ಅತ್ಯುತ್ತಮ ಕ್ಯಾಚ್‌ ಹಿಡಿದ ಹಾರ್ಲೀನ್ ಡಿಯೋಲ್ : ಕ್ರಿಕೆಟ್ ದಿಗ್ಗಜರಿಂದ ಮೆಚ್ಚುಗೆ!

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹಾರ್ಲೀನ್ ಡಿಯೋಲ್ ಆಟದಲ್ಲಿ ಅತ್ಯುತ್ತಮ ಕ್ಯಾಚ್‌ ಹಿಡಿಯುವ ಮೂಲಕ ಕ್ರಿಕೆಟ್ ದಿಗ್ಗಜರ ಮೆಚ್ಚುಗೆ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಿಡಿದ ಕ್ಯಾಚ್ ಗೆ ದಿಗ್ಗಜ ಕ್ರಿಕೆಟಿಗರು ಫಿದಾ ಆಗಿದ್ದಾರೆ.

ಶುಕ್ರವಾರ ರಾತ್ರಿ ಹಾರ್ಲೀನ್ ಡಿಯೋಲ್ ಮೈದಾನದಲ್ಲಿ ಮಹೋನ್ನತ ಪ್ರಯತ್ನವನ್ನು ಪ್ರದರ್ಶಿಸಿದ್ದಾರೆ. ಅವರು ಇಂಗ್ಲೆಂಡ್ನ ಉತ್ತಮ ಸೆಟ್ ಆಮಿ ಎಲ್ಲೆನ್ ಜೋನ್ಸ್ ಅವರನ್ನು ಸೋಲಿಸಲು ಅದ್ಭುತ ಕ್ಯಾಚ್ ಹಿಡಿದು ಕ್ರಿಕೆಟ್ ದಿಗ್ಗಜರ ಮೆಚ್ಚುಗೆ ಪಡೆದಿದ್ದಾರೆ.

ಭಾರತ ಹಾಗೂ ಇಂಗ್ರೆಂಡ್ ವನಿತೆಯರ ನಡುವಿನ ಮೊದಲ ಟಿ 20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ 18.5 ನೇ ಓವರ್ ನಲ್ಲಿ ಎಮಿ ಜೋನ್ಸ್ ಬಾರಿಸಿದ ಬಿಗ್ ಶಾಟ್ ಒಂದನ್ನು ಲಾಂಗ್ ಆಫ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹರ್ಲಿನ್ ಕ್ಷಣ ಮಾತ್ರದಲ್ಲಿ ಜಿಂಕೆಯಂತೆ ನೆಗೆದು ಸ್ಟನ್ನಿಂಗ್ ಕ್ಯಾಚ್ ಹಿಡಿದು ವೀಕ್ಷಕರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಹಾರ್ಲೀನ್ ಅವರ ಅದ್ಭುತ ಕ್ಯಾಚ್ ಭಾರತೀಯ ಅಭಿಮಾನಿಗಳ ಟ್ವಿಟರ್ ಪ್ರತಿಕ್ರಿಯೆಗಳು ಇಲ್ಲಿವೆ:

https://twitter.com/imfemalecricket/status/1413580272470151170?ref_src=twsrc%5Etfw%7Ctwcamp%5Etweetembed%7Ctwterm%5E1413580272470151170%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Fsports%2Fcricket%2Findwvengw-watch-indias-harleen-deol-produces-one-of-the-best-catches-ever-7397620%2F

https://twitter.com/MCCOfficial/status/1413577449720401923?ref_src=twsrc%5Etfw%7Ctwcamp%5Etweetembed%7Ctwterm%5E1413577449720401923%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Fsports%2Fcricket%2Findwvengw-watch-indias-harleen-deol-produces-one-of-the-best-catches-ever-7397620%2F

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights