ಪೂರ್ವ ಲಡಾಖ್ ಗಡಿಯಲ್ಲಿ ಡ್ರ್ಯಾಗನ್ ಚೀನಾ ಪತ್ತೆ ಕಿರಿಕ್ : ಯಾರ ಬಂಧನವೂ ಆಗಿಲ್ಲ ಎಂದ ಕೇಂದ್ರ ಸರ್ಕಾರ!

ಪೂರ್ವ ಲಡಾಖ್ ಗಡಿಯಲ್ಲಿ ಡ್ರ್ಯಾಗನ್ ಚೀನಾ ಪತ್ತೆ ತಕರಾರು ತೆಗೆದಿದೆ. ಚೀನಾ ಮಾಡಿದ್ದ ಕಿರಿಕ್ ನಿಂದಾಗಿ ಉಂಟಾಗಿದ್ದ ಉದ್ವಿಗ್ನತೆಯನ್ನು ಇತ್ತೀಚೆಗಷ್ಟೇ ಎರಡೂ ಸೇನೆಗಳು ಪರಸ್ಪರ ಒಪ್ಪಂದದಂತೆ ಹಿಂದೆ ಸರಿಯುವ ಮೂಲಕ ತಣ್ಣಗಾಗಿತ್ತು. ಎಲ್ಲವೂ ಮುಗಿದೋಯ್ದು ಎನ್ನುವ ಹೊತ್ತಿಗೆ ಮತ್ತೆ ಚೀನಾ ಅರುಣಾಚಲ ಪ್ರದೇಶದಲ್ಲಿ ಕ್ಯಾತೆ ತೆಗೆದಿದೆ ಎಂದು ವರದಿಗಳು ತಿಳಿಸಿವೆ.

ಕೊರೊನಾ ಸೋಂಕನ್ನು ಇಡೀ ವಿಶ್ವಕ್ಕೆ ಹರಡಿದ ಚೀನಾ ಸೇನೆ ಮತ್ತೆ ಭಾರತದೊಂದಿಗೆ ದಾಳಿಗೆ ಮುಂದಾಗಿದೆ. ಕಳೆದ ವಾರ ಭಾರತ ಮತ್ತು ಚೀನಾ ಸೈನಿಕರು ಮತ್ತೊಮ್ಮೆ ಮುಖಮುಖಿಯಾಗಿದ್ದಾರೆ. ಈ ವೇಳೆ 200ಕ್ಕೂ ಹೆಚ್ಚು ಚೀನಾ ಸೈನಿಕರು ಅರುಣಾವಲ ಪ್ರದೇಶದಲ್ಲಿರುವ ಲೈನ್ ಆಫ್ ಆ್ಯಕ್ಷುವಲ್ ಕಂಟ್ರೋಲ್ ದಾಟಿ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ್ದರು. ಇದನ್ನ ಗಮನಿಸಿದ ಭಾರತೀಯ ಯೋಧರು, ಪಿಎಲ್ಎ ಸೈನಿಕರನ್ನು ತಡೆದಿದ್ದಾರೆ. ಈ ಸಮಯದಲ್ಲಿ ದೊಡ್ಡ ಮಟ್ಟದ ದಾಳಿ ಮತ್ತು ಪ್ರತಿ ದಾಳಿ ನಡೆದಿದೆ.

ಈ ವೇಳೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಸ್ಥಳೀಯ ಸೇನಾ ಕಮಾಂಡರ್ ಗಳು ಪರಸ್ಪರ ಮಾತುಕತೆ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯೊಂದಿಗೆ ನಡೆದ ಮುಖಾಮುಖಿಯಲ್ಲಿ ಯಾವುದೇ ಚೀನಾ ಸೈನಿಕರನ್ನು ಬಂಧಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.