನಾಲ್ಕು ಚಕ್ರದ ಮತ್ತು ಅದಕ್ಕಿಂತ ಮೇಲ್ಪಟ್ಟ ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯವಾಗಿದ್ದು, 2021ರ ಜನವರಿ 1ರಿಂದ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ ಮೂಲಕ ಹಾದು ಹೋಗುವ ಎಲ್ಲಾ ನಾಲ್ಕು ಚಕ್ರದ ವಾಹನಗಳೂ ಫಾಸ್ಟ್ಯಾಗ್ ಅನ್ನು ಅಗತ್ಯವಾಗಿ ಅಳವಡಿಸಿಕೊಳ್ಳಬೇಕು ಎಂದು ಆರ್ ಟಿ. ಆಡ್ಮಿನಿಸ್ಟ್ರೇಷನ್ ರಾಂಫರ್ ಹೇಳಿದ್ದಾರೆ.

1 ಜನವರಿ 2021ರಿಂದ ಈ ನಿಯಮ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾದಲ್ಲಿ ಅನ್ವಯವಾಗಲಿದೆ. ಈ ನಿಯಮ ಕಡ್ಡಾಯಗೊಳಿಸುವುದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವ ವಾಹನಗಳು ಟೋಲ್‌ಗಳಲ್ಲಿ ಉದ್ದನೆಯ ಸಾಲು ನಿಲ್ಲುವುದನ್ನು ತಪ್ಪಿಸಬಹುದು. ಅಲ್ಲದೆ, ವಾಹನಗಳ ಇಂಧನ (ಪೆಟ್ರೋಲ್-ಡೀಸೆಲ್) ಉಳಿತಾಯವಾಗುತ್ತದೆ. ವಾಹನಗಳ ಮಾಲಿನ್ಯವನ್ನು ಸಹ ಕಡಿಮೆ ಮಾಡಬಹುದು ಎಂದು ರಾಂಫರ್‌ ಹೇಳಿದ್ದಾರೆ.

ಇದನ್ನೂ ಓದಿ: ನಟ ಸೋನು ಸೂದ್‌ಗಾಗಿ ದೇವಾಲಯ ನಿರ್ಮಿಸಿದ ತೆಲಂಗಾಣ ಜನ!

ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ತಂತ್ರಜ್ಞಾನದ ಆಧಾರದ ಮೇಲೆ ಫಾಸ್ಟ್ಯಾಗ್ ಕಾರ್ಯನಿರ್ವಹಿಸುತ್ತದೆ. ವಾಹನದ ವಿಂಡ್ ಸ್ಕ್ರೀನ್ ಮೇಲೆ ಫಾಸ್ಯಾಗ್ʼನ್ನ ಸ್ಥಾಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾದಲ್ಲಿರುವ ಎಲೆಕ್ಟ್ರಾನಿಕ್ ಸಾಧನವು ವಾಹನಗಳ ಟ್ಯಾಗ್ʼಗಳನ್ನ ಓದುತ್ತದೆ. ಇದಾದ ನಂತರ ಟೋಲ್ ಗೇಟ್ ತೆರೆಯುತ್ತದೆ. ಉಪವಾಸದ ಕಾರಣ ಟೋಲ್ ತೆರಿಗೆ ಪಾವತಿಸಲು ಟೋಲ್ ಬೂತ್ʼನಲ್ಲಿ ನಿಲ್ಲುವ ಅಗತ್ಯವಿಲ್ಲ. ತೆರಿಗೆ ಶುಲ್ಕಗಳನ್ನು ಬಳಕೆದಾರನ ಟ್ಯಾಗ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ ಮತ್ತು ಸಂದೇಶದ ಮೂಲಕ ಮಾಹಿತಿಯನ್ನು ಬಳಕೆದಾರರಿಗೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಮಾಹಿತಿ ಪ್ರಕಾರ, ಇದುವರೆಗೆ ಕೇವಲ 25 ಪ್ರತಿಶತದಷ್ಟು ವಾಹನಗಳನ್ನ ಮಾತ್ರ ಅಳವಡಿಸಲಾಗಿದೆ.

ಆದರೆ, ಫಾಸ್ಟ್‌ಟ್ಯಾಗ್‌ಗಳು ಕಡ್ಡಾಯವಾಗುವುದರಿಂದ ಸ್ಥಳೀಯ ವಾಹನಗಳಿಗೆ ನೀಡಲಾಗಿದ್ದ ಶುಲ್ಕ ವಿನಾಯತಿಯೂ ರದ್ದಾಗುವುದರಿಂದಾಗಿ ಟೋಲ್‌ ಸುತ್ತಮುತ್ತಲಿನ ಸ್ಥಳೀಯರು ಹೆದ್ದಾರಿಗಳಲ್ಲಿ ಸಂಚರಿಸಲು, ತಮ್ಮ ವ್ಯವಹಾರಗಳಿಗೆ ತೆರಳಲು ತೊಂದರೆಯಾಗುತ್ತದೆ. ಪ್ರತಿ ಬಾರಿಯೂ ಟೋಲ್‌ ಶುಲ್ಕ ಪಾವತಿಯಾಗುವುದರಿಂದ ಸ್ಥಳೀಯರ ಆದಾಯದಲ್ಲಿ ನಷ್ಟ ಉಂಟಾಗುತ್ತದೆ ಎಂದು ಟೋಲ್‌ ಸುತ್ತಮುತ್ತಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ 838 ಕೋಟಿ ಮೊತ್ತದ ಭಾರೀ ಹಗರಣ: ಸ್ಥಳೀಯ ಶಾಸಕ ಭಾಗಿ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights