ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡರೆ, ಅವರ ರೆಕ್ಕೆಯನ್ನಲ್ಲ – ತಲೆಯನ್ನೇ ತೆಗೆಯುತ್ತೇನೆ: ನಟ ದರ್ಶನ್!
ನನ್ನ ಹೆಸರನ್ನು ಯಾರಾದರು ದುರುಪಯೋಗ ಮಾಡಿಕೊಂಡರೆ, ಅಂತಹವರ ರೆಕ್ಕೆಯನ್ನಲ್ಲ – ತಲೆಯನ್ನೇ ತೆಗೆಯುತ್ತೇನೆ ಎಂದು ನಟ ದರ್ಶನ್ ಹೇಳಿದ್ದಾರೆ.
ದರ್ಶನ್ ಅವರ ಹೆಸರು ಹೇಳಿಕೊಂಡು ವಂಚಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ನರಸಿಂಹರಾಜ ಉಪವಿಭಾಗದ ಎಸಿಪಿ ಕಚೇರಿಗೆ ಭೇಟಿ ನೀಡಿದ ದರ್ಶನ್, ‘ನನಗೆ ಯಾರೂ ಬ್ಲಾಕ್ ಮೇಲ್ ಮಾಡಿಲ್ಲ, ಆದರೆ ನನ್ನ ಮೇಲೆ ಸುಮ್ಮನೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಂತರ ಏನಾಗುತ್ತದೆ ಎಂದು ವಿವರಿಸುತ್ತೇನೆ ಎಂದು ಹೇಳಿದ್ದಾರೆ.
ಮೈಸೂರು ನಗರದ ಹೆಬ್ಬಾಳದಲ್ಲಿ ಇರುವ ‘ಮೈಸೂರು ಯೂನಿಯನ್ ಕ್ಲಬ್ ನಡೆಸುತ್ತಿರುವ ಹರ್ಷ ಮೆಲಂತಾ ಎಂಬುವವರನ್ನು ಅರುಣ್ ಕುಮಾರಿ ಎನ್ನುವವರು ತಾವು ಬ್ಯಾಂಕ್ ವ್ಯವಸ್ಥಾಪಕಿ ಎಂದು ಜೂನ್ 16 ನೇ ತಾರೀಕು ಭೇಟಿ ಮಾಡಿದ್ದ ಆಕೆ, ಬೆಂಗಳೂರಿನ ಸೌತ್ ಎಂಡ್ ಸರ್ಕಲ್ಲಿನಲ್ಲಿ ಇರುವ ಕೆನರಾ ಬ್ಯಾಂಕಿನಲ್ಲಿ ನೀವು 25 ಕೋಟಿ ಸಾಲಕ್ಕೆ ನೀವು ಅರ್ಜಿ ಸಲ್ಲಿಸಿದ್ದೀರಿ. ಅದರಲ್ಲಿ ಚಲನಚಿತ್ರ ನಟ ದರ್ಶನ್ ಅವರ ಆಸ್ತಿಯ ನಕಲಿ ದಾಖಲೆ ಒದಗಿಸಲಾಗಿದೆ. ಅಲ್ಲದೆ ಅವರ ಸಹಿಯನ್ನೂ ಸಹ ನಕಲು ಮಾಡಿ ಮೋಸ ಮಾಡಿದ್ದೀರಿ ಎಂದು ಹೇಳಿ ಅವರಿಗೆ ಬ್ಲಾಕ್ ಮೇಲ್ ಮಾಡಿದ್ದಾರೆ.
ಅಲ್ಲದೇ ಈ ವಿಷಯ ಹೊರಗೆ ಬಾರದಂತೆ ನೋಡಿಕೊಳ್ಳಲು 25 ಲಕ್ಷ ಹಣ ನೀಡ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದಾದ ಮೇಲೆ ಈ ಮಹಿಳೆ ನಕಲಿ ಎಂಬುದು ಹರ್ಷ ಅವರಿಗೆ ಗೊತ್ತಾಗಿದೆ, ಅವರು ತಕ್ಷಣ ಜುಲೈ 3 ನೇ ತಾರೀಕು ದೂರು ದಾಖಲಿಸುತ್ತಾರೆ.
ಅಲ್ಲದೇ ಇದೇ ಮಹಿಳೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಅವರಿಗೂ ಕರೆ ಮಾಡಿ, ಹರ್ಷ ಎಂಬುವರು ದರ್ಶನ್ ಅವರ ಆಸ್ತಿಯನ್ನು ಸಾಲಕ್ಕಾಗಿ ಬ್ಯಾಂಕಿಗೆ ಅಡ ಇಟ್ಟಿದ್ದಾರೆ ನಿಜವೇ ಎಂದು ಕೇಳಿದ್ದಾರೆ. ಇದರಿಂದ ಅನುಮಾನಗೊಂಡ ನಿರ್ಮಾಪಕ ಉಮಾಪತಿ ಅವರು ಕೂಡಲೇ ಬೆಂಗಳೂರಿನ ಪೊಲೀಸ್ ಠಾಣೆಗೆ ಹೋಗಿ ಜೂನ್ 17 ರಂದು ಅರುಣ ಕುಮಾರಿ ಅವರ ಮೇಲೆ ದೂರು ದಾಖಲಿಸಿದ್ದಾರೆ.
ಈ ವಿಚಾರವಾಗಿ ಇನ್ನೂ ನಾವು ಯಾರನ್ನೂ ಬಂಧಿಸಿಲ್ಲ ಹಾಗೂ ವಿಚಾರಣೆಗೆ ಕಡರೆದಿಲ್ಲ, ತನಿಖೆ ನಡೆಸುತ್ತೇವೆ ಇದಾದ ಮೇಲೆ ಏನೆಂದು ಹೇಳುತ್ತೇವೆ ಎಂದು ಡಿಸಿಪಿ ಪ್ರದೀಪ್ ಗುಂಟಿ ಅವರು ಮಾಧ್ಯಮದ ಎದುರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ‘ನನಗೆ ಇಡ್ಲಿ ಅಂದ್ರೆ ಇಷ್ಟವಿಲ್ಲ, ಚಟ್ನಿ ಅಂದ್ರೆ ತುಂಬಾ ಇಷ್ಟ’ ಲೈವ್ ನಲ್ಲಿ ಸಿಕ್ರೇಟ್ ಬಿಚ್ಚಿಟ್ಟ ರಮ್ಯಾ!