ರಾಜಕೀಯಕ್ಕೆ ಗುಡ್ ಬೈ ಹೇಳಿದ ನಟ ರಜಿನಿಕಾಂತ್; ಆರ್‌ಎಂಎಂ ಪಕ್ಷ ವಿಸರ್ಜನೆ!
ಳೆದ ತಮಿಳುನಾಡು ವಿಧಾನಸಭಾ ಚುನಾವಣೆಯ ವೇಳೆ ನಟ ರಜಿನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲು ಸಲಕ ಸಿದ್ದತೆ ನಡೆಸಿಕೊಂಡು, ರಜನಿಕಾಂತ್ ಮಕ್ಕಳ್ ಮಂಡ್ರಮ್ ಎಂಬ ರಾಜಕೀಯ ಪಕ್ಷವನ್ನೂ ಹುಟ್ಟುಹಾಕಿದ್ದರು. ಆದರೆ, ಅನಾರೋಗ್ಯ ಕಾರಣದಿಂದಾಗಿ ಕಳೆದ ಚುನಾವಣೆಯಿಂದ ಹಿಂದೆ ಸರಿದಿದ್ದ ರಜಿನಿಕಾಂತ್, ಇದೀಗ ರಾಜಕೀಯಕ್ಕೆ ಮತ್ತೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಅವರ ಪಕ್ಷ ಆರ್‌ಎಂಎಂ ಕೂಡ ವಿಸರ್ಜನೆಯಾಗಿದೆ.
ನಟ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಚರ್ಚೆ ಮೂರು ದಶಕಗಳಿಂದಲೂ ನಡೆಯುತ್ತಲೇ ಇತ್ತು. 2020 ರಲ್ಲಿ ರಜನಿಕಾಂತ್ ಮಕ್ಕಳ್ ಮಂಡ್ರಮ್ ಎಂಬ ರಾಜಕೀಯ ವೇದಿಕೆಯನ್ನು ಹುಟ್ಟುಹಾಕಿದ್ದರು. ಆದರೆ, ತಮಿಳುನಾಡು ವಿಧಾನಸಭಾ ಚುನಾವಣೆಗೂ ಕೆಲವೇ ದಿನಗಳ ಮುನ್ನ. ರಾಜಕೀಯ ಪಕ್ಷವನ್ನು ಘೋಷಿಸುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದರು. ಈಗ ಪಕ್ಷವನ್ನು ವಿಸರ್ಜನೆ ಮಾಡುವ ಮೂಲಕ ಶಾಶ್ವತವಾಗಿ ರಜನಿಕಾಂತ್ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ.
ಏಳು ತಿಂಗಳ ಹಿಂದೆ ತಾವು ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ ಎಂದು ಅಧಿಕೃತವಾಗಿ ಹೇಳಿ, ಚುನಾವಣಾ ರಾಜಕೀಯ ಮಾಡದೇ ಜನರ ಸೇವೆ ಮಾಡುತ್ತೇನೆ ಎಂದು ರಜನಿಕಾಂತ್ ಹೇಳಿದ್ದರು. “ನನ್ನ ಆರೋಗ್ಯದಲ್ಲಾದ ಏರುಪೇರಿನಿಂದ ಮತ್ತು ಕೊರೊನಾ ಸೋಂಕಿನ ಕಾರಣದಿಂದ ಪಕ್ಷ ಸ್ಥಾಪನೆಯ ವಿಚಾರವನ್ನು ಕೈಬಿಟ್ಟಿದ್ದೇನೆ. ಇದು ನನ್ನ ಮೇಲೆ ಭರವಸೆಯಿಟ್ಟಿದ್ದ ಅಭಿಮಾನಿಗಳಿಗೆ ನಿರಾಸೆಯನ್ನುಂಟುಮಾಡುತ್ತದೆ ಎಂಬುದು ನನಗೆ ತಿಳಿದಿದೆ” ಎಂದಿದ್ದರು.
ಇದನ್ನೂ ಓದಿ: ಎಸ್‌ಪಿ ಮಹಿಳಾ ಅಭ್ಯರ್ಥಿಯ ಸೀರೆ ಎಳೆದು ಬಿಜೆಪಿ ಕಾರ್ಯಕರ್ತರ ದೌರ್ಜನ್ಯ!?
ಈಗ ಅಧಿಕೃತವಾಗಿ ರಜನಿಕಾಂತ್ ಮಕ್ಕಳ್ ಮಂಡ್ರಮ್ ಪಕ್ಷವನ್ನು ವಿಸರ್ಜಿಸಿದ್ದಾರೆ. ಈ ಮೂಲಕ ಮುಂದೆಂದೂ ರಾಜಕೀಯ ಮಾಡಲಾರೆ ಎಂಬ ಸಂದೇಶ ರವಾನಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ಗಾವುದ ದೂರ ಇರುವ ಹಾಗೂ ಸಿನಿಮಾ ನಟರನ್ನು ಆರಾಧಿಸುವ ತಮಿಳುನಾಡಿನಲ್ಲಿ ರಜನಿಕಾಂತ್ ಹಾಲಿ ಡಿಎಂಕೆ ಮತ್ತು ಎಐಎಡಿಎಂಕೆಗೆ ಪರ್ಯಾಯವಾಗಿ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಾರೆ ಎಂದು ಅಂದಾಜು ಮಾಡಲಾಗುತ್ತಿತ್ತು. ಆದರೆ ರಜನಿಕಾಂತ್ ಎಲ್ಲಾ ನಿರೀಕ್ಷೆ, ಲೆಕ್ಕಾಚಾರಗಳನ್ನು ರಜನಿಕಾಂತ್ ತಲೆಕೆಳಗೆ ಮಾಡಿದ್ದಾರೆ.
ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಎಐಎಡಿಎಂಕೆ ಚುನಾವಣೆಯಲ್ಲಿ ಚುನಾವಣೆಯಲ್ಲಿ ಸೋತಿದ್ದು, ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ 10 ವರ್ಷಗಳ ನಂತರ ಅಧಿಕಾರ ವಹಿಸಿಕೊಂಡಿದೆ. ಮತ್ತೊಬ್ಬ ಸೂಪರ್ ಸ್ಟಾರ್, ರಾಜಕಾರಣಿ, ಕಮಲ್ ಹಾಸನ್, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಒಂದು ಸ್ಥಾನವನ್ನು ಗೆಲ್ಲದೆ ರಾಜಕೀಯದಲ್ಲಿ ಪರಿಣಾಮ ಬೀರಲು ವಿಫಲವಾಗಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ಗೊಂದು ಪತ್ರ: ಈ ದೇಶದಲ್ಲಿ ಮೋದಿವಾದಿಗಳಿಗೊಂದು ಕಾನೂನು – ಜನವಾದಿಗಳಿಗೊಂದು ಕಾನೂನಿದೆಯೇ?