ಕೊರೊನಾ ತಡೆಗೆ ಮೋದಿ ಸಪ್ತ ಸೂತ್ರ : ದೇಶವಾಸಿಗಳು ಸಹಕರಿಸಲು ಮನವಿ

ಲಾಕ್ ಡೌನ್ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಆರ್ಥಿಕ ಸಂಕಷ್ಟ ನೀಗಿಸುವುದರೊಂದಿಗೆ ರೈತರು ಹಾಗೂ ಕೂಲಿ ಕಾರ್ಮಿಕರ ಬಗ್ಗೆ ಸತತವಾಗಿ ಚರ್ಚೆ ನಡೆಯುತ್ತಿದೆ. ಆದರೆ ಲಾಕ್ ಡೌನ್ ಸಡಿಲಗೊಳಿಸಬೇಕಾದರೆ ಸಾರ್ವಜನಿಕರು ಸಪ್ತ ಸೂತ್ರಗಳನ್ನು ಪಾಲಿಸಲೇಬೇಕು. ಪ್ರಧಾನಿ ಮೋದಿ ಸಾರ್ವಜನಿಕರಲ್ಲಿ ಸಪ್ತ ಸೂತ್ರಗಳನ್ನು ಪಾಲಿಸಲು ಸೂಚಿಸಿ ಕೊರೊನಾ ಮುಕ್ತರಾಗಿ ಎಂದು ಕರೆ ಕೊಟ್ಟಿದ್ದಾರೆ.

1.ಮೇ3ರವರೆಗೆ ಲಾಕ್ ಡೌನ್ ಮುಮದುವರಿಕೆ 2.ಹೊಸ ಕೊರೊನಾ ಕೇಸ್ ಇಲ್ಲದ್ದಿದ್ರೆ ಸಡಿಲಿಕೆ 3.ಹಾಟ್ ಸ್ಪಾಟ್ ಗಳಲ್ಲಿ ಇನ್ನಷ್ಟು ಬಿಗಿ ಕ್ರಮ 4.ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಪಾಲಿಸಿ 5.ಹಿರಿಯರ ಬಗ್ಗೆ ಜಾಗ್ರತೆ ವಹಿಸಿ 6.ಮನೆಯಲ್ಲಿಯೇ ಮಾಸ್ಕ್ ತಯಾರಿಸಿ 7.ಆಯುಷ್ ಸಚಿವಾಲಯ ನಿರ್ದೇಶನ ಪಾಲಿಸಿ 8.ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಿ 9.ಬಡವರಿಗೆ ಊಟ ಕೊಡಿ 10.ಕೆಲಸದಿಂದ ತೆಗೆದು ಹಾಕಬೇಡಿ 11.ವೈದ್ಯರಿಗೆ, ಪೌರ ಕಾರ್ಮಿಕರು, ಪೊಲೀಸರಿಗೆ ಗೌರವ ಕೊಡಿ

ಕೊರೊನಾ  ತಡೆಗೆ ಮೇ.3ರ ವರೆಗೆ ಸಾರ್ವಜನಿಕರು ಸಹಕರಿಸಬೇಕಾಗಿ ಮೋದಿ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಲಾಕ್ ಡೌನ್ ಸಡಿಲಗೊಳಸಬೇಕಾದರೆ ಹೊಸ ಪ್ರಕರಣಗಳು ಹುಟ್ಟದಂತೆ ನೋಡಿಕೊಳ್ಳಬೇಕು. ಕೊರೊನಾ ನಿಯಂತ್ರಣದಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಆದರೆ ನಮ್ಮ ದೇಶ ಸುಸಜ್ಜಿತವಾಗಿ ಇರಬೇಕಾದರೆ ನಾವು ಲಾಕ್ ಡೌನ್ ಮುಮದುವರಿಸಲೇಬೇಕಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಲೇಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

ಹೊಸ ಕೇಸ್ ದಾಖಲಾಗದೇ ಇದ್ದರೆ, ಹಾಟ್ ಸ್ಪಾಟ್ ಗಳಾಗದೇ ಇದ್ದರೆ ಅಂತಹ ಸ್ಥಳಗಳಲ್ಲಿ ಷರತ್ತುಬದ್ಧ ಸಡಿಲಿಕೆ ಮಾಡಲಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights