ಸಚಿವ ಉಮೇಶ್‌ ಕತ್ತಿ ವಿರುದ್ಧ ಬಿಜೆಪಿಗರಿಂದಲೇ ಅಸಮಾಧಾನ; ಸುತ್ತು ಹೋಗು ಎಂದದ್ದು ದುರ್ದೈವದ ಸಂಗತಿ ಎಂದ ಸಚಿವ ಬಿ.ಸಿ ಪಾಟೀಲ್‌!

ಬೆಳಗಾವಿ ಮೂಲಕ ರೈತರೊಬ್ಬರು ಪಡಿತರ ಅಕ್ಕಿ ಕಡಿಮೆ ಮಾಡಿದ್ದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಕ್ಕಾಗಿ, ನೀವು ಸತ್ತುಹೋಗುವುದೇ ಒಳ್ಳೆಯದು ಎಂದು ಹೇಳಿರುವ ಆಹಾರ ಸಚಿವ ಉಮೇಶ ಕತ್ತಿ ಅವರ ಹೇಳಿಕೆ ದುರ್ದೈವದ ಸಂಗತಿ. ಅವರು ಹಾಗೆ ಹೇಳಬಾರದಿತ್ತು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್‌ ಕತ್ತಿ ಅವರು ಆ ರೀತಿ ಮಾತನಾಡಬಾರದಿತ್ತು. ಅವರು ಹಾಗೆ ಹೇರುವುದು ಸರಿಯಲ್ಲ. ಅವರ ಹೇಳಿಕೆ ದುರ್ದೈವದ ಸಂಗತಿ ಎಂದು ಹೇಳಿದ್ದಾರೆ.

ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರವೇನೂ ವಿಫಲವಾಗಿಲ್ಲ. ನಾವು ಸೋಂಕು ಉಲ್ಭಣವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಅದು ನಾಲ್ಕು ಪಟ್ಟು ಜಾಸ್ತಿಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಇನ್ನು ಬೆಂಗಳೂರಿನಿಂದ ಹಳ್ಳಿಗಳಿಗೆ ಜನರು ತೆರಳುತ್ತಿದ್ದಾರೆ. ಈಗ ಹಳ್ಳಿಯಲ್ಲೂ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಯತ್ನಿಸುತ್ತಿದೆ ಎಂದಿದ್ದಾರೆ.

ನನ್ನ ಹಿರೇಕೆರೂರು ಕ್ಷೇತ್ರದಲ್ಲಿ ಕೋವಿಡ್‌ನಿಂದ ಬಳಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ವೆಚ್ಚ ಭರಿಸಲಾಗದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದೇನೆ. ನನ್ನಂತೆಯೇ ಇತರೆ ಜನಪ್ರತಿನಿಧಿಗಳು ತಮ್ಮ ಕೈಲಾದಷ್ಟು ಬಡವರಿಗೆ ಕೋವಿಡ್ ಸಂದರ್ಭದಲ್ಲಿ ತಮ್ಮದೇ ರೀತಿಯಲ್ಲಿ ಸಹಾಯಸ್ತ ಚಾಚಬೇಕು ಎಂದರಲ್ಲದೇ, ಕೊಪ್ಪಳ ಜಿಲ್ಲೆಯಲ್ಲಿ ಸೋಂಕಿತರಿಗೆ ಬೆಡ್, ಆಕ್ಸಿಜನ್ ಕೊರತೆ ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights