ಮಹಿಳೆ ಮೇಲೆ 23 ಸೈನಿಕರಿಂದ 11 ದಿನ ಸಾಮೂಹಿಕ ಅತ್ಯಾಚಾರ; ಗುಪ್ತಾಂಗಕ್ಕೆ ಕಲ್ಲು-ಮೊಳೆ ತುರುಕಿ ಕ್ರೌರ್ಯ!

ಕಳೆದ ಆರು ತಿಂಗಳುಗಳಿಂದ ಇಥಿಯೋಪಿಯಾ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಇಥಿಯೋಪಿಯಾದ ಟೈಗ್ರೇ ವಲಯದಲ್ಲಿ ಆಕ್ರಮಣ-ಕ್ರೌರ್ಯಗಳು ಹೆಚ್ಚಾಗಿದೆ. ಇಥಿಯೋಪಿಯಾ ಮತ್ತು ಎರಿಟ್ರಿಯನ್ ಸೈನಿಕರು ಅಲ್ಲಿಯ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದಾರೆ, ಪುರುಷರಿಗೆ ತಮ್ಮ ಕುಟುಂಬದ ಮಹಿಳೆಯರ ಮೇಲೆ ಅತ್ಯಾಚಾರ ಎಸಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಗಳು ಕೇಳಿಬಂದಿವೆ.

ಇಥಿಯೋಪಿಯಾದ ಟೈಗ್ರೇ ವಲಯದ 27 ವರ್ಷದ ಮಹಿಳೆಯೊಬ್ಬಳು ತನ್ನ ಮೇಲೆ 11 ದಿನಗಳ ಕಾಲ ನಿರಂತರವಾಗಿ 23 ಯೋಧರು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ತಮ್ಮ ಗುಪ್ತಾಂಗಕ್ಕೆ ಕಲ್ಲು, ಮೊಳೆಗಳಂತ ವಸ್ತುಗಳನ್ನು ತುರುಕಿ ದೌರ್ಜನ್ಯ ಎಸಿರುವುದನ್ನು ಬಿಚ್ಚಿಟ್ಟಿದ್ದಾರೆ.

ನವೆಂಬರ್ ತಿಂಗಳ ಅಂತ್ಯದ ವೇಳೆ, ಸಂತ್ರಸ್ತೆ ತನ್ನ ಮಕ್ಕಳೊಂದಿಗೆ ಮೆಕೆಲ್ಲೆಯಿಂದ ಅಡಿಗ್ರಾತ್​ ನಗರಕ್ಕೆ ತೆರಳುತ್ತಿರು. ಆ ವೇಳೆ ಬಸ್‌ ತಡೆಗಟ್ಟಿದ ಸೈನಿಕರು, ಬಸ್‌ನಲ್ಲಿ ಭರ್ತಿಯಾಗಿದೆ ಕೆಳಗೆ ಇಳಿಎಂದು ಒತ್ತಾಯಿಸಿದರು. ಇಳಿದ ಬಳಿಕ ತನ್ನನ್ನು ನಿರ್ಜನ ಪ್ರದೇಶದಲ್ಲಿದ್ದ ಅವರ ಟೆಂಟ್‌ಗೆ ಎಳೆದೊಯ್ದು ಬಂಧಿಸಿಟ್ಟರು.

11 ದಿನಗಳ ಕಾಲ ತನ್ನ ಮೇಲೆ 23 ಸೈನಿಕರು ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ತನ್ನ ಗುಪ್ತಾಂಗಕ್ಕೆ ಮೊಳೆ, ಹತ್ತಿ, ಪ್ಲಾಸ್ಟಿಕ್​ ಬ್ಯಾಗ್​ ಮತ್ತು ಕಲ್ಲುಗಳನ್ನು ತುರುಕಿ ಹಿಂಸಿಸಿ ವಿಕೃತ ಕ್ರೌರ್ಯ ಎಸಗಿದ್ದಾರೆ ಎಂದು ಆಕೆ ವಿವರಿಸಿದ್ದಾರೆ.

ಇಥಿಯೂಪಿಯಾ
ಸಂತ್ರಸ್ತ ಮಹಿಳೆ

11 ದಿನಗಳ ಬಳಿಕ ತನ್ನನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟುಹೋದರು. ಅಪ್ರಜ್ಞಾ ಸ್ಥಿತಿಯಲ್ಲಿದ್ದ ತನ್ನನ್ನು ಸ್ಥಳೀಯ ಜನರು ಆಸ್ಪತ್ರೆಗೆ ದಾಖಲಿಸಿದರು. ಅವರ ದೌರ್ಜನ್ಯದಿಂದಾದ ಗಾಯಗಳು ಫೆಬ್ರವರಿ ತಿಂಗಳಿನವರೆಗೂ ಬಹಳಷ್ಟು ಯಾತನೆಯನ್ನು ನೀಡಿವೆ. ರಕ್ತಸ್ತಾವವಾಗುತ್ತಿತ್ತು. ಮೂತ್ರವನ್ನೂ ಕೂಡ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ತನ್ನ ಕಾಲಿನ ಮೂಳೆಯೂ ಮುರಿದಿತ್ತು. ಇದರಿಂದಾಗಿ ನಡೆದಾಡುವುದು, ಕುಳಿತುಕೊಳ್ಳುವುದೂ ಕಷ್ಟವಾಗಿತ್ತು ಎಂದು ಆಕೆ ತನ್ನ ಅಳಲನ್ನು ಹೇಳಿಕೊಂಡಿದ್ದಾರೆ.

ಸೈನಿಕರು ತನ್ನ ಫೋನ್‌ಅನ್ನೂ ಕಸಿದುಕೊಂಡಿದ್ದಾರೆ. ಹೀಗಾಗಿ ತನ್ನ ಮಕ್ಕಳು ಎಲ್ಲಿದ್ದಾರೆ ಎಂಬುದೂ ಗೊತ್ತಿಲ್ಲ. ಅವರನ್ನೂ ಸಂಪರ್ಕಿಸುವುದೂ ಕಷ್ಟವಾಗಿದೆ ಎಂದು ಆಕೆ ತನ್ನ ಅಸಹಾಯಕತೆಯನ್ನು ಹೇಳೀಕೊಂಡಿದ್ದಾರೆ.

ಇಥಿಯೋಪಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರ, ದೌರ್ಜನ್ಯದ ಬಗ್ಗೆ ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ. 2020ರ ನವೆಂಬರ್‌ನಲ್ಲಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅವರು ಪ್ರಾದೇಶಿಕ ನಾಯಕರ ವಿರುದ್ಧ ಸರ್ಕಾರದ ಆಕ್ರಮಣವನ್ನು ಘೋಷಿಸಿದರು. ಅಂದಿನಿಂದ ಟ್ರೈಗೇ ವಲಯದ ಜನರು ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಇಲ್ಲಿಯವರೆಗೂ ಸುಮಾರು 500ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಆದರೆ, ಈ ಪ್ರಕರಣಗಳಸಂಖ್ಯೆ ಇನ್ನೂ ಹೆಚ್ಚಿದೆ ಎಂದು ಇಥಿಯೋಪಿಯದ ವಿಶ್ವಸಂಸ್ಥೆ ಸಹಾಯಕ ಸಂಯೋಜಕಿಯಾದ ವಾಫಾ ಸೆಡ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಮೇಲೆ ಗ್ಯಾಂಗ್‌ರೇಪ್‌; ಸಂಬಂಧಿಕರನ್ನೇ ಅತ್ಯಾಚಾರ ಎಸಗಲು ಬೆದರಿಕೆ; ರಣರಂಗವಾಗಿದೆ ಇಥಿಯೋಪಿಯಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights