‘ನನಗೆ ಇಡ್ಲಿ ಅಂದ್ರೆ ಇಷ್ಟವಿಲ್ಲ, ಚಟ್ನಿ ಅಂದ್ರೆ ತುಂಬಾ ಇಷ್ಟ’ ಲೈವ್ ನಲ್ಲಿ ಸಿಕ್ರೇಟ್ ಬಿಚ್ಚಿಟ್ಟ ರಮ್ಯಾ!

ಕೆಲವು ವರ್ಷಗಳ ಬಳಿಕ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಕಾಣಿಸಿಕೊಂಡ ನಟಿ ರಮ್ಯಾ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಕೆಲ ಸಿಕ್ರೇಟ್ ಗಳನ್ನು ಶೇರ್ ಮಾಡಿದ್ದಾರೆ.

ಕಾಮಿಡಿಯನ್ ಸೋನು ವೇಣುಗೋಪಾಲ್ ಹಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. ಜೊತೆಗೆ ತಮಗೆ ಇಷ್ಟವಾಗುವ ಆಹಾರಗಳ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ನಾನು ಮಾಂಸಹಾರವನ್ನು ಸೇವಿಸುವುದಿಲ್ಲ. ಇಡ್ಲಿ ಅಂದ್ರೆ ಇಷ್ಟವಿಲ್ಲ. ಯಾಕಂದ್ರೆ ನನಗೆ ಚಿಕ್ಕವಳಿರುವಾಗ ಹುಷಾರು ತಪ್ಪಿದರೆ ಇಡ್ಲಿಯನ್ನೇ ಕೊಡುತ್ತಿದ್ದರು. ಹೀಗಾಗಿ ಅದನ್ನು ತಿಂದು ತಿಂದು ನನಗೆ ಬೇಸರವಾಗಿದೆ. ಆದರೆ ನನಗೆ ಅದಕ್ಕೆ ಮಾಡುವ ಚಟ್ನಿ ಅಂದ್ರೆ ತುಂಬಾನೇ ಇಷ್ಟ ಎಂದಿದ್ದಾರೆ.

ಈ ವೇಳೆ ಮುಂದುವರೆದು ಮಾತನಾಡಿದ ರಮ್ಯಾ ತಮಗೆ ಉತ್ತರ ಕರ್ನಾಟಕದ ಬದನೇಕಾಯಿ ಎಣ್ಣೆಗಾಯಿ ಅಂದ್ರೆ ತುಂಬಾನೇ ಪ್ರಾಣ ಎಂದಿದ್ದಾರೆ. ಮೊಟ್ಟೆ ಕೇಕ್, ಮಶ್ರೂಮ್ ತಿನ್ನುತ್ತೇನೆ ಎಂದಿದ್ದಾರೆ.

ಸಿನಿಮಾದಲ್ಲಿದ್ದಾಗ ಡಯಟ್ ಯೋಗ ಮಾಡುತ್ತಾ ಇದ್ದೆ. ನುಗ್ಗೆಕಾಯಿ ತಿನ್ನಲ್ಲ, ಹಾಲು ಕುಡಿಯಲ್ಲ. ಎಲ್ಲಾ ಫುಡ್ ನಾಣು ಇಷ್ಟಪಟ್ಟು ತಿನ್ನುತ್ತೇನೆ. ದಿನಕ್ಕೆ ಮೂರು ಲೀಟರ್ ನೀರು ಕುಡಿಯುತ್ತೇನೆ ಎಂದು ಪದ್ಮಾವತಿ ಹೇಳಿಕೊಂಡಿದ್ದಾರೆ.

ಸಿನಿಮಾ, ಮಾಂಸ ಇದರಲ್ಲಿ ಯಾವುದನ್ನ ಮಿಸ್ ಮಾಡಿಕೊಳ್ಳುತ್ತೀರಾ? ಎಂದು ಅಭಿಮಾನಿಗಳು ಮಾಡಿದ ಕಾಮೆಂಟ್ ಗೆ ರಮ್ಯಾ,ನಾನು ಯಾಔಉದನ್ನೂ ಮಿಸ್ ಮಾಡಿಕೊಳ್ಳುವುದಿಲ್ಲ. ಸಿನಿಮಾ ನೋಡಬೇಕು ಎನಿಸಿದಾಗ ಸಿನಿಮಾ ನೋಡುತ್ತೇನೆ. ಮಾಂಸ ತಿನ್ನಬೇಕು ಎನಿಸಿದಾಗ ಮಾಂಸಾಹಾರ ತಿನ್ನಬೇಕು ಅನಿಸಿದಾಗ ತಿನ್ನುತ್ತೇನೆ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಿನ್ನೂ ವ್ಯಾಕ್ಸಿನ್ ವಿಚಾರವಾಗಿ ಮಾತನಾಡಿದ ರಮ್ಯಾ, ತಾವು ಅಮೇರಿಕ ವ್ಯಾಕ್ಸಿನ್ ಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ವ್ಯಾಕ್ಸಿನ್ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಇರುವುದರಿಂದ ನಾನು ಇನ್ನೂ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಎಂದಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights