ಡಾ.ರಾಜಕುಮಾರ್ ಮೊಮ್ಮಗಳು ಅಭಿನಯದ ‘ನಿನ್ನ ಸನಿಹಕೆ’ ಸಿನಿಮಾ ಬಿಡುಗಡೆಗೆ ಕರೆಂಟ್ ಶಾಕ್!

ದೊಡ್ಮನೆ ಮೊಮ್ಮಗಳು ಧನ್ಯಾರಾಮ್ ಕುಮಾರ್ ಹಾಗು ಸೂರಜ್ ಗೌಡ ಅಭಿನಯದ ‘ನಿನ್ನ ಸನಿಹಕೆ’ ಸಿನಿಮಾ ಬಿಡುಗಡೆಗೆ ವಿಘ್ನ ಎದುರಾಗಿದೆ.

ಹೌದು.. ರಾಜ್ ಕುಮಾರ್ ಮೊಮ್ಮಗಳು ಧನ್ಯಾರಾಮ್ ಕುಮಾರ್ ಹಾಗು ಸೂರಜ್ ಗೌಡ ಅಭಿನಯದ ನಿನ್ನ ಸನಿಹಕೆ ಸಿನಿಮಾ ಇಂದು ಬಿಡುಗಡೆ ಮಾಡಬೇಕಿತ್ತು. ಆದರೆ ಸಂತೋಷ್ ಚಿತ್ರಮಂದಿರದಲ್ಲಿ ‘ನಿನ್ನ ಸನಿಹಕೆ’ ಚಿತ್ರದ ಇಂದಿನ‌ ಪ್ರದರ್ಶನ ರದ್ದು ಮಾಡಲಾಗಿದೆ.

ವಿದ್ಯುತ್ ಸಮಸ್ಯೆಯಿಂದ ಇಂದಿನ ಶೋಗಳನ್ನ ಚಿತ್ರಮಂದಿರದವರು ಕ್ಯಾನ್ಸಲ್ ಮಾಡಿದ್ದಾರೆ. ಶೋ ಕ್ಯಾನ್ಸಲ್ ಆಗಿರೋ ಬಗ್ಗೆ ಚಿತ್ರತಂಡಕ್ಕೆ ಗೊತ್ತೇ ಇಲ್ಲ. ಇದರಿಂದ ಮೊದಲ ದಿನ ಮೊದಲ ಶೋ ನೋಡೊಕೆ ಬಂದಿರೋ ಚಿತ್ರತಂಡಕ್ಕೆ ನಿರಾಶೆಯಾಗಿದೆ.

ಅಲ್ಲದೆ ಸಿನಿಮಾ ನೋಡೊಕೆ ಬಂದಿರೋ ಪ್ರೇಕ್ಷಕರಿಗೂ ನಿರಾಶೆಯಾಗಿದೆ. ಕಳೆದ ಮೂರುದಿನಗಳಿಂದ ಸಂತೋಷ್ ಚಿತ್ರಮಂದಿರದಲ್ಲಿ ಕರೆಂಟ್ ಇಲ್ಲ. ಟ್ರಾನ್ಸ್ ಫಾರ್ಮರ್ ಸಮಸ್ಯೆ ಜೊತೆಗೆ ಜನರೇಟರ್ ಕೂಡ ವರ್ಕ್ ಆಗ್ತಿಲ್ಲ.

ಅದ್ರು ಸಿನಿಮಾ ರಿಲೀಸ್ ಗೆ ಕಮಿಟ್ ಆಗಿದ್ದ ಚಿತ್ರಮಂದಿರದವರು ಇಂದು ಸಿನಿಮಾ ರಿಲೀಸ್ ಆಗೋದು ಗೊತ್ತಿದ್ರು ವಿದ್ಯುತ್ ಸಮಸ್ಯೆ ಸರಿಪಡಿಸಿಕೊಂಡಿಲ್ಲ. ಹೀಗಾಗಿ ಸಿನಿಮಾ ಪ್ರದರ್ಶನ ಕಾಣದೆ ರದ್ದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights