Lockdown ಒಂದೇ ಪರಿಹಾರವಲ್ಲ, “ಹುಡುಕಿ, ಪ್ರತ್ಯೇಕಿಸಿ, ಪರೀಕ್ಷಿಸಿ, ಚಿಕಿತ್ಸೆ ನೀಡಿ”: WHO

COVID-19 ಅನ್ನು ಎದುರಿಸಲು ಹಲವಾರು ದೇಶಗಳು ಜಾರಿಗೆ ತರುತ್ತಿರುವ ಲಾಕ್‌ಡೌನ್‌ಗಳು ವಿಶ್ವದಿಂದ ವೈರಸ್‌ ನಿರ್ಮೂಲನೆಗೆ ಸಾಕಾಗುವುದಿಲ್ಲ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಬುಧವಾರ ಹೇಳಿದ್ದಾರೆ.

COVID-19 ಹರಡುವುದನ್ನು ನಿಯಂತ್ರಿಸಲು ಅನೇಕ ದೇಶಗಳು ತಮ್ಮದೇ ಆದ ರೀತಿಯಲ್ಲಿ “ಲಾಕ್‌ಡೌನ್” ಕ್ರಮಗಳನ್ನು ಜಾರಿಗೊಳಿಸಿದವು. “ಜನರನ್ನು ಮನೆಯಲ್ಲಿಯೇ ಇರುವುದು ಮತ್ತು ಜನಸಂಖ್ಯೆಯ ಚಲನೆಯನ್ನು ಸ್ಥಗಿತಗೊಳಿಸುವುದರಿಂದ ಆರೋಗ್ಯ ವ್ಯವಸ್ಥೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದರೆ, ಈ ಕ್ರಮಗಳು ಸಾಂಕ್ರಾಮಿಕ ರೋಗಗಳನ್ನು ನಾಶಗೊಳಿಸುವುದಿಲ್ಲ. ಕೊರೊನಾ ವೈರಸ್ ಮೇಲೆ ದಾಳಿ ಮಾಡಲು ಈ ಸಮಯವನ್ನು ಸರಿಯಾಗಿ ಬಳಸಬೇಕೆಂದು ನಾವು ಎಲ್ಲಾ ದೇಶಗಳಿಗೆ ಕರೆ ನೀಡುತ್ತೇವೆ ಎ ಎಂದು ಘೆಬ್ರೆಯೆಸಸ್ ಅವರು ಹೇಳಿದ್ದಾರೆ.

“ಲಾಕ್‌ಡೌನ್ ಕ್ರಮಗಳನ್ನು ಪರಿಚಯಿಸಿದ ಎಲ್ಲ ದೇಶಗಳೂ ಈ ಸಮಯವನ್ನು ವೈರಸ್ ಮೇಲೆ ಆಕ್ರಮಣ ಮಾಡಲು ಬಳಸಿಕೊಳ್ಳಬೇಕು. “ನೀವು 2 ನೇ ಅವಕಾಶವನ್ನು ನಿರ್ಮಿಸಿಕೊಂಡಿದ್ದೀರಿ, ನೀವು ಅದನ್ನು ಹೇಗೆ ಬಳಸುತ್ತೀರಿ ಎಂಬ ಪ್ರಶ್ನೆಯನ್ನು ಎಲ್ಲಾ ದೇಶಗಳ ಮುಂದೆ ಇಟ್ಟಿದ್ದೇವೆ” ಅವರು ಹೇಳಿದರು

. ಸೋಂಕುಗಳನ್ನು “ಕಂಡುಹಿಡಿಯಲು, ಪ್ರತ್ಯೇಕಿಸಲು, ಪರೀಕ್ಷಿಸಲು, ಚಿಕಿತ್ಸೆ ನೀಡಲು ಮತ್ತು ಪತ್ತೆಹಚ್ಚಲು” ಆಕ್ರಮಣಕಾರಿ ಕ್ರಮಗಳು, ವಿಪರೀತ ಸಾಮಾಜಿಕ ಮತ್ತು ಆರ್ಥಿಕ ನಿರ್ಬಂಧಗಳಿಂದ ಹೊರಬರುವ ಅತ್ಯುತ್ತಮ ಮತ್ತು ವೇಗವಾದ ಮಾರ್ಗವಲ್ಲ. ಆದರೆ ಅವುಗಳನ್ನು ತಡೆಯುವ ಅತ್ಯುತ್ತಮ ಮಾರ್ಗವೂ ಆಗಿದೆ” ಎಂದು WHO ಮುಖ್ಯಸ್ಥರು ಹೇಳಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights