ಸಿಡಿ ಯುವತಿಗೆ ನ್ಯಾಯಾಧೀಶರ ಮುಂದೆ ನೇರವಾಗಿ ಹಾಜರಾಗಲು ಅನುಮತಿ..!

ಪೊಲೀಸ್ ಹಾಗೂ ಎಸ್ಐಟಿ ವಿಚಾರಣೆಯ ಬಗ್ಗೆ ಅಭದ್ರತೆ ವ್ಯಕ್ತಪಡಿಸಿದ ಸಿಡಿ ಯುವತಿ ನ್ಯಾಯಾಧೀಶರ ಮುಂದೆ ನೇರವಾಗಿ ಹಾಜರಾಗಲು ಕೋರಿದ್ದ ಮನವಿಗೆ ಕೋರ್ಟ್ ಅನುಮತಿ ನೀಡಿದೆ. ಕೋರ್ಟ್ ಅನುಮತಿಯಂತೆ ಯುವತಿ ಇಂದೇ ನ್ಯಾಯಾಧೀಶರ ಮುಂದೆ ಹಾಜರಾಗುವ ಸಾಧ್ಯತೆ ಇದೆ.

ಹೌದು… ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯಾದಾಗಿನಿಂದಲೂ ಯುವತಿ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡುತ್ತಿದ್ದಾಳೆ. ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಹಾಗೂ ಪೊಲೀಸ್ ನೋಟೀಸ್ ಜಾರಿಗೊಳಿಸಿದ್ದರೂ ಯುವತಿ ಮಾತ್ರ ಹಾಜರಾಗಿರಲಿಲ್ಲ. ಬದಲಿಗೆ ವಿಡಿಯೋ ಬಿಡುಗಡೆ ಮಾಡಿ ಅಭದ್ರತೆ ಬಗ್ಗೆ ವ್ಯಕ್ತಪಡಿಸಿದ್ದಳು. ಹೀಗಾಗಿ ಇಂದು ಯುವತಿ ಪರ ವಕೀಲ ಜಗದೀಶ್ ಯುವತಿ ನೇರವಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಲು ಅನುಮತಿಸಬೇಕು ಎಂದು ಮನವಿ ಮಾಡಿದ್ದರು. ಮನವಿಯಂತೆ ಕೋರ್ಟ್ ಯುವತಿಗೆ ನೇರವಾಗಿ ಹಾಜರಾಗಲು ಅನುಮತಿ ನೀಡಿದೆ.

ಓರ್ವ ಪಿಎಸ್ಐ ಜೊತೆಗೆ 8 ಜನ ಪೊಲೀಸರ ತಂಡ ಯುವತಿಗೆ ಭದ್ರತೆ ನೀಡಲು ಸಿದ್ಧವಾಗಿದೆ. ಯಾವ ದಿನ ಯುವತಿ ಕೋರ್ಟ್ ಗೆ ಹಾಜರಾಗಬೇಕು ಎನ್ನುವ ವಿಚಾರ ಇನ್ನೂ ತಿಳಿಯಬೇಕಿದೆ. ನೃಪತುಂಗಾ ಕೋರ್ಟ್ಗೆ ಭದ್ರತೆ ಹೆಚ್ಚಿಸಲಾಗುತ್ತಿದ್ದು, ಸಿಡಿ ಯುವತಿ ಇನ್ನೂ ಕೆಲವೇ ಕ್ಷಣಗಳಲ್ಲಿ ಯುವತಿ ಕೋರ್ಟ್ ಗೆ ಹಾಜರಾಗುವ ಸಾಧ್ಯತೆಗಳು ಹೆಚ್ಚಾಗಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights