ಕಾಶ್ಮೀರದ ಕೌನ್ಸಿಲರ್‌ಗಳ ಸಭೆಯಲ್ಲಿ ಭಯೋತ್ಪಾದಕರ ದಾಳಿ : ಓರ್ವ ಕೌನ್ಸಿಲರ್, ಪಿಎಸ್ಒ ಸಾವು..!

ಕಾಶ್ಮೀರದ ಸೊಪೋರ್‌ನಲ್ಲಿ ಬಿಡಿಸಿ ಅಧ್ಯಕ್ಷೆ ಫರೀದಾ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲರ್‌ಗಳ ಸಭೆಯಲ್ಲಿ ಭಯೋತ್ಪಾದಕರು ದಾಳಿ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸೊಪೋರ್ ಪ್ರದೇಶದಲ್ಲಿ ಸೋಮವಾರ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ (ಬಿಡಿಸಿ) ಅಧ್ಯಕ್ಷೆ ಫರೀದಾ ಖಾನ್ ಅವರ ಮೇಲೆ ಭಯೋತ್ಪಾದಕರು ಹಲ್ಲೆ ನಡೆಸಿದ್ದಾರೆ. ಫರೀದಾ ಖಾನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಭಯೋತ್ಪಾದಕ ದಾಳಿಯಲ್ಲಿ ಒಬ್ಬರು ಕೌನ್ಸಿಲರ್ ಮತ್ತು ಒಬ್ಬ ಪಿಎಸ್ಒ ಸಾವನ್ನಪ್ಪಿದ್ದಾರೆ. ಬಿಜೆಪಿ ಮುಖಂಡ ಫರೀದಾ ಖಾನ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಬಿಡಿಸಿ ಅಧ್ಯಕ್ಷರ ಮೇಲೆ ದಾಳಿ ನಡೆದ ನಂತರ ಈ ಪ್ರದೇಶದಲ್ಲಿ ಪಡೆಗಳನ್ನು ನಿಯೋಜಿಸಲಾಗಿದೆ.

ಈ ಭಯೋತ್ಪಾದಕ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಶಫ್ಕತ್ ಅಹ್ಮದ್ ಮತ್ತು ಕೌನ್ಸಿಲರ್ ರಿಯಾಜ್ ಅಹ್ಮದ್ ಹುತಾತ್ಮರಾದರು ಮತ್ತು ಕೌನ್ಸಿಲರ್ ಶಮ್ಸ್-ಉದ್-ದಿನ್ ಪೀರ್ ಗಾಯಗೊಂಡರು. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇಬ್ಬರು ಉಗ್ರರು ಹತ್ತಿರದ ಕಟ್ಟಡದಲ್ಲಿ ಸಿಕ್ಕಿಬಿದ್ದಿದ್ದಾರೆಂದು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights