ತಮ್ಮ ಕೂದಲಿಗೆ ಕತ್ತರಿ ಹಾಕಲು ಬಯಸಿದ ನೀರಜ್ ಚೋಪ್ರಾ : ಯಾಕೆ ಗೊತ್ತಾ?

ಉದ್ದನೆಯ ಕೂದಲನ್ನು ಹೊಂದಿರುವ ಕ್ರೀಡಾ ತಾರೆಯರು ಈ ಹಿಂದೆ ಭಾರತದಲ್ಲಿ ಸುದ್ದಿಯಾಗಿದ್ದರು. ಅವರಲ್ಲಿ ನೀರಜ್ ಚೋಪ್ರಾ ಕೂಡ ಒಬ್ಬರು. 2016 ರಲ್ಲಿ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಗೆದ್ದಾಗ ಅವರು ತಮ್ಮ ಕೇಶವಿನ್ಯಾಸವನ್ನು ತೋರಿಸಿದ್ದರು. ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ವೇದಿಕೆಯ ಮೇಲೆ ಚಿನ್ನದ ಪದಕ ಪಡೆದಾಗ ಉದ್ದನೆಯ ಕೂದಲಿನೊಂದಿಗೆ ಪದಕ ನೀರಜ್ ಕುತ್ತಿಗೆಯಲ್ಲಿ ಮಿಂಚಿತ್ತು.

ಅಷ್ಟಕ್ಕೂ ನೀರಜ್ ತನ್ನ ಉದ್ದನೆಯ ಕೂದಲನ್ನು ಬಿಡಲು ಬಯಸಲಿಲ್ಲ. ಆದರೂ ಅವರು ತಮಗೆ ಅದು ಚೆನ್ನಾಗಿ ಕಾಣುತ್ತದೆ ಎಂದು ಹೇಳುತ್ತಾರೆ. ಆದರೀಗ ನೀರಜ್ ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಲು ನಿರ್ಧರಿಸಿದ್ದಾರೆ.

ನೀರಜ್ ಉದ್ದನೆಯ ಕೂದಲು ಕತ್ತರಿಸಲು ನಿರ್ಧರಿಸಿದ್ದು ಯಾಕೆ?

ಇಂಡಿಯಾ ಟುಡೇ ಕಾನ್ಕ್ಲೇವ್ 2021 ರಲ್ಲಿ ಶುಕ್ರವಾರ ಮಾತನಾಡಿದ ನೀರಜ್ ಚೋಪ್ರಾ, “ಇದು ನನ್ನ ಕಣ್ಣುಗಳ ಮೇಲೆ ಬೀಳುತ್ತಲೇ ಇರುತ್ತದೆ. ಅದಕ್ಕಾಗಿಯೇ ನಾನು ಅದನ್ನು ಕತ್ತರಿಸಿದೆ. ಇದು ನನ್ನ ಏಕಾಗ್ರತೆಯನ್ನು 50 ಪ್ರತಿಶತದಷ್ಟು ಹಾಳು ಮಾಡುತ್ತದೆ. ಆಟದಲ್ಲಿ ಇದರಿಂದ ಏನಾದರೂ ಅಹಿತಕರ ಘಟನೆ ಸಂಭವಿಸಿದ್ದರೆ, ಜನರು ನನ್ನ ಉದ್ದನೆಯ ಕೂದಲಿನ ಕಡೆಗೆ ಬೆರಳು ತೋರಿಸುತ್ತಾರೆ” ಎಂದು ಹೇಳಿದರು.

“ನಾನು ಕ್ಯಾಪ್ ಧರಿಸಲು ಮತ್ತು ನನ್ನ ತಲೆಯನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದೆ. ಆದರೆ ಇದು ಸ್ಪರ್ಧೆಯಲ್ಲಿ ಏನೂ ಕೆಲಸ ಮಾಡಲಿಲ್ಲ. ಅಂತಿಮವಾಗಿ ಕತ್ತರಿಸಲು ನಿರ್ಧರಿಸಿದೆ” ಎಂದಿದ್ದಾರೆ.

 

Spread the love

Leave a Reply

Your email address will not be published. Required fields are marked *